ಚಾರ್ಮಾಡಿ: ಅಲೇಕಾನ್ ಜಲಪಾತ ವೀಕ್ಷಣೆಗೆ ತೆರಳಿದ್ದ ಸಂದರ್ಭ ನಡೆದ ದುರ್ಘಟನೆ!!!ಸೆಲ್ಫಿ ತೆಗೆಯುವ ಹುಚ್ಚಿನಲ್ಲಿ ಕಾಲುಜಾರಿ ಬಿದ್ದು ಯುವಕನೋರ್ವನ ಕೈಕಾಲು ಮುರಿತ
ಮೂಡಿಗೆರೆ: ಚಾರ್ಮಾಡಿ ಘಾಟ್‌ನ ಅಲೇಕಾನ್ ಜಲಪಾತದ ಬಳಿ ಯುವಕರ ತಂಡವೊಂದು ಸೆಲ್ಫಿ ತೆಗೆಯುತ್ತಿದ್ದ ವೇಳೆ ಜೊತೆಗಿದ್ದ ಯುವಕನೋರ್ವ ಜಾರಿ ಬಿದ್ದು ಕೈ ಕಾಲುಗಳಿಗೆ ತೀವ್ರವಾದ ಗಾಯವಾದ ಘಟನೆ ಬುಧವಾರ ಸಂಜೆ ನಡೆದಿದೆ. ಮೂಲತಃ ಪಾವಗಡದವರಾದ ಯುವಕರ ತಂಡವೊಂದು ಜಲಪಾತ ವೀಕ್ಷಣೆಗೆ ತೆರಳಿದ್ದು,ಈ ವೇಳೆ ಅಭಿಲಾಶ್ (22) ಎಂಬ ಯುವಕ 80 ಅಡಿ ಆಳಕ್ಕೆ ಬಿದ್ದು ಕೈ ಮತ್ತು ಕಾಲು ಮುರಿತಕ್ಕೊಳಗಾಗಿದ್ದು ಕೂಡಲೇ ಗಾಯಳುವನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ವೃತ್ತಿಯಲ್ಲಿ ಚಾಲಕನಗಿರುವ ಅಭಿಲಾಶ್, ಮೂವರು ಯುವಕ ಜೊತೆಗೆ ಗೂಡ್ಸ್ …