Blue Aadhar: ನೀಲಿ ಆಧಾರ್ ಕಾರ್ಡ್ ಯಾರಿಗೆ ಲಾಭ? ಅರ್ಜಿ ಸಲ್ಲಿಸುವ ರೀತಿ ಇಲ್ಲಿದೆ

Blue Card: ನಮಗೆ ಆಧಾರ್ ಬಗ್ಗೆ ತಿಳಿದಿದೆ. ನಮ್ಮ ವಿಳಾಸ, ಹೆಸರು,ವಯಸ್ಸನ್ನು ಒಳಗೊಂಡಿರುವಂತೆ 12 ಅಂಕಿಯ ಸಂಖ್ಯೆಯನ್ನು ಹೊಂದಿರುತ್ತದೆ. ದೇಶದ ಎಲ್ಲರಿಗೂ ಆಧಾರ್ ಕಡ್ಡಾಯ. ಯಾವುದೇ ಯೊಜನೆ ಪಡೆಯಲು ಆಧಾರ್ ಇರಲೇ ಬೇಕು. ನಾವು ನೋಡಿರುವ ಆಧಾರ್ ಕಾರ್ಡುಗಳು ಬಿಳಿ ಬಣ್ಣದಿಂದ ಕೂಡಿರುತ್ತದೆ. ಆದ್ರೆ ನೀವು ನೀಲಿ ಬಣ್ಣದ (Blue card)ಆಧಾರ್ ನೋಡಿದ್ದೀರಾ?? ಈ ಬಗ್ಗೆ ತಿಳಿಯೋಣ ಬನ್ನಿ.

ಮೊದಲು 5 ವರ್ಷದ ಮಗುವಿಗೆ ಆಧಾರ್ ನೀಡಲಾಗುತ್ತದೆ. ಇದಕ್ಕೆ ಬಯೋಮೆಟ್ರಿಕ್ ಅಗತ್ಯವಿಲ್ಲ. ವಿಳಾಸ , ಫೋಟೋ ಇದ್ದರೇ ಸಾಕು. ಅವರ ಆಧಾರ್ ಅನ್ನು ಪೋಷಕರ ಆಧಾರ್ ನೊಂದಿಗೆ ಲಿಂಕ್ ಮಾಡುತ್ತಾರೆ. ನಂತರ 15 ವರ್ಷ ತುಂಬಿದ ಮೇಲೆ ಕಣ್ಣು ಮತ್ತು ಬಯೋಮೆಟ್ರಿಕ್ ಅನ್ನು ಅಪ್ಡೇಟ್ ಮಾಡಿಸಬೇಕು.

ಮಕ್ಕಳ ಆಧಾ‌ರ್ ನೋಂದಣಿ ಪ್ರಕ್ರಿಯೆ ಹೀಗಿದೆ:

ಪಾಲಕರು ಆಧಾರ್ ಕಾರ್ಡ್, ವಿಳಾಸ, ಮಗುವಿನ ಜನನ ಪ್ರಮಾಣಪತ್ರ ಮತ್ತು ಭಾವಚಿತ್ರವನ್ನು ಆಧಾರ್ ನೋಂದಣಿ ಕೇಂದ್ರಕ್ಕೆ ತೆಗೆದುಕೊಂಡು ಹೋಗಿ . ಆಧಾರ್ ನೋಂದಣಿ ಫಾರ್ಮ್ ಅನ್ನು ತೆಗೆದುಕೊಂಡು ಭರ್ತಿ ಮಾಡಿದ ನಂತರ ಪಾಲಕಕರ ಆಧಾ‌ರ್ ವಿವರವನ್ನು ನೀಡಬೇಕು. ಈ ಫಾರ್ಮ್ ಅನ್ನು ವೆಬ್‌ಸೈಟ್‌ನಿಂದಲೂ ಡೌನ್‌ಲೋಡ್ ಮಾಡಬಹುದು. ಪಾಲಕರ ಮೊಬೈಲ್‌ ಸಂಖ್ಯೆಯನ್ನು ಮಗುವಿನ ಆಧಾ‌ರ್ ಕಾರ್ಡ್‌ಗೆ ಲಿಂಕ್ ಮಾಡಬೇಕಾಗುತ್ತದೆ. ಆದ್ದರಿಂದ ಆಧಾರ್ ಸಂಖ್ಯೆಯನ್ನು ನಮೂನೆಯಲ್ಲಿಯೇ ತುಂಬಬೇಕು. ನಂತರ ನೀವು ಒದಗಿಸುವ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ತಕ್ಷಣ ಮೊಬೈಲ್ ಸಂಖ್ಯೆಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ ಎಂಬ ಸಂದೇಶ ಬರುತ್ತದೆ. ಸ್ವೀಕೃತಿ ಚೀಟಿಯನ್ನು ತೆಗೆದುಕೊಳ್ಳಲು ಮರೆಯಬಾರದು. ಇದು ದಾಖಲಾತಿ ಐಡಿಯನ್ನು ಒಳಗೊಂಡಿರುತ್ತದೆ. ಇದರೊಂದಿಗೆ ಮಗುವಿನ ಆಧಾರ್ ಕಾರ್ಡ್‌ ಅರ್ಜಿ ವಿವರಗಳನ್ನು ಪಡೆಯಬಹುದು. ಬಳಿಕ ಮಗುವಿನ ಹೆಸರಿಗೆ 60 ದಿನಗಳಲ್ಲಿ ಮಕ್ಕಳ ಆಧಾರ್ ಕಾರ್ಡ್ ಬರುತ್ತದೆ. ಈ ನೀಲಿ ಕಾರ್ಡ್ ಗೆ ನೀವು ಯಾವುದೇ ಹಣ ಪಾವತಿ ಮಾಡಬೇಕಿಲ್ಲ.

Leave A Reply

Your email address will not be published.