Home Interesting ನಿಮ್ಮ ಬಳಿ ವೈಟ್ ಕಲರ್ ಕಾರ್ ಇದೆಯಾ? | ಹಾಗಿದ್ರೆ ಇರಲಿ ಎಚ್ಚರ!

ನಿಮ್ಮ ಬಳಿ ವೈಟ್ ಕಲರ್ ಕಾರ್ ಇದೆಯಾ? | ಹಾಗಿದ್ರೆ ಇರಲಿ ಎಚ್ಚರ!

Hindu neighbor gifts plot of land

Hindu neighbour gifts land to Muslim journalist

ಇಂದು ಕಳ್ಳತನ ಎಂಬುದು ಉದ್ಯೋಗವಾಗಿ ಹೋಗಿದೆ. ಯಾಕಂದ್ರೆ ಕೆಲವೊಂದು ಜನರ ತಂಡ ಇದಕ್ಕಾಗಿಯೇ ಪ್ಲಾನ್ ಮಾಡಿಕೊಂಡು ಫೀಲ್ಡ್ ಗೆ ಇಳಿಯುತ್ತಾರೆ. ಮೊದಲೆಲ್ಲ ಚಿನ್ನ, ಹಣ ಹೀಗೆ ಕಳ್ಳತನ ಅಧಿಕವಾಗಿದ್ದಾರೆ, ಇದೀಗ ವಾಹನ, ಮೊಬೈಲ್ ಫೋನ್ ಮೇಲೆಲ್ಲಾ ಕಳ್ಳರ ಕಣ್ಣು ಬಿದ್ದಿದೆ. ಅದರಲ್ಲೂ ನಿಮ್ಮಲ್ಲಿ ವೈಟ್ ಕಲರ್ ಕಾರ್ ಇದ್ರೆ, ನೀವೊಂಚೂರು ಎಚ್ಚರದಿಂದಿರೋದೇ ಒಳಿತು.

ಹೌದು. ವಾಹನ ಕಳ್ಳರಿಗೆ ಬಿಳಿ ಬಣ್ಣದ ಕಾರುಗಳೇ ಫೇವರೆಟ್ ಎನ್ನಲಾಗಿದ್ದು, ಬಿಳಿ ಬಣ್ಣದ ಕಾರುಗಳು ಟ್ರಾಫಿಕ್ ನಲ್ಲಿ ಹೆಚ್ಚಾಗಿ ಗಮನ ಸೆಳೆಯುವುದಿಲ್ಲ ಎಂಬುದು ಇದರ ಹಿಂದಿನ ತರ್ಕ. ವಾಹನ ಕಳ್ಳತನ ಪ್ರಕರಣಗಳಲ್ಲಿ ದೆಹಲಿ ಎನ್ ಸಿ ಆರ್ ಮೊದಲ ಸ್ಥಾನದಲ್ಲಿದ್ದರೆ ಕರ್ನಾಟಕದ ರಾಜಧಾನಿ ಬೆಂಗಳೂರು ದ್ವಿತೀಯ ಸ್ಥಾನದಲ್ಲಿದೆ, ತಮಿಳುನಾಡಿನ ಚೆನ್ನೈ ತೃತೀಯ ಸ್ಥಾನದಲ್ಲಿದ್ದು, ಹೈದರಾಬಾದ್, ಮುಂಬೈ ಮತ್ತು ಕೊಲ್ಕತ್ತಾದಲ್ಲಿ ಅತಿ ಕಡಿಮೆ ವಾಹನ ಕಳ್ಳತನ ಪ್ರಕರಣಗಳು ವರದಿಯಾಗಿವೆ.

ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಅಚ್ಚರಿಯ ಮಾಹಿತಿಯೊಂದು ಬಹಿರಂಗವಾಗಿದ್ದು, ದೆಹಲಿ ಎನ್ ಸಿ ಆರ್ ಪ್ರದೇಶದಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ವಾಹನ ಕಳ್ಳತನ ಪ್ರಕರಣಗಳು ನಡೆಯುತ್ತಿವೆ ಎಂದು ಹೇಳಲಾಗಿದೆ. ಅದರಲ್ಲೂ ದೆಹಲಿಯ ರೋಹಿಣಿ, ಭಜನ್ ಪುರ್, ಡಯಾಲ್ಪುರ್ ಹಾಗೂ ಸುಲ್ತಾನ್ ಪುರಿ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಕಳ್ಳತನ ನಡೆದಿದೆ.

ಮಾರುತಿ ವ್ಯಾಗನ್ ಆರ್, ಮಾರುತಿ ಸ್ವಿಫ್ಟ್ ದೆಹಲಿ ಎನ್ ಸಿ ಆರ್ ಪ್ರದೇಶದಲ್ಲಿ ಅತಿ ಹೆಚ್ಚಾಗಿ ಕದ್ದ ಕಾರುಗಳಾಗಿವೆ. ದ್ವಿಚಕ್ರ ವಾಹನಗಳಲ್ಲಿ ಹೀರೋ ಸ್ಪ್ಲೆಂಡರ್ ಮೊದಲ ಸ್ಥಾನದಲ್ಲಿದ್ದು, ನಂತರದ ಸ್ಥಾನಗಳಲ್ಲಿ ಹೋಂಡಾ ಆಕ್ಟಿವಾ, ಬಜಾಜ್ ಪಲ್ಸರ್, ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಹಾಗೂ ಟಿವಿಎಸ್ ಅಪಾಚಿ ಇದೆ

ವಾಹನ ಕಳ್ಳತನಕ್ಕೆ ಮುಖ್ಯ ಕಾರಣವೇ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಇರುವುದು. ಮಹಾನಗರಗಳಲ್ಲಿ ಮನೆ ಹೊರಗೆ ವಾಹನಗಳನ್ನು ನಿಲ್ಲಿಸುವುದು ಒಂದು ಪ್ರಮುಖ ಕಾರಣವಾಗಿದೆ. ಇದನ್ನೇ ಬಂಡವಾಳವಾಗಿಸಿಕೊಂಡು ಕಳ್ಳರ ಗ್ಯಾಂಗ್ ಅದರ ಮೇಲೆ ಕಣ್ಣಿಟ್ಟು ತಮ್ಮ ವಶ ಮಾಡಿಕೊಳ್ಳುತ್ತಾರೆ.