Home Interesting 2023ರ Best Smartphone : ಹೊಸ ವರ್ಷಕ್ಕೆ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರ್ತಾ ಇದೆ ಈ...

2023ರ Best Smartphone : ಹೊಸ ವರ್ಷಕ್ಕೆ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಬರ್ತಾ ಇದೆ ಈ ಎಲ್ಲಾ ಸ್ಮಾರ್ಟ್ ಫೋನ್ | ಫೀಚರ್ಸ್ ಸೂಪರ್!!!

Hindu neighbor gifts plot of land

Hindu neighbour gifts land to Muslim journalist

ಹೊಸ ವರ್ಷಕ್ಕೆ ಹೊಸ ಹೊಸ ಕಂಪನಿಯಿಂದ ಸ್ಮಾರ್ಟ್ ಫೋನ್ ಗಳು ವಿಶೇಷ ಫೀಚರ್ ಗಳೊಂದಿಗೆ ಮಾರುಕಟ್ಟೆಗೆ ಅದ್ದೂರಿಯಾಗಿ ಲಗ್ಗೆ ಇಡಲಿದೆ. ಹೌದು ಸ್ಮಾರ್ಟ್ ಫೋನ್ ಪ್ರಿಯರು ಇಲ್ಲೊಮ್ಮೆ ಗಮನಿಸಿ.
ಈಗಾಗಲೇ 2022ರಲ್ಲಿ ಟೆಕ್ನಾಲಜಿ ಕಂಪನಿಗಳು ಬಹಳಷ್ಟು ಪ್ರಗತಿಯನ್ನು ಕಂಡಿವೆ. ಸದ್ಯ 2023ರಲ್ಲಿ ಅನೇಕ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಕಾಲಿಡಲಿದೆ.

ಇದೀಗ ಕಂಪನಿಗಳು ಮುಂಬರುವ ಸ್ಮಾರ್ಟ್​ಫೋನ್​ಗಳ ಬಗ್ಗೆ ಮಾಹಿತಿಯನ್ನು ನೀಡಿದೆ. 2023ರ ನಿರೀಕ್ಷೆಯಲ್ಲಿರುವ ಸ್ಮಾರ್ಟ್​ಫೋನ್​ಗಳು ಯಾವುದೆಲ್ಲಾ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

  • ಒನ್​​ಪ್ಲಸ್​ 11 ಸ್ಮಾರ್ಟ್​ಫೋನ್: ಈ ಸ್ಮಾರ್ಟ್‌ಫೋನ್‌ ಫೆಬ್ರವರಿಯಲ್ಲಿ ಭಾರತದ ಮಾರುಕಟ್ಟೆಗೆ ಲಾಂಚ್‌ ಆಗಲಿದೆ. ಈಗಾಗಲೇ ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ ಫೆಬ್ರವರಿ 7 ರಂದು ಅನಾವರಣಗೊಳ್ಳುವುದು ಅಧಿಕೃತವಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 Gen 2 ಪ್ರೊಸೆಸರ್‌ ಹೊಂದಿರುವ ಒನ್‌ಪ್ಲಸ್‌ ಬ್ರ್ಯಾಂಡ್‌ನ ಮೊದಲ ಸ್ಮಾರ್ಟ್‌ಫೋನ್ ಎಂದು ಗುರುತಿಸಿಕೊಂಡಿದೆ.
  • ಐಫೋನ್ 15 ಸ್ಮಾರ್ಟ್​​ಫೋನ್: 2023ರಲ್ಲಿ ಆ್ಯಪಲ್ ಕಂಪನಿಯಿಂದ ಹೊಸ ಐಫೋನ್‌ ಬಿಡುಗಡೆ ಮಾಡುವುದು ಖಚಿತವಾಗಿದೆ. ಆದರೆ ಈ ವರ್ಷ ಬಿಡುಗಡೆಯಾಗಿರುವ ಐಫೋನ್ 14 ಮಾದರಿಗಿಂತ ಭಿನ್ನವಾಗಿ ಐಫೋನ್ 15 ಎಂಟ್ರಿ ನೀಡಲಿದೆ ಎಂದು ಕಂಪನಿ ಹೇಳಿದೆ.ಅದರಲ್ಲೂ ವಿಶೇಷವಾಗಿ ಐಫೋನ್ 15 ಕಡಿಮೆ ಬೆಲೆಯನ್ನು ಹೊಂದಿರುವ ಸಾಧ್ಯತೆಯಿದೆ. ಯಾಕೆಂದರೆ ಐಫೋನ್ 14 ದುಬಾರಿ ಬೆಲೆ ಎಂಬ ಕಾರಣಕ್ಕೆ ಜನಪ್ರಿಯತೆ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಇದೇ ಕಾರಣಕ್ಕೆ ಐಫೋನ್ 15 ಸೀರಿಸ್​, ಐಫೋನ್ 14 ಗಿಂತ ಕಡಿಮೆ ಬೆಲೆಯಲ್ಲಿ ಬರುವ ಮಾರಕಟ್ಟೆಗೆ ಬರುವ ಸಾಧ್ಯತೆಯಿದೆ.
  • ಸ್ಯಾಮ್​ಸಂಗ್ ಗ್ಯಾಲಕ್ಸಿ ಎಸ್​23 ಸ್ಮಾರ್ಟ್​ಫೋನ್​:
    ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಸೀರಿಸ್​ ಫೆಬ್ರವರಿ 1, 2023 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸರಣಿಯಲ್ಲಿ ಗ್ಯಾಲಕ್ಸಿ ಎಸ್​23, ಗ್ಯಾಲಕ್ಸಿ ಎಸ್​23 ಪ್ಲಸ್‌ ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಸ್ಮಾರ್ಟ್‌ಫೋನ್‌ನ ಜಾಗತಿಕ ಸೀರಿಸ್​ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 2 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ ಎಂದು ಕೆಲ ವರದಿಗಳು ತಿಳಿಸಿದೆ. ಆದರೆ ಭಾರತದಲ್ಲಿ ಎಕ್ಸಿನೋಸ್‌ ಆವೃತ್ತಿಯಲ್ಲಿಯೇ ಬಿಡುಗಡೆಯಾಗಲಿದೆ. ಇನ್ನು ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್​23 ಅಲ್ಟ್ರಾ ಸ್ಮಾರ್ಟ್​​ಫೋನ್‌ 200 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.
  • ಗೂಗಲ್​ ಪಿಕ್ಸೆಲ್​ 8: ಇನ್ನು ಮುಂದಿನ ವರ್ಷ ಬಿಡುಗಡೆಯಾಗುವ ಪ್ರಮುಖ ಫೋನ್‌ಗಳ ಸಾಲಿಗೆ ಗೂಗಲ್‌ ಪಿಕ್ಸೆಲ್ 8 ಸಿರಿಸ್​ ಕೂಡ ಸೇರಲಿದೆ. ಇನ್ನು ಗೂಗಲ್‌ ಪಿಕ್ಸೆಲ್ 8 ಕ್ಯಾಮೆರಾ ಹೊಸ HDR ತಂತ್ರವನ್ನು ಅಳವಡಿಸಿಕೊಳ್ಳುತ್ತದೆ ಎಂದು ವರದಿಯಾಗಿದೆ.

ನೀವು ಹೊಸ ಸ್ಮಾರ್ಟ್ ಫೋನನ್ನು ಖರೀದಿಸುವುದಿದ್ದರೆ ಇನ್ನು ಕೆಲವೇ ದಿನಗಳಲ್ಲಿ ಅದ್ಭುತ ಫೀಚರ್ ಒಳಗೊಂಡ ಈ ಮೇಲಿನ ಫೋನ್ ಗಳನ್ನು ಕಂಪನಿಗಳು ಬಿಡುಗಡೆ ಮಾಡಲಿದೆ.