ರೇಪ್ ನಂತೆಯೇ ಹನಿಟ್ರ್ಯಾಪ್ ಗೆ ಕೂಡಾ ಗಲ್ಲು ಶಿಕ್ಷೆಯಾಗಬೇಕು । ಈ ದೇಶದಲ್ಲಿ ಮಹಿಳೆಯರು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ !
ಕಾನೂನಿಗೆ ಕಣ್ಣಿಲ್ಲ. ಭಾಷೆಯಿಲ್ಲ. ಈಗ ಲಿಂಗ ಕೂಡ ಇಲ್ಲ ಎಂದು ಈಗ ನಾವು ನಿರೂಪಿಸಬೇಕಿದೆ. ನಮ್ಮ ಕಾನೂನು ಪುರುಷರಿಗೆ ಒಂದು ರೀತಿ, ಸ್ತ್ರೀಯರಿಗೆ ಇನ್ನೊಂದು ರೀತಿಯಾಗಿದೆ. ಪುರುಷರು ಮಾಡುವ ತಪ್ಪಿಗೆ ಶಿಕ್ಷೆ ಘೋರವಾಗಿದೆ. ಆದರೆ ಮಹಿಳೆಯರಿಗೆ ಯಾಕೆ ವಿನಾಯಿತಿ? ರೇಪ್ ಒಂದು ವ್ಯಕ್ತಿಯ ಮೇಲಣ ಮಾನಸಿಕ ಮತ್ತು ದೈಹಿಕ ದೌರ್ಜನ್ಯ. ಅದು ಅಕ್ಷಮ್ಯ. ಅದನ್ನು ನಿಲ್ಲಿಸಲೇ ಬೇಕು. ಆದರೆ ಅದನ್ನು ನಿಲ್ಲಿಸುವ ದೃಷ್ಠಿಯಲ್ಲಿ ದೇಶದಲ್ಲಿ ಯಾವುದೇ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಬೀದಿಗೆ ಇಳಿದು ಪ್ರತಿಭಟಿಸಿದರೆ ಅದರಿಂದ ಏನೇನೂ ಪ್ರಯೋಜನವಿಲ್ಲ. …