ವಿಷಮಸ್ಥಿತಿಗೆ ವಿಶ್ವೇಶ್ವರತೀರ್ಥ ಸ್ವಾಮೀಜಿ । ಶತಮಾನದ ಸಂತನ ಚೇತರಿಕೆಗೆ ಪ್ರಾರ್ಥನೆಯೊಂದೇ ಬಾಕಿ ಉಳಿದ ಪರಿಹಾರ!

0 5

ಹಿರಿಯ ಸಂತಶ್ರೀ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ದೇಹಸ್ಥಿತಿ ಚಿಂತಾಜನಕವಾಗಿದೆ. ಅವರು ಕಳೆದ ಹತ್ತು ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ದಿನದಿಂದ ದಿನಕ್ಕೆ ಆರೋಗ್ಯ ಸ್ಥಿತಿ ವಿಷಮಿಸುತ್ತಲೇ ಬಂದಿದೆ.

ಮಣಿಪಾಲ ಆಸ್ಪತ್ರೆಯಿಂದ ನಿನ್ನೆ ಬೆಂಗಳೂರಿನ ವಿದ್ಯಾಪೀಠಕ್ಕೆ ಸ್ಥಳಾಂತರಿಸಲಾಗಿದೆ.
ವೈದ್ಯರು ಮತ್ತು ಅವರ ಭಕ್ತರು ಶ್ರೀಗಳ ಪರಿಸ್ಥಿತಿ ಸುಧಾರಿಸುವ ಅಶೆ ಕ್ಷೀಣಿಸಿದ ಪರಿಣಾಮ, ಈಗ ಶ್ರೀಗಳ ದರ್ಶನಕ್ಕೆ ಅನುಮತಿ ನೀಡಲಾಗಿದೆ. ವಿದ್ಯಾಪೀಠದಲ್ಲಿದ್ದುಕೊಂಡೆ ಅಲ್ಲಿಂದಲೇ ಚಿಕಿತ್ಸೆಯೂ ಮುಂದುವರೆಯಲಿದೆ. ಅಲ್ಲದೆ ಶ್ರೀಗಳ ಕೃಷ್ನಪೂಜೆಯ ಸಾಮಾಗ್ರಿ ಗಳನ್ನೂ ವಿದ್ಯಾಪೀಠಕ್ಕೆ ಶಿಫ್ಟ್ ಮಾಡಲಾಗಿದೆ.
ಅವರನ್ನು ನೋಡಲು ಭಕ್ತರು ಮತ್ತು ವರ್ಗದಿಂದ ಒತ್ತಾಯ ಹೆಚ್ಚಾಗಿತ್ತು.

ಬೆಳ್ಳಂಬೆಳಗ್ಗೆಯೆ ಸ್ವಾಮೀಜಿ ಯವರನ್ನು ನೋಡಲು ಜನರು ಸರತಿಸಾಲಿನಲ್ಲಿ ನಿಂತಿದ್ದು ಕಂಡುಬಂತು. ದೂರದೂರದ ಊರುಗಳಿಂದ ಜನಗಣ ಜಮಾಯಿಸುತ್ತಿದ್ದಾರೆ. ಅಲ್ಲದೆ ಅಜ್ಜರಕಾಡು ಸ್ಟೇಡಿಯಂನಲ್ಲಿ ಶ್ರೀಗಳನ್ನು ನೋಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಕೇಂದ್ರ ರಾಸಾಯಿಕ ಮತ್ತು ರಸಗೊಬ್ಬರ ಮಂತ್ರಿ ಡೀ ವಿ ಸದಾನಂದ ಗೌಡರು ಬೆಳಿಗ್ಗೆ ಬಂದು ಸ್ವಾಮೀಜಿಯ ದರ್ಶನ ಮಾಡಿಹೋದರು. ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಶೀಘ್ರವಾಗಿ ಸ್ವಾಮೀಜಿಯವರನ್ನು ದರ್ಶನಮಾಡಲಿದ್ದಾರೆ.

Leave A Reply