ಬಗೆ ಬಗೆಯಾಗಿ ಸೆಲ್ಫಿಗೆ ಫೋಸ್ ಕೊಟ್ಟ ಈ ಕರಡಿ ಕ್ಲಿಕ್ಕಿಸಿಕೊಂಡದ್ದು ಬರೋಬ್ಬರಿ 400 ಫೋಟೋಗಳನ್ನು! ಇದರ ಫೋಸ್ ನೋಡಿದ್ರೆ ಮನುಷ್ಯರೂ ನಾಚಬೇಕು!!

ಇಂದು ಇಡೀ ಜಗತ್ತೇ ಸೆಲ್ಫಿಮಯವಾಗಿಬಿಟ್ಟಿದೆ. ಎಲ್ಲಿನೋಡಿದರಲ್ಲಿ ಜನರು ಅಡ್ಡಡ್ಡ, ಉದ್ದುದ್ದವಾಗಿ ಮೊಬೈಲ್ ಹಿಡಿದುಕೊಂಡು ಸೆಲ್ಫಿಗೆ ಫೋಸ್ ಕೊಡುತ್ತಿರುತ್ತಾರೆ. ಸೆಲ್ಫಿ ಕ್ರೇಜ್​​ ಎಷ್ಟರ ಮಟ್ಟಿಗೆ ಇದೆ ಅಂದರೆ, ಇದರಿಂದಾಗಿ ಅದೆಷ್ಟೋ ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆದರೆ ಈ ಸೆಲ್ಫಿ ಕ್ರೇಜ್ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಾಣಿಗಳಲ್ಲಿಯೂ ಶುರುವಾಗಿದೆ. ಸೆಲ್ಫಿ ಗೀಳು ಕಾಡು ಪ್ರಾಣಿಗಳನ್ನೂ ಬಿಟ್ಟಿಲ್ಲ ಅನ್ಬೋದು. ಅರೇ ಈ ಸೆಲ್ಫಿಗೂ ಕಾಡು ಪ್ರಾಣಿಗೂ ಎಲ್ಲಿಂದ ಸಂಬಂಧ ಎಂದು ಯೋಚಿಸ್ತಿದ್ದೀರಾ? ಇಲ್ಲಿದೆ ನೋಡಿ ಗಮ್ಮತ್ತಿನ ವಿಚಾರ! ಇಲ್ಲೊಂದು ಕರಡಿ ಬರೋಬ್ಬರಿ 400 ಸೆಲ್ಫಿಗೆ ಪೋಸ್​​ ಕೊಟ್ಟಿದ್ದು, ಬಾರೀ ಸುದ್ದಿಯಾಗ್ತಿದೆ. ಇದೇನಾಪ್ಪ ಅಂಥಾ ಅನ್ಕೋತಾ ಇದ್ದೀರಾ? ಹೌದು ಅಮೇರಿಕಾದಲ್ಲಿ ಈ ಘಟನೆ ನಡೆದಿದ್ದು ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಕರಡಿಯ ಸೆಲ್ಫಿಗಳು ಸಕ್ಕತ್ತ್​​ ಆಗಿ ವೈರಲ್​​ ಆಗುತ್ತಿದೆ.

ದಿನಬೆಳಗಾದರೆ ಸಾಕು, ಯಾವುದಾದರೂ ಒಂದು ಫೋಟೋ, ವಿಡಿಯೋ ಅಥವಾ ಒಂದು ವಿಚಿತ್ರವಾದ ಸನ್ನಿವೇಶಗಳಾದರೂ ಸಾಕಷ್ಟು ಸುದ್ದಿಮಾಡಿ, ವೈರಲ್ ಆಗಿಬಿಟ್ಟಿರುತ್ತವೆ. ಅವುಗಳಲ್ಲಿ ಕೆಲವೊಂದು ಮಿಲಿಯನ್​​ ಗಟ್ಟಲೆ ವೀಕ್ಷಣೆ ಪಡೆಯುವ ಮೂಲಕ ಅಷ್ಟೇ ಟ್ರೆಂಡ್​​ ಕ್ರಿಯೇಟ್​​ ಮಾಡುತ್ತಿರುತ್ತವೆ. ಈಗ ಕರಡಿಯೊಂದು 400 ಸೆಲ್ಫಿ ತೆಗೆಯುವ ಮೂಲಕ ವೈರಲ್​ ಆಗಿ ಒಂದು ಟ್ರೆಂಡ್ ಕ್ರಿಯೆಟ್ ಮಾಡಿದೆ. ಹೌದು, ಅಮೆರಿಕಾದ ಈ ಕರಡಿ ಕೊಲೊರಾಡೋದ ವನ್ಯಜೀವಿ ಕ್ಯಾಮೆರಾದಲ್ಲಿ ಸೆಲ್ಫಿಗಳನ್ನು ಸೆರೆಹಿಡಿದಿದೆ. ಅದು ಬರೋಬ್ಬರಿ 400 ಸೆಲ್ಫಿಗೆ ಪೋಸ್​​ ಕೊಟ್ಟಿದೆ!

ಕೊಲೊರಾಡೋದ ವನ್ಯಜೀವಿಧಾಮದಲ್ಲಿ, ವನ್ಯಜೀವಿ ಛಾಯಾಗ್ರಾಹಕರೊಬ್ಬರು ರಾತ್ರಿ ವೇಳೆ ಕ್ಯಾಮರಾವನ್ನು ಅಳವಡಿಸಿದ್ದರು, ಮರುದಿನ ನೋಡಿದಾಗ ಅದರಲ್ಲಿ ಒಟ್ಟು 580 ಫೋಟೋಗಳು ಕ್ಲಿಕ್ಕಿಸಿದ್ದವು. ಆಶ್ಚರ್ಯ ಏನಂದ್ರೆ ಆದರಲ್ಲಿ ಸುಮಾರು 400 ಆ ಕರಡಿಯ ಸೆಲ್ಫಿಗಳೇ ಇದ್ದವು! ಬೌಲ್ಡರ್ ಓಪನ್ ಸ್ಪೇಸ್ ಮತ್ತು ಮೌಂಟೇನ್ ಪಾರ್ಕ್ಸ್ ಅವರು ತಮ್ಮ ಖಾತೆಯಲ್ಲಿ ಜನವರಿ 24 ರಂದು ಕರಡಿ ತೆಗೆದ ಚಿತ್ರಗಳನ್ನು ಟ್ವೀಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್​​ ಈಗಾಗಲೇ 1ಮಿಲಿಯನ್​​ ವೀಕ್ಷಣೆ ಕಂಡಿದೆ. ಜೊತೆಗೆ 8ಸಾವಿರ ಲೈಕ್​​ ಹಾಗೂ 2ಸಾವಿರದಷ್ಟು ರಿಟ್ವಿಟ್​​ಗಳನ್ನು ಪಡೆದುಕೊಂಡಿದೆ. ಇದರಿಂದ ಸೆಲ್ಫಿ ಕ್ರೇಜ್ ಪ್ರಾಣಿಗೂ ಬಂತಲ್ಲಾ ಎಂದು ಸಾಕಷ್ಟು ಜನ ಪ್ರತಿಕ್ರಿಯಿಸಿದ್ದಾರೆ.

Leave A Reply

Your email address will not be published.