ರೇಪ್ ನಂತೆಯೇ ಹನಿಟ್ರ್ಯಾಪ್ ಗೆ ಕೂಡಾ ಗಲ್ಲು ಶಿಕ್ಷೆಯಾಗಬೇಕು । ಈ ದೇಶದಲ್ಲಿ ಮಹಿಳೆಯರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ !

ಕಾನೂನಿಗೆ ಕಣ್ಣಿಲ್ಲ. ಭಾಷೆಯಿಲ್ಲ. ಈಗ ಲಿಂಗ ಕೂಡ ಇಲ್ಲ ಎಂದು ಈಗ ನಾವು ನಿರೂಪಿಸಬೇಕಿದೆ. ನಮ್ಮ ಕಾನೂನು ಪುರುಷರಿಗೆ ಒಂದು ರೀತಿ, ಸ್ತ್ರೀಯರಿಗೆ ಇನ್ನೊಂದು ರೀತಿಯಾಗಿದೆ. ಪುರುಷರು ಮಾಡುವ ತಪ್ಪಿಗೆ ಶಿಕ್ಷೆ ಘೋರವಾಗಿದೆ. ಆದರೆ ಮಹಿಳೆಯರಿಗೆ ಯಾಕೆ ವಿನಾಯಿತಿ?

ರೇಪ್ ಒಂದು ವ್ಯಕ್ತಿಯ ಮೇಲಣ ಮಾನಸಿಕ ಮತ್ತು ದೈಹಿಕ ದೌರ್ಜನ್ಯ. ಅದು ಅಕ್ಷಮ್ಯ. ಅದನ್ನು ನಿಲ್ಲಿಸಲೇ ಬೇಕು. ಆದರೆ ಅದನ್ನು ನಿಲ್ಲಿಸುವ ದೃಷ್ಠಿಯಲ್ಲಿ ದೇಶದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಬೀದಿಗೆ ಇಳಿದು ಪ್ರತಿಭಟಿಸಿದರೆ ಅದರಿಂದ ಏನೇನೂ ಪ್ರಯೋಜನವಿಲ್ಲ.

ಇವತ್ತು ದೆಹಲಿಯಲ್ಲಿ ನಿರ್ಭಯಾ ಹಂತಕರ ತಕ್ಷಣದ ಗಲ್ಲು ಶಿಕ್ಷೆಗೆ ಮಹಿಳೆಯರು ಬೀದಿಯಲ್ಲಿ ನಿಂತು ಚೀರಾಡುತ್ತಿದ್ದಾರೆ. ಅವರ ಕೋಪ ಸಾತ್ವಿಕವಾದುದು ; ಒಪ್ಪಿಕೊಳ್ಳಬೇಕು. ಆದರೆ, ಇದರಾಚೆಗೆ ನಾವು ನಿಂತು ಯೋಚಿಸಬೇಕಾಗಿದೆ.

ನಾನು ಒಂದು ಉದಾಹರಣೆಯನ್ನು ನೀಡುತ್ತೇನೆ. ಗಲ್ಲು ಶಿಕ್ಷೆಗೆ ಒಳಗಾಗುವ ಜನರೆಲ್ಲಾ ಬಡವರು. ಅವರಲ್ಲಿ ಹೆಚ್ಚಿನವರು ಅಭದ್ರ ಬಾಲ್ಯದಿಂದ ದೊಡ್ಡವರಾದವರು. ಹೆಚ್ಚಿನವರು ಹೈಸ್ಕೂಲು ದಾಟಿಲ್ಲ. ಮನೆಯಲ್ಲಿ ಆಸ್ತಿ ಪಾಸ್ತಿ ಇಲ್ಲ. ಮನೆಯಲ್ಲಿ ಆರ್ಥಿಕ ಭದ್ರತೆಯಿಲ್ಲ. ಅಪ್ಪ ಅಮ್ಮನಿಗೆ ಮಕ್ಕಳನ್ನು ಪ್ರೀತಿ ಮಾಡಲು ಸಮಯವಿಲ್ಲ. ಹೆತ್ತವರು ದಿನನಿತ್ಯ ದುಡಿದು ಆ ದಿನದ ಕೂಳಿಗೆ ಹಣ ಹೊಂಚುವವರು. ಮನೆಯಲ್ಲಿ ಬಡತನದ ಕಾರಣ ಮಕ್ಕಳಿಗೆ ಯಾವುದೇ ಶಿಕ್ಷಣ ಸಿಗುತ್ತಿಲ್ಲ. ಅವರ ಸುತ್ತ ಇರುವ ಜನರು ಕೂಡ ಅವರಂಥವರೇ ! ಹಾಗೆ ಬೆಳೆದ ಮಕ್ಕಳು, ಕೂಲಿ ಕೆಲಸಕ್ಕೆ, ಇಲ್ಲಾ ಗ್ಯಾರೇಜಿಗೆ, ಅಥವಾ ವಾಹನಗಳಲ್ಲಿ ಕ್ಲೀನರುಗಳಾಗಿ ಕೆಲಸಕ್ಕೆ ಸೇರುತ್ತಾರೆ. ಅಲ್ಲಿ ಅವರಿಗೆ ಜೊತೆಯಾಗುವವರೂ ಅವರಂತಹ ಪಾಪದ ದೇವರ ಮಕ್ಕಳೇ ! ಅವರಿಗೆ ದೇವರೇ ಗತಿ !

ಇಂತಹ ಪಾಪದ ಹೂವುಗಳೇ ರೇಪ್, ಮರ್ಡರ್ ಮುಂತಾದ ಪಾಪದ ಕಾರ್ಯದಲ್ಲಿ ತೊಡಗುವುದು. ಅವರಿಗೆ ಬದುಕು ಸರಿಯಾಗಬಹುದೆಂಬ, ಮುಂದೆ ಒಳ್ಳೆಯದಾಗಬಹುದೆಂಬ ನಂಬಿಕೆಯಿಲ್ಲ. ಅವರಿಗೆ ತಾಳ್ಮೆಯಿಲ್ಲ. ಅಸ್ಥಿರ ಮನಸ್ಸಿಗೆ ತಾಳ್ಮೆ ಒಲಿಯುವುದಿಲ್ಲ. ಅದರ ಬಗ್ಗೆ ಇವತ್ತು ಗಲ್ಲು ಶಿಕ್ಷೆಗೆ ಬಾಯ್ತೆರೆದು ಬೊಬ್ಬಿರಿದು ರಸ್ತೆಯಲ್ಲಿ ಕೂತ ಸಮಾಜಕ್ಕೆಗೊತ್ತಿದೆಯಾ?

ಇಂತಹ ಕ್ರಿಮಿನಲ್ ಗಳು ಈ ಸಮಾಜದ ಸೃಷ್ಟಿ. ನಮ್ಮ ದುರಾಸೆಯ ಸೃಷ್ಟಿ. ಸೆಕ್ಸ್ ಅನ್ನು ವೈಭವೀಕರಿಸುವ ನಮ್ಮ ಸಿನಿಮಾ, ನಮ್ಮ ಬಾಲಿವುಡ್ ಇದರ ಪಾತ್ರಪೋಷಣೆ ಮಾಡಿಕೊಂಡು ಬಂದಿವೆ. ಶ್ರೀಮಂತರಿಗೆ ಒಂದು ನ್ಯಾಯ, ಸ್ತ್ರೀಯರಿಗೆ ಇನ್ನೊಂದು ನ್ಯಾಯ : ಬಡವನಿಗೆ ಎಲ್ಲಿ ಹೋದರೂ ಅನ್ಯಾಯ ! ಇದು ನಮ್ಮ ಭಾರತ !!

ಮೊನ್ನೆ ಮೊನ್ನೆ ವೈರಲ್ ಆದ ‘ಹೌದ್ ಹುಲಿಯಾ’ ಖ್ಯಾತಿಯ ಪೀರಪ್ಪ ಕಟ್ಟೀಮನಿಯ ಉದಾಹಾರಣೆಯನ್ನೇ ತೆಗೆದುಕೊಳ್ಳಿ. ಆತ 12 ವರ್ಷ ಜೀತ ಮಾಡಿದ್ದನಂತೆ. ದಿನಕ್ಕೆ 50 ರುಪಾಯಿಯ ಕೂಲಿಯಂತೆ ! ಯಾಕೆ ಯಾವ ಸರ್ಕಾರಗಳೂ ಅದನ್ನು ಗುರುತಿಸಲಿಲ್ಲ. ಯಾಕೆ ಯಾರೊಬ್ಬ ಶಿಕ್ಷಿತ ನಾಗರಿಕನೂ ಅದನ್ನು ನಿಲ್ಲಿಸಲಿಲ್ಲ. ಇವತ್ತು ಆತನ ಮಗ ಆತನಂತೆಯೇ ಅಬ್ಬೇಪಾರಿಯಾಗಿ ದಿನಗೂಲಿ ಮಾಡುತ್ತಿದ್ದಾನೆ.

ಗಂಡಸು ಮಾಡಿದರೆ ತಪ್ಪು, ಹೆಂಗಸು ಹನಿ ಟ್ರ್ಯಾಪ್ ಮಾಡಿದರೆ ಅದು ಕೂಡಾ ತಪ್ಪು. ಅದಕ್ಕೂ ಗಲ್ಲು ಶಿಕ್ಷೆಯಾಗಬೇಕು. ಆತ ಬಯೋಲಾಜಿಕಲ್ ಅರ್ಜ್ ನಿಂದ ರೇಪ್ ಮಾಡುತ್ತಾನಾದರೆ, ಆಕೆ ಯಾಕೆ ಹನಿ ಟ್ರ್ಯಾಪ್ ಮಾಡುತ್ತಾಳೆ ? ಅದು ಕೂಡ ರೇಪ್ ಗಿಂತ ಮತ್ತಷ್ಟು ಘೋರ ಅಲ್ಲವಾ? ಅಲ್ಲಿ ಆಕೆ ಮಾಡುವುದು ಐಷಾರಾಮಿ ಜೀವನಕ್ಕಾಗಿ ! ಈಗ ಹೇಳಿ, ಯಾವುದು ದೊಡ್ಡ ಅಪರಾಧ ?

ಫ್ಯಾಮಿಲಿ ವಿಷಯದಲ್ಲಿ ಕೂಡಾ ನಮ್ಮ ಗ್ರೇಟ್ ದೇಶ ಪಕ್ಷಪಾತಿ. ನಮ್ಮ ಕಾನೂನು ಅಲ್ಲಿ ಕೂಡ ಗಂಡಸನ್ನು ನಂಬುವುದಿಲ್ಲ. ತಪ್ಪು ಯಾರೇ ಮಾಡಿರಲಿ, ಒಂದು ವೇಳೆ ಡೈವೋರ್ಸು ಆದರೆ ಮಕ್ಕಳ ಹಕ್ಕು ಹೆಂಗಸರಿಗೇ ಅಂತೆ !

I personally condemn this injustice !

ಈಗ ಏನು ಮಾಡಬೇಕು ?

ಮುಂಚಿತವಾಗಿ ಪ್ಲಾಶಿಂಗ್ – ಅಸಭ್ಯ ಡ್ರೆಸ್ ಬಳಕೆಯನ್ನು ತಕ್ಷಣ ನಿಲ್ಲಿಸಬೇಕು. ಯಾಕೆಂದರೆ ಗಂಡಸರು ಉದ್ರೇಕಗೊಳ್ಳುವುದು, ಮತ್ತು ಸೌಂದರ್ಯವನ್ನು ಗ್ರಹಿಸುವುದು ಕಣ್ಣಿನ ಮೂಲಕ. ದೃಶ್ಯಗಳು, ಬಣ್ಣಗಳು ಆತನನ್ನು ಉದ್ರೇಕಿಸುತ್ತವೆ. ಆದರೆ, ಸ್ತ್ರೀಯರ ಅಟ್ರಾಕ್ಷನ್ ಸಿದ್ದಾಂತವೇ ಬೇರೆ ಇದೆ.
ಈ ಕೂಡಲೇ ಸ್ಟಾಪ್ : ಪಬ್ಸ್, ಪೋರ್ನ್ ಸೈಟ್ಸ್, ಡಿಸ್ಕೊ ಥೆಕ್ಸ್, ಪೋರ್ನ್ ಸೈಟ್ಸ್ ; ಕಂಟ್ರೋಲ್ ಫಿಲಂ ಇಂಡಸ್ಟ್ರಿ, ಬ್ಯಾನ್ ಬಾಲಿವುಡ್. ಇವತ್ತು ಫೇಸ್ ಬುಕ್ ನಲ್ಲಿ ನೋಡಿದರೂ ಎಲ್ಲವನ್ನೂ ಬಿಚ್ಚಿ ತೋರಿಸುವ ಬರಿದೆದೆಯ ಬೆಡಗಿರರು. ಪ್ರಾಮಿಸ್, ಇವತ್ತು- ಡೇಟ್ 13/12/2019- ಇವತ್ತು ಕೂಡ ವಾಚ್ ಪಾರ್ಟಿ ಹೆಸರಿನಲ್ಲಿ ಕಾಣ ಸಿಗ್ತು ಓಪನ್ ಪ್ರೊವೊಕೇಷನ್ ! ಅಲ್ಲಿ ಬಂದು ತೆರೆದು ತೋರಿಸುವವರು ಯಾರು? ಗಂಡಸರ ಅಥವಾ ಹೆಂಗಸರಾ ?

ನಿಮಗೆ ಇದನ್ನೆಲ್ಲಾ ನಿಲ್ಲಿಸೋ ಧಮ್ ಇದೆಯಾ ರಾಜಕಾರಣಿಗಳೇ? ಧಮ್ ಇದ್ರೆ ಒಂದ್ಸಲ ತೋರಿಸಿ.

ಪಾಪ ರಾಜಕಾರಣಿಗಳು, ಈ ಸರ್ಕಾರವಾದರೂ ಏನು ಮಾಡುತ್ತವೆ ? ನಾಳೆ, ಒಂದುವೇಳೆ ಸರ್ಕಾರ ಅಥವಾ ಒಬ್ಬ ಕೆಟ್ಟ ರಾಜಕಾರಣಿ (!!!) ಇವನ್ನೆಲ್ಲ ಕಡಿವಾಣ ಹಾಕಲು ಪ್ರಾರಂಭಿಸಿದನೋ, ಆಗ ನೋಡಿ. ಇದೇ ಸ್ತ್ರೀ ಸಮಾಜ, ಇವತ್ತಿಗಿಂತ ದೊಡ್ಡದಾಗಿ ಬೀದಿಯಲ್ಲಿ ನಿಂತು ಕೂಗುಹಾಕುತ್ತದೆ. ಪ್ರತಿಭಟಿಸುತ್ತದೆ. ಸ್ತ್ರೀ ಸ್ವಾತಂತ್ರ್ಯ, ನಮ್ಮ ಬಟ್ಟೆ-ನಮ್ಮ ಹಕ್ಕು, ಮಹಿಳಾ ಹಕ್ಕುಗಳು, ನನ್ನ ಜೀವನ – ನನ್ನ ಇಷ್ಟ….ಸೊ ಆನ್ ! ಹೀಗೆ ಆದರೆ ಯಾವ ಕಾಲಕ್ಕೆ ಇದು ಸರಿಯಾದೀತು ?

ಎಲ್ಲದಕ್ಕಿಂತ ಮೊದಲು ಬೇಕಾಗಿರುವುದು, ಈ ದೇವರ ಮಕ್ಕಳಿಗೆ ಒಂದು ನೆಮ್ಮದಿಯ ಬಾಲ್ಯ, ಮತ್ತೊಂದಷ್ಟು ಒಳ್ಳೆಯ ಶಿಕ್ಷಣ.

ಇದರ ಬಗ್ಗೆ ಮತ್ತಷ್ಟು ವಿಸ್ತೃತವಾಗಿ ಬರೆಯಲಿದ್ದೇನೆ.

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.