ಮುಂಬರುವ ಕ್ರಿಸ್ ಮಸ್ ಹಬ್ಬದ ಅಡ್ವಾನ್ಸ್ ವಿಷಸ್ | Top 10 quotes

ಕ್ರಿಸ್ ಮಸ್ ಹಬ್ಬಕಣ್ಣ ಮುಂದಿದೆ. ಜಗತ್ತಿನ ಬಹುಸಂಖ್ಯಾತರು ನಂಬುವ ಕ್ರಿಶ್ಚಿಯನ್, ಮತ್ತು ವಿಶ್ವಾದ್ಯಂತ ಸಡಗರದಿಂದ ವಾರಗಟ್ಟಲೆ ಆಚರಿಸುವ ಹಬ್ಬ ಕ್ರಿಸ್ ಮಸ್. ಇದೇ ಡಿಸೆ೦ಬರ್ 25, 2019 ವರ್ಷಗಳ ಹಿಂದೆ, ಏಸು ಕ್ರಿಸ್ತನ ಜನ್ಮವಾಯಿತು. ಕ್ರಿಸ್ತನ ಜಯಂತಿಯೇ ಕ್ರಿಸ್ ಮಸ್.

ಕ್ರಿಸ್‌ಮಸ್ ಎಂದರೇನು? ಅದು ಭೂತಕಾಲಕ್ಕೆ ಮೃದುತ್ವ, ವರ್ತಮಾನಕ್ಕೆ ಧೈರ್ಯ, ಭವಿಷ್ಯದ ಭರವಸೆ – ಆಗ್ನೆಸ್ ಎಂ. ಪಹ್ರೊ

ಕ್ರಿಸ್‌ಮಸ್ ಎಂದರೆ ಸಾರ್ವಕಾಲಿಕ ಸಮಯವನ್ನು ಹಿಡಿದಿಟ್ಟುಕೊಳ್ಳುವ ದಿನ- ಅಲೆಕ್ಸಾಂಡರ್ ಸ್ಮಿತ್

ಕ್ರಿಸ್‌ಮಸ್ ಎಂದರೆ ಒಂದು ರುತುಮಾನವಲ್ಲ. ಇದು ಒಂದು ಸುಂದರ ಭಾವನೆ – ಎಡ್ನಾ ಫೆರ್ಬರ್

ನಾವು ಕ್ರಿಸ್ಮಸ್ ಅನ್ನು ಸುಂದರವಾಗಿ ಆಚರಿಸೋಣ. ದುರಾಸೆಯನ್ನು ಬಿಟ್ಟುಬಿಡುತ್ತಾ – ಆನ್ ಗಾರ್ನೆಟ್ ಷುಲ್ಟ್ಜ್

ಯಾವುದೇ ಕ್ರಿಸ್ಮಸ್ ವೃಕ್ಷದ ಸುತ್ತಲಿನ ಉಡುಗೊರೆಗಳಲ್ಲಿ ಅತ್ಯತ್ತಮವಾದುದು ಒಗ್ಗೂಡಿ ಹಬ್ಬ ಆಚರಿಸುವ ಸಂತೋಷದ ಕುಟುಂಬ – ಬರ್ಟನ್ ಹಿಲ್ಸ್

ನಾವು ಹೃದಯದಿಂದ ಹೃದಯಕ್ಕೆ ಮಾತಾಡಿಕೊಂಡು, ಪರಸ್ಪರ ಕೈ ಕೈ ಹಿಡಿದುಕೊಂಡು ಆತ್ಮೀಯರಾಗಿರುವವರೆಗೆ ಕ್ರಿಸ್‌ಮಸ್ ನಿರಂತರವಾಗಿ ಇರುತ್ತದೆ – ಡಾ. ಸೆಯುಸ್

ಕ್ರಿಸ್‌ಮಸ್ ಅವಶ್ಯಕತೆಯಾಗಿದೆ. ನಾವು ಬೇರೆ ಯಾವುದೊ ಕಾರಣಕ್ಕೆ ಇಲ್ಲಿದ್ದೇವೆ ಎಂದು ವರ್ಷದ ಕನಿಷ್ಠ ಒಂದು ದಿನವಾದರೂ ನೆನಪಿಸಲು – ಎರಿಕ್ ಸೆವೆರಿಡ್

ಕ್ರಿಸ್‌ಮಸ್‌ನ ಬಗೆಗಿನ ನನ್ನ ಕಲ್ಪನೆಯನ್ನು ನೀವು ಹೇಗೆ ಬೇಕಾದರೂ ( ಹಳೆಯ ಶೈಲಿ ಅಥವಾ ಮಾಡರ್ನ್ ) ಕರೆಯಿರಿ, ಅದು ಬಹಳ ಸರಳವಾಗಿದೆ : ಇತರರನ್ನು ಪ್ರೀತಿಸುವುದು- ಬಾಬ್ ಹೋಪ್

ಕ್ರಿಸ್ಮಸ್ ದಿನದ ಸುವಾಸನೆಗಳು ನಮ್ಮ ಬಾಲ್ಯದ ನೆನಪುಗಳ ಸುವಾಸನೆಗಳು – ರಿಚರ್ಡ್ ಪಾಲ್ ಇವಾನ್ಸ್

ಇಡೀ ವಿಶ್ವವನ್ನು ಪ್ರೀತಿಯ ಪಿತೂರಿಯಲ್ಲಿ ಹಿಡಿದಿಡುವ ಸಂಧರ್ಭವೇ ಕ್ರಿಶ್ ಮಸ್ – ಹ್ಯಾಮಿಲ್ಟನ್ ರೈಟ್ ಮಾಬಿ

ಪ್ರವೀಣ್ ಫೆರ್ನಾಂಡಿಸ್, ಬೆಳ್ತಂಗಡಿ

Leave A Reply

Your email address will not be published.