ಭೂಮಿ ಕಂಪಿಸಿದೆ । ಪೇಜಾವರ ಮಠಾಧೀಶ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಇನ್ನು ಇತಿಹಾಸ !

ಭೂಮಿ ಕಂಪಿಸಿದೆ. ಕಾಲನ ಕೈ ಮೇಲಾಗಿದೆ. ಹಿರಿಯ ಶತಮಾನದ ಸಂತಶ್ರೀ ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಈಗ ತಾನೇ ಅವರು ಕೃಷ್ಣನಲ್ಲಿ ಲೀನರಾಗಿರುವ ಸುದ್ದಿ ಬಂದಿದೆ.

ಅವರು ಕಳೆದ ಹತ್ತು ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ದಿನದಿಂದ ದಿನಕ್ಕೆ ಆರೋಗ್ಯ ಸ್ಥಿತಿ ವಿಷಮಿಸುತ್ತಲೇ ಬಂದಿತ್ತು.
ಭಕ್ತವೃಂದ ಸ್ವಾಮೀಜಿಯವರು ಗುಣಮುಖರಾಗಿ ವಾಪಸ್ಸು ಬರುತ್ತಾರೆಂದು ಪೂಜೆ ಹೋಮ ಹವನ ಕೈಗೊಂಡಿದ್ದರು. ಆದರೆ ಯಾವುದೂ ಫಲ ನೀಡಲಿಲ್ಲ.

Leave A Reply

Your email address will not be published.