ಧರ್ಮದ ಅಮಲು ಹತ್ತದ ಯಕ್ಷಗಾನಕ್ಕೆ ಧರ್ಮ ಸಂಘರ್ಷದ ಹೊಡೆತ |ಧ್ವನಿವರ್ಧಕ ಬಳಕೆಗೆ ಅವಕಾಶ ಕೊಡಬೇಕೆಂದು ಮನವಿ!!!
ಮಂಗಳೂರು : ರಾಜ್ಯದಲ್ಲಿ ಲೌಡ್ ಸ್ಪೀಕರ್ ಗಲಾಟೆ ಒಂದು ಹಂತ ತಲುಪಿದೆ. ಇತ್ತೀಚೆಗಷ್ಟೇ ಮುಸ್ಲಿಂ ಮುಖಂಡರು ಬೆಳಗ್ಗೆ ಆರು ಗಂಟೆಯವರೆಗಿನ ಆಝಾನ್ ನ್ನು ಮೈಕ್ ಇಲ್ಲದೇ ಮಾಡಲು ಒಪ್ಪಿದ್ದಾರೆ. ಆದರೆ ಕರಾವಳಿಯಲ್ಲಿ ಯಕ್ಷಗಾನ ಕಲಾವಿದರಿಗೆ ಮಾತ್ರ ಸರ್ಕಾರದ ಆದೇಶ ಕುತ್ತು ತಂದಿದೆ. ಕರಾವಳಿ ಜಿಲ್ಲೆಗಳಲ್ಲಿ ಯಕ್ಷಗಾನ ರಾತ್ರಿ ಇಡೀ ನಡೆಯುತ್ತದೆ. ಇಲ್ಲೂ ಕೂಡಾ ಮೈಕ್ ಬಳಕೆ ತಡೆಯುವ ಆತಂಕ ಯಕ್ಷಗಾನ ಕಲಾವಿದರಲ್ಲಿದೆ. ಈ ಬಗ್ಗೆ ಸರ್ಕಾರಕ್ಕೆ ಯಕ್ಷಗಾನ ಕಲಾವಿದರು, ಲೌಡ್ ಸ್ಪೀಕರ್ ಬಳಕೆ ವಿಚಾರದಲ್ಲಿ ಯಕ್ಷಗಾನ ಕ್ಷೇತ್ರಕ್ಕೆ …