ಸರಳವಾಸ್ತು ಚಂದ್ರಶೇಖರ ಗುರೂಜಿ

ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆಗೆ ಬಂದಿದ್ದ ಖ್ಯಾತ ಸ್ವಾಮಿಜಿಗೆ ಕಾರು ಅಪಘಾತ

ಬರ್ಬರವಾಗಿ ಹತ್ಯೆಯಾದ ಸರಳ ವಾಸ್ತು ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆಗೆ ತೆರಳಿದ್ದ ನಿಡಸೋಸಿ ಜಗದ್ಗುರು ಪಂಚಮ ಶಿವಲಿಂಗೇಶ್ವರ್ ಸ್ವಾಮೀಜಿ ಕಾರು ಅಪಘಾತವಾಗಿದೆ. ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಮುಗಿಸಿ ಹುಬ್ಬಳ್ಳಿಗೆ ವಾಪಸ್​ ಬರುವ ವೇಳೆ ತೇಗುರ ಕ್ರಾಸ್ ಬಳಿ ಸ್ವಾಮೀಜಿ ಕಾರು ಪಲ್ಟಿಯಾಗಿದೆ. ಸ್ವಾಮೀಜಿ ಅವರು ಬೆಳಗಾವಿಯ ಕೆ.ಎಲ್.ಈ ಆಸ್ಪತ್ರೆಗೆ ಬಂದಿದ್ದು, ಆರೋಗ್ಯ ತಪಾಸಣೆ ಬಳಿಕ ಮಠಕ್ಕೆ ತೆರಳಲಿರುವುದಾಗಿ ತಿಳಿದುಬಂದಿದೆ. ಅದೃಷ್ಟವಶಾತ್​ ಸ್ವಾಮೀಜಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಿವಲಿಂಗೇಶ್ವರ್ ಸ್ವಾಮೀಜಿ ಅವರು,ಬೆಳಗಾವಿ‌ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿಯ ಪ್ರಸಿದ್ಧ ದುರದುಂಡೇಶ್ವರ ಮಠದ ಸ್ವಾಮೀಜಿಯಾಗಿದ್ದಾರೆ. 

ಗುರೂಜಿಯನ್ನು ಬರ್ಬರವಾಗಿ ಕೊಂದದ್ದು ನೋವಾಗಿದೆ, ಆಸ್ತಿಗಾಗಿ ಕೊಲೆ ನಡೆದಿಲ್ಲ । ಆರೋಪಿ ಪತ್ನಿ ಹೇಳಿಕೆ

ಹುಬ್ಬಳ್ಳಿ: ನಮ್ಮ ಮತ್ತು ಗುರೂಜಿ ನಡುವೆ ಒಳ್ಳೆಯ ಸಂಬಂಧ ಇತ್ತು. ನಮ್ಮ ಮನೆಯವರು ಈ ರೀತಿ ಮಾಡಿದ್ದು ತಪ್ಪು ಎಂದು ಕೊಲೆ ಆರೋಪಿ ಮಹಾಂತೇಶ ಶಿರೂರ ಪತ್ನಿ ವನಜಾಕ್ಷಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಹಾಗಾದೆ ಕೊಲೆ ಯಾಕಾಯ್ತು ಅನ್ನುವುದು ಗೊತ್ತಾಗುತ್ತಿಲ್ಲ. ಆಕೆಯ ಹೇಳಿಕೆಯಿಂದ ಬಿಗ್ ಟ್ವಿಸ್ಟ್ ದೊರೆತಿದೆ. ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ನಮ್ಮ ತಂದೆಯ ಇದ್ದರು. ನನಗೆ ಬೇಸರ ಆದಾಗ ಗುರೂಜಿ ಜತೆ ಮಾತನಾಡುತ್ತಿದ್ದೆ. ಬೇನಾಮಿ ಆಸ್ತಿ ವಿಚಾರವಾಗಿ ಕೊಲೆ ನಡೆದಿದೆ ಅನ್ನೋದು ಸುಳ್ಳು …

ಗುರೂಜಿಯನ್ನು ಬರ್ಬರವಾಗಿ ಕೊಂದದ್ದು ನೋವಾಗಿದೆ, ಆಸ್ತಿಗಾಗಿ ಕೊಲೆ ನಡೆದಿಲ್ಲ । ಆರೋಪಿ ಪತ್ನಿ ಹೇಳಿಕೆ Read More »

ಸರಳವಾಸ್ತು ಇಷ್ಟು ಭೀಕರವಾಗಿ ಕೈ ಕೊಟ್ಟದ್ದು ಯಾಕೆ ಗೊತ್ತೇ ?
ಆ ಎರಡು ‘ವಾಸ್ತು ‘ ಗಳು ಕೊಲೆಗೆ ಪ್ರಮುಖ ಕಾರಣ !!

ಬೆಳ್ಳಂಬೆಳಿಗ್ಗೆಯ ಭೀಕರ ರಕ್ತಪಾತಕ್ಕೆ ಹುಬ್ಬಳ್ಳಿ ಅಕ್ಷರಶ: ಬೆದರಿ ಬೆಚ್ಚಿದೆ. ಅತ್ಯಂತ ಬರ್ಭರವಾಗಿ ಸರಳ ವಾಸ್ತು ಖ್ಯಾತಿಯ ಗುರೂಜಿ ಚಂದ್ರಶೇಖರ್ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಕೊಲೆಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದು, ಚಾಕು ಇರಿದು ಇರಿದು ಕೊಲೆ ಮಾಡಿ, ಇನ್ನು ಬದುಕುವುದು ಅಸಾಧ್ಯ ಅನ್ನುವಷ್ಟು ಮನಸಾರೆ ಚುಚ್ಚಿ ಹಂತಕರು ಪರಾರಿಯಾಗಿದ್ದಾರೆ. ಅವಳಿ ನಗರ ನಡೆದ ರಕ್ತಪಾತಕ್ಕೆ ತಲ್ಲಣ ಅನುಭವಿಸಿದೆ. ಇದು ನಿನ್ನೆಯ ಮಧ್ಯಾಹ್ನದ ಸಂಗತಿ. ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಸಿಸಿ …

ಸರಳವಾಸ್ತು ಇಷ್ಟು ಭೀಕರವಾಗಿ ಕೈ ಕೊಟ್ಟದ್ದು ಯಾಕೆ ಗೊತ್ತೇ ?
ಆ ಎರಡು ‘ವಾಸ್ತು ‘ ಗಳು ಕೊಲೆಗೆ ಪ್ರಮುಖ ಕಾರಣ !!
Read More »

ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಎಲ್ಲಿ ಹಾಗೂ ಎಂದು ?

ಚಂದ್ರಶೇಖರ್‌ ಗುರೂಜಿ ಅಂತ್ಯಸಂಸ್ಕಾರ ನಾಳೆ ಹುಬ್ಬಳ್ಳಿಯ ಸುಳ್ಳ ಗ್ರಾಮದ ಗುರೂಜಿಯವರ ಸ್ವಂತ ಜಮೀನಿನಲ್ಲಿ ಮಾಡಲಾಗುತ್ತದೆ ಈ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚಿಸಲಾಗಿದೆ ಎಂದು ಪರಿಚಯಸ್ಥರೊಬ್ಬರು ಹೇಳಿದ್ದಾರೆ. ‘ಚಂದ್ರಶೇಖರ್‌ ಗುರೂಜಿ ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸುಳ್ಳ ಗ್ರಾಮದ ರಸ್ತೆಯ ಜಮೀನಿನಲ್ಲಿ ನಡೆಯಲಿದೆ. ಎಂದು ಪರಿಚಯಸ್ಥ ಮೋಹನ ಲಿಂಬಿಕಾಯಿ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯೂ ನಾಳೆ ನಡೆಯುವ ಸಾಧ್ಯತೆ ಇದೆ ಎಂದಿದ್ದಾರೆ.  ಗುರೂಜಿಯವರಿಗೆ ಬಹಳಷ್ಟು ಅನುಯಾಯಿಗಳಿದ್ದು, ದೇಶದ ಬೇರೆ ಬೇರೆ ಕಡೆಗಳಲ್ಲೂ ಅನುಯಾಯಿಗಳಿದ್ದಾರೆ. ಹಾಗಾಗಿ ಅವ್ರು ನಾಳೆ …

ಚಂದ್ರಶೇಖರ ಗುರೂಜಿ ಅಂತ್ಯಕ್ರಿಯೆ ಎಲ್ಲಿ ಹಾಗೂ ಎಂದು ? Read More »

ಸರಳ ವಾಸ್ತು ಗುರೂಜಿಯ ಕೊಲೆಗೆ ಕ್ಷಣಕ್ಕೊಂದು ಟ್ವಿಸ್ಟ್, ಹತ್ಯೆಯಾಕಾಯ್ತು ಗೊತ್ತಾ?

ಸರಳವಾಸ್ತು ಕಾರ್ಯಕ್ರಮದ ಮೂಲಕ ರಾಜ್ಯದ ಜನರ ಮನೆ ಮನೆ ಮಾತಾಗಿದ್ದಂತ ಚಂದ್ರಶೇಖರ್ ಗುರೂಜಿಯನ್ನು ಇಂದು ಹುಬ್ಬಳ್ಳಿಯಲ್ಲಿ ಭೀಕರವಾಗಿ ಚಾಕುವಿನಿಂದ ಇರಿದು ಇಬ್ಬರು ಆರೋಪಿಗಳು ಹತ್ಯೆಗೈದಿದ್ದಾರೆ. ಈ ಪ್ರಕರಣಕ್ಕೆ ಕ್ಷಣಕ್ಕೊಂದು ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದ್ದು, ಕೊಲೆಯ ಹಿಂದೆ ಬೇನಾಮಿ ಆಸ್ತಿಯೇ ಕಾರಣ ಎನ್ನಲಾಗುತ್ತಿದೆ. ಅದರಲ್ಲೂ ಆಕೆಯೊಬ್ಬಳ ಹೆಸರಿನಲ್ಲಿ ಸಂಪಾದಿಸಿದ್ದಂತ ಆಸ್ತಿಯ ಮೂಲಕ ಹುಟ್ಟಿಕೊಂಡ ಜಗಳವೇ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಒಟ್ಟು 60 ಬಾರಿ ಇರಿದಿರಿದು ಅವರನ್ನು ಕೊಲೆ ಮಾಡಲಾಗಿದೆ. ಹುಬ್ಬಳ್ಳಿಯ ಪ್ರೆಸಿಡೆಂಟ್ ಹೋಟೆಲ್ ನಲ್ಲಿ ಹತ್ಯೆಗೀಡಾದ ಸರಳವಾಸ್ತು …

ಸರಳ ವಾಸ್ತು ಗುರೂಜಿಯ ಕೊಲೆಗೆ ಕ್ಷಣಕ್ಕೊಂದು ಟ್ವಿಸ್ಟ್, ಹತ್ಯೆಯಾಕಾಯ್ತು ಗೊತ್ತಾ? Read More »

error: Content is protected !!
Scroll to Top