Home Interesting Tech Tip: ಐಫೋನ್ ನಲ್ಲಿ ಅಡಗಿರುವ ಈ ಟ್ರಿಕ್ ಗೆ ನೀವು ವಾಹ್ ಅನ್ನದೇ ಇರ್ಲಿಕ್ಕಿಲ್ಲ!!!

Tech Tip: ಐಫೋನ್ ನಲ್ಲಿ ಅಡಗಿರುವ ಈ ಟ್ರಿಕ್ ಗೆ ನೀವು ವಾಹ್ ಅನ್ನದೇ ಇರ್ಲಿಕ್ಕಿಲ್ಲ!!!

Hindu neighbor gifts plot of land

Hindu neighbour gifts land to Muslim journalist

ಐಫೋನ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಐಫೋನ್ ಖರೀದಿ ಸಾಕಷ್ಟು ಜನರ ಕನಸು ಕೂಡ ಹೌದು. ಎಷ್ಟೋ ಜನ ಐಫೋನ್ ಬಗ್ಗೆ ಮಾಹಿತಿ ಸಂಗ್ರಹಿಸುವವರೂ ಇದ್ದಾರೆ. ಅವರಿಗೀಗ ಹೊಸ ಅಪ್ಡೇಟ್ ಇಲ್ಲಿದೆ ಅದೇನೆಂದರೆ, ಆಪಲ್ ಸಂಸ್ಥೆಯು ಇತ್ತೀಚಿಗೆ ಬಿಡುಗಡೆ ಮಾಡಿರುವಂತಹ ಐಫೋನ್ 14 ಭಾರಿ ಸದ್ದು ಮಾಡುತ್ತಿದೆ. ಹಾಗೆಂದು ಹಿಂದಿನ ಐಫೋನ್ 13 ಸರಣಿಯ ಫೋನ್‌ಗಳು ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿಲ್ಲ ಅದು ಕೂಡ ಮುನ್ನಡೆಯಲ್ಲಿದೆ. ಐಫೋನ್‌ನಲ್ಲಿರುವ ಅದ್ಭುತವಾದ ಫೀಚರ್ಸ್‌ಗಳು ಮೊಬೈಲ್ ಬಳಕೆದಾರರಿಗೆ ಅಚ್ಚರಿ ಮೂಡಿಸುವಂತಿದೆ.

ಐಫೋನ್ 13 ಸರಣಿಯ ಮೊಬೈಲ್ ನಲ್ಲಿ ಕೆಲವೊಂದು ಉತ್ತಮ, ಉಪಯುಕ್ತವಾದ ಫೀಚರ್ಸ್‌ಗಳಿವೆ. ಯಾವುದೆಲ್ಲಾ ಅಂದ್ರೆ ಟೆಸ್ಟ್ ಕರೆ, ನೋಟಿಫಿಕೇಶನ್, ಹೈಡ್ ಪ್ರೈವೆಟ್ ಫೋಟೊ ಹೀಗೇ ಇವೆಲ್ಲಾ ಸೇರಿದಂತೆ ಬಳಕೆದಾರರಿಗೆ ನೆರವಾಗುವಂತಹ ಟ್ರಿಕ್ಸ್ ಗಳಿವೆ. ಹಾಗಾದರೆ ಐಫೋನ್ 13 ನಲ್ಲಿರುವ ಟ್ರಿಕ್ಸ್ ಗಳು ಬಗ್ಗೆ ತಿಳಿಯೋಣ ಬನ್ನಿ.

ವಾಹನ ಚಾಲನೆ ಮಾಡುವಾಗ ಆಗಾಗ್ಗೆ ಕರೆಗಳನ್ನು ಸ್ವೀಕರಿಸುತ್ತೀರಾ? ಇಂತಹ ಸಂದರ್ಭಗಳಲ್ಲಿ ಬಳಕೆದಾರರು ಮೊದಲೇ ನಿರ್ಧಾರ ಆಗಿದರುವ Reply with Text () ಉತ್ತರಗಳನ್ನು ಉಪಯೋಗಿಸಿಕೊಂಡು ಕರೆ ಮಾಡಿದವರಿಗೆ ಕಳುಹಿಸಬಹುದು. ಕೇವಲ 3 ಆಯ್ಕೆಗಳಿದ್ದು, ಯಾವುದೇ ಸಂದರ್ಭಕ್ಕೂ ಬೇಕಾದ ಹಾಗೆ ಕಸ್ಟಮ್ ರಿಪ್ರೈಗಳನ್ನು ಸೆಟ್ ಮಾಡಬಹುದು. ಮೊದಲು ಸೆಟ್ಟಿಂಗ್‌ಗೆ ಹೋಗಿ ನಂತರ ಫೋನ್ ಅನ್ನು ಟ್ಯಾಪ್ ಮಾಡಿ. ಟೆಸ್ಟ್ ಮೂಲಕ ಪ್ರತ್ಯುತ್ತರ ಆಯ್ಕೆಮಾಡಿ ಮತ್ತು ನಿಮ್ಮ ಕಸ್ಟಮ್ ಪ್ರತ್ಯುತ್ತರಗಳನ್ನು ಹೊಂದಿಸಬೇಕು.

ಐಫೋನ್ 13 ಬಳಕೆದಾರರಿಗೆ ಹಿಂದಿನ ಕ್ಯಾಮೆರಾವನ್ನು ಬಳಸಿಕೊಂಡು ವಸ್ತುಗಳನ್ನು ಅಳೆಯಬಹುದು. ಹಾಗೇ ಬೇಕಾದ ಫೋಟೋಗಳನ್ನು ಹಿಡನ್ ಫೋಲ್ಡರ್ ನಲ್ಲಿ ಹೈಡ್ ಮಾಡಬಹುದು. ಹೈಡ್ ಮಾಡಲು ಬಯಸುವ ಫೋಟೊಗಳನ್ನು ಆಯ್ಕೆ ಮಾಡಿ, ಶೇರ್ ಬಟನ್ ಒತ್ತಿ ಮತ್ತು ಹೈಡ್ ಮಾಡು ಎಂದು ಆಯ್ಕೆ ಮಾಡಬೇಕು. ಆಗ ಫೋಟೋಗಳು ಸುರಕ್ಷಿತವಾಗಿರುತ್ತದೆ.

ಐಫೋನ್‌ನಲ್ಲಿ ಹಲವಾರು ಸ್ಮಾರ್ಟ್‌ ಫೋನ್‌ಗಳಿಗಿಂತ ವಿಭಿನ್ನವಾದ ಫೀಚರ್ಸ್‌ಗಳು ಇವೆ. ಫ್ಲ್ಯಾಶ್ ಅಲರ್ಟ್ನನ ಮೂಲಕ ಲೈವ್ ಫೋಟೋಗಳನ್ನು ಎಡಿಟ್ ಮಾಡಬಹುದು. ಲೈವ್ ಫೋಟೋಗಳನ್ನು ತುಂಬಾ ಸುಲಭವಾಗಿ ಅತಿ ಬೇಗನೆ ಮಾಡಿ ಮುಗಿಸಬಹುದು.

ಹೀಗೆ ಹಲವಾರು ಅದ್ಭುತವಾದ ಫೀಚರ್ಸನಿಂದ ಐಫೋನ್ ಎಲ್ಲರೂ ಗಮನ ಸೆಳೆದಿದೆ. ಇಷ್ಟೆಲ್ಲಾ ಫೀಚರ್ಸ ಇದೆ ಅಂದ್ರೆ ಇನ್ನೇಕೆ ತಡ ಐಫೋನ್ ಖರೀದಿ ಮಾಡಿ ಕನಸು ನನಸು ಮಾಡಿಕೊಳ್ಳಿ.