Home Interesting ಕೇವಲ ಐದು ರೂಪಾಯಿ ಟಿಕೆಟ್ ಖರೀದಿಸಿ ಎಷ್ಟು ಬೇಕಾದರೂ ಪ್ರಯಾಣಿಸಿ!

ಕೇವಲ ಐದು ರೂಪಾಯಿ ಟಿಕೆಟ್ ಖರೀದಿಸಿ ಎಷ್ಟು ಬೇಕಾದರೂ ಪ್ರಯಾಣಿಸಿ!

Hindu neighbor gifts plot of land

Hindu neighbour gifts land to Muslim journalist

ಕೊಚ್ಚಿ ಮೆಟ್ರೋ ತನ್ನ ಐದನೇ ವಾರ್ಷಿಕೋತ್ಸವ ಸಂಭ್ರಮದ ಕ್ಷಣಗಳಲ್ಲಿ ತನ್ನ ಪ್ರಯಾಣಿಕರಿಗೆ ಭರ್ಜರಿ ಕೊಡುಗೆ ನೀಡಲು ನಿರ್ಧರಿಸಿದ್ದು, ಕೇವಲ ಐದು ರೂಪಾಯಿ ಟಿಕೆಟ್ ಖರೀದಿಸಿ ಎಷ್ಟು ಬೇಕಾದರೂ ಪ್ರಯಾಣಿಸಲು ಮೆಟ್ರೋ ಅವಕಾಶ ನೀಡಿದೆ.

ಇದೇ ಜೂ.17 ರಂದು ಐದನೇ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಹೆಚ್ಚಿನ ಪ್ರಯಾಣಿಕರಿಗೆ ಮೆಟ್ರೋವನ್ನು ಪರಿಚಯಿಸುವುದು ಮತ್ತು ಹೆಚ್ಚಿನ ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ ಮೆಟ್ರೋ ಈ ಹೊಸ ಕೊಡುಗೆ ಇರಿಸಿದೆ.

ಈ ಮಾಹಿತಿಯನ್ನು ಕೊಚ್ಚಿ ಮೆಟ್ರೋ ತನ್ನ ಅಧಿಕೃತ ಫೇಸ್‌ಬುಕ್ ಪುಟದಲ್ಲಿ, ಪ್ರಯಾಣಕ್ಕೆ ಅನುಕೂಲ ಮಾಡಿ, ಸಾರ್ವಜನಿಕ ಸಾರಿಗೆ ಅಭ್ಯಾಸ ಮಾಡಿ-ಕೊಚ್ಚಿ ಮೆಟ್ರೊ ಎಂಬ ಟ್ಯಾಗ್ ಮೂಲಕ ಹಂಚಿಕೊಂಡಿದ್ದು, ‘ಜೀವನ ತುಂಬಾ ಸುಲಭ’ ಎಂಬ ಶೀರ್ಷಿಕೆ ಹಾಕಿಕೊಂಡಿದೆ.