ಭವ್ಯ ಭಾರತವನ್ನು ‘ ರೇಪ್ ಇನ್ ಇಂಡಿಯಾ ‘ ಮಾಡಿದ ಸೋನಿಯಾರ ಪುತ್ರ ರತ್ನ ರಾಹುಲ್ ಗಾಂಧಿ

ಅನಿವಾರ್ಯವಾಗಿ ಮತ್ತೆ ಅದೇ ರೇಪ್ ನ ಬಗ್ಗೆ ಬರೆಯಬೇಕಾಗಿದೆ. ರೇಪ್ ಮತ್ತು ಗಲ್ಲು ಶಿಕ್ಷೆ ಇವತ್ತಿನ ಟ್ರೆಂಡಿಂಗ್ ಅನ್ನಿಸುವಂತಹ ವಿಷಯಗಳು. ದೆಹಲಿಯಲ್ಲಿ, ನಿರ್ಭಯ ಹಂತಕರ ಗಲ್ಲು ಶಿಕ್ಷೆ ಸಮೀಪಿಸುತ್ತಿದ್ದರೆ, ಆಂಧ್ರದಲ್ಲಿ ದಿಶಾ 2019 ಎಂಬ, 21 ದಿನದಲ್ಲಿ ರೇಪ್ ಗೆ ಗಲ್ಲು ಶಿಕ್ಷೆಯ ನ್ಯಾಯ ನೀಡುವ ಕಾನೂನು ಜಾರಿಗೆ ಬಂದಿದೆ.

ಅತ್ತ ದೆಹಲಿಯಲ್ಲಿ ಕಾಂಗ್ರೆಸ್ ನ ರಾಹುಲ್ ಗಾಂಧೀ ಮತ್ತೆ ಎಡವಿದ್ದಾರೆ. ಅವರು ” ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾಗೆ ಕರೆ ನೀಡಿದ್ದರು. ಈಗ ದೇಶ ” ರೇಪ್ ಇನ್ ಇಂಡಿಯಾ” ಆಗಿದೆ” ಎಂದು ಜಾರ್ಖಂಡ್ ನ ಸಮಾರಂಭವೊಂದರಲ್ಲಿ ಅವರು ಹೇಳಿದ್ದರು. ಅದು ಸಂಸತ್ತಿನಲ್ಲಿ ಕಿಚ್ಚೆಬ್ಬಿಸಿದೆ.

‘ ಮೇಕ್ ಇನ್ ಇಂಡಿಯಾ ‘ ಅಂದರೆ ನಾವು ಭಾರತದಲ್ಲೇ ತಯಾರುಮಾಡುವುದು. ಹಾಗಂತ ಅದರ ಅರ್ಥ. ‘ ರೇಪ್ ಇನ್ ಇಂಡಿಯಾ ‘ ಅಂದರೆ ಹಾಗಾದರೆ ಏನರ್ಥವಾಗುತ್ತದೆ ? ಆ ಸ್ಟೇಟ್ ಮೆಂಟ್ ಉಚಿತವೇ? ‘ “ರಾಹುಲ್ ಗಾಂಧಿಯ ಹೇಳಿಕೆ, ದೇಶದಲ್ಲಿ ರೇಪ್ ಅನ್ನು ಹೆಚ್ಚಿಸುವ ಕರೆ ನೀಡಿದಂತಿದೆ. ಭಾರತದ ಪ್ರತಿ ಪುರುಷನೂ ಅತ್ಯಾಚಾರಿಯೇ ? ” ಎಂದು ಬಿಜೆಪಿಯ ಸ್ಮೃತಿ ಇರಾನಿ ಸಂಸತ್ತಿನಲ್ಲಿ ಪ್ರಶ್ನಿಸಿದ್ದಾರೆ.

ಸೋನಿಯಾಗಾಂಧಿ ಯಾವ ವಿಷಗಳಿಗೆಯಲ್ಲಿ ಇಂತಹ ದಡ್ಡ ಮಗನನ್ನು ಹೆತ್ತರೋ ಗೊತ್ತಿಲ್ಲ. ಆ ಪುತ್ರರತ್ನದಿಂದ ದೇಶಕ್ಕೆ ಒಳ್ಳೆಯದಾಗುವುದು ಬಿಡಿ, ಸೋನಿಯಾ ಮತ್ತು ಟೀಮಿಗೆ ನಿರಂತರ ತೊಂದರೆ ತಪ್ಪಿದ್ದಲ್ಲ.

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.