ಇದ್ದಕ್ಕಿದ್ದಂತೆ ಬಣ್ಣ ಬದಲಾಯಿಸಿದ ಆಕಾಶ !! | ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು ಆಗಸದ ರಂಗು | ಇಲ್ಲಿದೆ ನೋಡಿ ಬಾನಂಗಳದ ಹೋಲಿ ದೃಶ್ಯಗಳು
ಬಿಸಿಲು ಮತ್ತು ಮಳೆ ಜೊತೆಯಾಗಿ ಬಂದಾಗ ಆಕಾಶದಲ್ಲಿ ಕಾಮನಬಿಲ್ಲು ಮೂಡುತ್ತದೆ. ಆಕಾಶಕ್ಕೆ ಒಂದು ಹೊಸ ರಂಗು ತಂದುಕೊಡುತ್ತದೆ. ಹೀಗಿರುವಾಗ ಇದ್ದಕ್ಕಿದ್ದಂತೆ ಆಕಾಶದ ಬಣ್ಣವೇ ಬದಲಾದರೆ ಹೇಗಿರಬೇಡ. ಹೌದು. ಇತ್ತೀಚಿಗೆ ಸ್ಕಾಟ್ಲೆಂಡ್‌ನ ಅನೇಕ ಪ್ರದೇಶಗಳಲ್ಲಿ ಇದ್ದಕ್ಕಿದ್ದಂತೆ ಆಕಾಶದ ಬಣ್ಣ ಬದಲಾಗಿ ಆಕಾಶ ಅದ್ಭುತವಾಗಿ ಕಂಡಿದೆ. ಅರೋರಾ ಬೋರಿಯಾಲಿಸ್ ನ ಈ ದೃಶ್ಯ ಆಕಾಶವನ್ನು ಬೆಳಗಿಸಿದ್ದು, ನೋಡುಗರನ್ನು ಮಂತ್ರಮುಗ್ಧಗೊಳಿಸಿದೆ. ಈ ದೃಶ್ಯಗಳು ಇದೀಗ ಸಾಕಷ್ಟು ವೈರಲ್ ಆಗಿವೆ. ವರದಿಯ ಪ್ರಕಾರ, ಅರೋರಾವು ಸೂರ್ಯನ ಭೂಕಾಂತೀಯ ಬಿರುಗಾಳಿಗಳಿಂದ ಉಂಟಾಗುವ ನೈಸರ್ಗಿಕ ವಿದ್ಯಮಾನವಾಗಿದೆ …