ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ ಡಿಸೆoಬರ್ 29 ರಿಂದ ಜನವರಿ 2 ರವರೆಗೆ ಕಳಿಯಾಟ ಮಹೋತ್ಸವ

0 13

ಉತ್ತರ ಕೇರಳ ಹಾಗೂ ದಕ್ಷಿಣ ಕರ್ನಾಟಕದ ಪರಮೋನ್ನತ ನ್ಯಾಯ ದೇಗುಲ ಎಂದು ಕರೆಯಲ್ಪಡುವ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದಲ್ಲಿ ವಾರ್ಷಿಕ ಕಳಿಯಾಟ ಮಹೋತ್ಸವವು ಡಿಸೆoಬರ್ 29 ರಿಂದ ಜನವರಿ 2 ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಕಳಿಯಾಟ ಮಹೋತ್ಸವದ ಅಂಗವಾಗಿ ಕೇರಳ ಹಾಗೂ ಕರ್ನಾಟಕದ ವಿವಿಧ ಪ್ರದೇಶಗಳಿಂದ ಸಹಸ್ರಾರು ಭಕ್ತರು ಭಾಗವಹಿಸಲಿದ್ದು, ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಸಕಲ ಸಿದ್ಧತೆ ಮಾಡಲಾಗಿದೆ ಎಂದು ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನದ ಆಡಳಿತ ಸಮಿತಿಯ ಪ್ರದಾನ ಕಾರ್ಯದರ್ಶಿ ಕೆ. ಪಿ ಮೋಹನನ್ ನಾಯರ್ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು

ಕಾಸರಗೋಡು ನಗರದಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿರುವ ಮುಳಿಯಾರು ಗ್ರಾಮದ ಹೃದಯ ಭಾಗದಲ್ಲಿರುವ ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನಕ್ಕೆ ಹಲವು ಶತಮಾನಗಳ ಇತಿಹಾಸದೊಂದಿಗೆ ಭಕ್ತ ಜನರ ಪುಣ್ಯ ಕ್ಷೇತ್ರ ವಾಗಿದೆ. ಐದು ದಿನ ರಾತ್ರಿಗಳಲ್ಲಿ ನಡೆಯುವ ಕಳಿಯಾಟ ಮಹೋತ್ಸವ ದಲ್ಲಿ ತುಳುನಾಡಿನ ರಾಜದೈವಗಳಾದ ಪೂಮಾಣಿ, ಕಿನ್ನಿಮಾಣಿ ಕಾರಣಿಕದ ಪ್ರತೀಕಗಳಾದ ಶೈವ ವೈಷ್ಣ ವಂಶದ ದೈವಗಳು ಇಲ್ಲಿ ನಾಲ್ವರ್ ದೈವಗಳು ಮತ್ತು ಇರ್ವರು ಭೂತಗಳೆಂಬ ಹೆಸರಲ್ಲಿ ಆರಾಧಿಸಿಕೊಂಡು ಬರುತ್ತಿರುವುದು. ಎಂಟು ಶತಮಾನಗಳ ಇತಿಹಾಸ ಹೊಂದಿರುವ ಈ ದೈವಸ್ಥಾನಕ್ಕೆ ಪ್ರತಿ ದಿನ ಜಾತಿ ಮತ ಧರ್ಮ ಭೇದ ಭಾವವಿಲ್ಲದೆ ಒಂದೇ ವಿಶ್ವಾಸದೊಂದಿಗೆ ಪ್ರಾರ್ಥನೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಯಿಂದ ಸಂತೃಪ್ತರಾಗುತ್ತಾರೆ.

ಕಾನತ್ತೂರು ಪುದುಕೋಡಿ ನಾಯರ್ ತರವಾಡಿನವರಿಗೆ ಈ ದೈವಸ್ಥಾನದ ಆಡಳಿತ ನಡೆಸುವ ಹಕ್ಕು ಹೊಂದಿದ್ದಾರೆ. ಪ್ರಸ್ತುತ ಈ ತರವಾಡಿನ ಸಿ ತಾವಾಡಿ ಯವರು ಆಡಳಿತ ನಡೆಸುತ್ತಿದ್ದಾರೆ. ಕೆ. ಪಿ ಮಾಲಿಂಗ ನಾಯರ್ ಮೊಕ್ತೇಸರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಬಾರಿಯ ಕಳಿಯಾಟದ ಯಶಸ್ವಿಗಾಗಿ ಊರ ಭಕ್ತಾದಿಗಳ ಮತ್ತು ತರವಾಡಿನವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಉತ್ಸವಕ್ಕೆ ಆಗಮಿಸುವ ಎಲ್ಲಾ ಭಕ್ತ ಜನರಿಗೂ ಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆ. ಪಿ ಪವಿತ್ರನ್, ಹಾಗೂ ಕಚೇರಿ ಕಾರ್ಯನಿರ್ವಾಹಕ ಶ್ರೀಧರ್ ಬಿ. ಎಸ್ ಉಪಸ್ಥಿತರಿದ್ದರು.

ಕಾರ್ಯಕ್ರಮಗಳ ವಿವರ

ಡಿಸoಬರ್ 29 ರಂದು ಅಪರಾಹ್ನ ಮೂಲಸ್ಥಾನದಿಂದ ಭಂಡಾರ ಆಗಮನದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುವುದು. ರಾತ್ರಿ ಎಳೆಯೋರ್ ದೈವಗಳ ನೇಮ ನಡೆಯಲಿದೆ. ಡಿಸoಬರ್ 30 ರಂದು ಮುಂಜಾನೆ ಚಾಮುಂಡಿ ದೈವ, ಬೆಳಗ್ಗೆ ಪಂಜುರ್ಲಿ ( ಉಗ್ರಮೂರ್ತಿ ) ದೈವದ ಕೋಲ ನಡೆಯಲಿದ್ದು, ಸಂಜೆ ಮೂತೋರ್ ದೈವಕೊಲದ ಬಳಿಕ ಸಿಡಿಮದ್ದು ಪ್ರದರ್ಶನ ನಡೆಯಲಿದೆ. ರಾತ್ರಿ ಬoಬೇರಿಯಾ, ಮಾಣಿಚ್ಚ ದೈವಗಳ ಕೋಲ ನಡೆಯಲಿದೆ.

ಡಿಸೆoಬರ್ 31 ರಂದು ಮುಂಜಾನೆ ಚಾಮುಂಡಿ ದೈವ, ಬೆಳಗ್ಗೆ ಕುಡಂಕಲೆಯ ದೈವಗಳ ಸಂಚಾರ, ಬಳಿಕ ಪಂಜುರ್ಲಿ (ಉಗ್ರಮೂರ್ತಿ ) ದೈವಗಳ ಕೋಲ ನಡೆಯಲಿದ್ದು, ರಾತ್ರಿ ಪಾಷಾಣ ಮೂರ್ತಿ ದೈವ ನಡೆಯಲಿದೆ.
ಜನವರಿ 1 ರಂದು ಬೆಳಗ್ಗೆ ರಕ್ತೇಶ್ವರಿ ದೈವ, ತುಲಾಭಾರ ಸೇವೆ, ಅಪರಾಹ್ನ ವಿಷ್ಣುಮೂರ್ತಿ ದೈವ ದರ್ಶನ ಪ್ರೇತ ವಿಮೋಚನ ನಡೆಯಲಿದೆ. ಜನವರಿ 2 ರಂದು ಬೆಳಗ್ಗೆ ರಕ್ತೇಶ್ವರಿ ದೈವ, ತುಲಾಭಾರ ಸೇವೆ, ಅಪರಾಹ್ನ ವಿಷ್ಣುಮೂರ್ತಿ ದೈವ ಪ್ರೇತ ವಿಮೋಚನೆ ನಡೆಯಲಿದೆ. ಜನವರಿ 3 ರಂದು ಬೆಳಗ್ಗೆ ಭಂಡಾರ ನಿರ್ಗಮನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

Leave A Reply