Home Interesting ಪ್ರೇಯಸಿಯ ಮೊಬೈಲ್ ಚೆಕ್ ಮಾಡಿದ ಬಳಿಕವೇ ನಡೆದೋಯ್ತು ಭೀಕರ ಹತ್ಯೆ!

ಪ್ರೇಯಸಿಯ ಮೊಬೈಲ್ ಚೆಕ್ ಮಾಡಿದ ಬಳಿಕವೇ ನಡೆದೋಯ್ತು ಭೀಕರ ಹತ್ಯೆ!

Hindu neighbor gifts plot of land

Hindu neighbour gifts land to Muslim journalist

ತನ್ನೊಂದಿಗೆ ಪ್ರೀತಿ ಮುರಿದುಕೊಂಡ ಪ್ರೇಯಸಿ ಇನ್ನೊಬ್ಬನ ಜೊತೆ ಟಚ್ ಲ್ಲಿ ಇದ್ದಾಳೆ ಎಂದು ಗೊತ್ತಾಗಿ ಪ್ರಿಯಕರನೊಬ್ಬ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಕೊನ್ನಲ್ಲೂರು ಗ್ರಾಮದಲ್ಲಿ ಬುಧವಾರ ನಡೆದಿದೆ.

ಕೊಲೆಯಾದಾಕೆ ಕೊನ್ನಲ್ಲೂರಿನ ಶಿವದಾಸನ್​ ಮತ್ತು ಗೀತಾ ದಂಪತಿಯ ಪುತ್ರಿ ಸೂರ್ಯಪ್ರಿಯಾ (24). ಅಂಜುಮೂರ್ತಿಮಂಗಲದ ಅನಕಪ್ಪರ ನಿವಾಸಿ ಸುಜೀಶ್​ (27) ಕೊಲೆ ಮಾಡಿದ ಪ್ರಿಯಕರ.

ಕಳೆದ ಆರು ವರ್ಷದಿಂದ ಸುಜೀಶ್​ ಮತ್ತು ಸೂರ್ಯಪ್ರಿಯಾ ಪರಸ್ಪರ ಪ್ರೀತಿ ಮಾಡುತ್ತಿದ್ದರು.ಕಾಲೇಜು ದಿನಗಳಿಂದಲೂ ಇಬ್ಬರು ಸಂಬಂಧದಲ್ಲಿದ್ದರು. ಕೆಲವು ತಿಂಗಳ ಹಿಂದೆ ಸೂರ್ಯಪ್ರಿಯಾ ಪ್ರೀತಿಯನ್ನು ಕಡಿದುಕೊಂಡಿದ್ದಳು. ಆದರೆ, ಆಕೆ ಮತ್ತೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಎಂಬ ವಿಚಾರಕ್ಕೆ ಕೆಲವು ದಿನಗಳ ಹಿಂದೆ ಫೋನ್​ ಮೂಲಕ ಇಬ್ಬರ ನಡುವೆ ವಾಗ್ವಾದವು ನಡೆದಿತ್ತು.

ಸೂರ್ಯಪ್ರಿಯಾಳನ್ನು ನೇರವಾಗಿ ಭೇಟಿಯಾಗಿ ಪ್ರಶ್ನೆ ಮಾಡೋಣ ಅಂದುಕೊಂಡು ನಿನ್ನೆ ಬೆಳಗ್ಗೆ ಆಕೆಯ ಮನೆಗೆ ಬಂದ ಸುಜೀಶ್​, ಆಕೆಯ ಮೊಬೈಲ್​ ಚಾಟ್ಸ್​ಗಳನ್ನು ನೋಡಿದ್ದಾನೆ. ನಂತರ ಮೆಸೇಜ್​ ವಿಚಾರಕ್ಕೆ ಸೂರ್ಯಪ್ರಿಯಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾನೆ. ಇಬ್ಬರ ಜಗಳ ತಾರಕಕ್ಕೇರಿದಾಗ ಸುಜೀಶ್​ ಆಕೆಯ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದಾನೆ.

ಬುಧವಾರ ಬೆಳಗ್ಗೆ 10 ಗಂಟೆಗೆ ಸೂರ್ಯಪ್ರಿಯಾ ಕೊಲೆಯಾಗಿದ್ದು, ಮನೆಯಲ್ಲಿ ಸೂರ್ಯಪ್ರಿಯಾ ತಾಯಿ ಗೀತಾ ಕೆಲಸಕ್ಕೆಂದು ಹೋಗಿದ್ದು, ಸಹೋದರ ರಾಧಾಕೃಷ್ಣನ್​ ಬ್ಯಾಂಕ್​ಗೆಂದು ಅಲಥೂರ್​ಗ ಹೋಗಿದ್ದರು. ಮನೆಯಲ್ಲಿ ತಾತ ಒಬ್ಬರೆ ಇದ್ದರು. ಅವರು ಕೂಡ ಟೀ ಕುಡಿಯಲೆಂದು ಹೊರಗಡೆ ಹೋಗಿದ್ದಂತಹ ಸಂದರ್ಭದಲ್ಲಿ ಮನೆಗೆ ನುಗ್ಗಿದ ಸುಜೀಶ್​, ಸೂರ್ಯಪ್ರಿಯಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಸೂರ್ಯಪ್ರಿಯಾಳ ಸಾವು ದೃಢವಾದ ಬಳಿಕ ಸುಜೀಶ್​, ಸೂರ್ಯಪ್ರಿಯಾಳ ಮೊಬೈಲ್ ಫೋನ್ ತೆಗೆದುಕೊಂಡು ಆಲತ್ತೂರು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಪೊಲೀಸರು ಆಗಮಿಸಿದ ನಂತರವೇ ಸ್ಥಳೀಯರು ಮತ್ತು ಸಂತ್ರಸ್ತೆಯ ಅಜ್ಜನಿಗೆ ಕೊಲೆಯ ವಿಷಯ ತಿಳಿದಿದ್ದು, ಮೃತದೇಹವನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಪೊಲೀಸರ ಪ್ರಕಾರ, ಪ್ರೀತಿ ಮುರಿದುಕೊಂಡಿದ್ದೇ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. ಅದಕ್ಕೂ ಮುನ್ನ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ಆದರೆ, ಟವೆಲ್​ ಮೂಲಕ ಉಸಿರುಗಟ್ಟಿಸಿ ಸುಜೀಶ್​ ಹತ್ಯೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ಸೂರ್ಯಪ್ರಿಯಾ, ಡೆಮೋಕ್ರೆಟಿಕ್​ ಯೂತ್​ ಫೆಡರೇಶನ್​ ಆಫ್​ ಇಂಡಿಯಾದ ಬ್ಲಾಕ್​ ಕಮಿಟಿ ಸದಸ್ಯೆ ಮತ್ತು ಮೆಲಾರಕೋಡು ಪಂಚಾಯತ್ ಕುಟುಂಬಶ್ರೀ ಸಿಡಿಎಸ್ ಸದಸ್ಯೆಯಾಗಿದ್ದರು. ಸುಜೀಶ್ ಸೇಲಂನ ಕರೂರ್‌ನಲ್ಲಿರುವ ಖರ್ಜೂರದ ಕಂಪನಿಯಲ್ಲಿ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ.