Home latest Turkish SuperLig: ಫುಟ್ಬಾಲ್ ತಂಡದ ಅಧ್ಯಕ್ಷನಿಂದ ಆಟದ ಮಧ್ಯೆಯೇ ರೆಫ್ರಿಗೆ ಹಲ್ಲೆ – ಏಕಾಏಕಿ ಬಂದು...

Turkish SuperLig: ಫುಟ್ಬಾಲ್ ತಂಡದ ಅಧ್ಯಕ್ಷನಿಂದ ಆಟದ ಮಧ್ಯೆಯೇ ರೆಫ್ರಿಗೆ ಹಲ್ಲೆ – ಏಕಾಏಕಿ ಬಂದು ಮುಖಕ್ಕೆ ಗುದ್ದಲು ಇದೇನಾ ಕಾರಣ !!

Turkish SuperLig

Hindu neighbor gifts plot of land

Hindu neighbour gifts land to Muslim journalist

Turkish SuperLig: ಟರ್ಕಿಶ್ ಫುಟ್‌ಬಾಲ್ ಸೂಪರ್‌ಲಿಗ್‌ನಲ್ಲಿ (Turkish SuperLig) ಅಹಿತಕರ ಘಟನೆ ನಡೆದಿದೆ. ಅಂಕಾರಗುಕು (Ankaragucu) ಮತ್ತು ರೈಜೆಸ್ಪೋರ್ (Rizespor) ನಡುವಿನ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡ ಬಳಿಕ, ಪಂದ್ಯದ ರೆಫ್ರಿಗೆ ಅಂಕಾರಗುಕು ತಂಡದ ಅಧ್ಯಕ್ಷ ಫರುಕ್ ಕೋಕಾ ಅವರು ಜೋರಾಗಿ ಮುಖಕ್ಕೆ ಹೊಡೆದಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ. ಈ ಘಟನೆ ಹಿನ್ನೆಲೆ, ಟರ್ಕಿಶ್ ಸೂಪರ್‌ಲಿಗ್ ಅನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿದೆ. ಈ ಕುರಿತು ಟರ್ಕಿ ಫುಟ್‌ಬಾಲ್ ಫೆಡರೇಶನ್ (TFF) ಸೋಮವಾರ ಘೋಷಿಸಿದೆ.

ಮಾಹಿತಿ ಪ್ರಕಾರ, ಸೋಮವಾರ ಎರಿಯಾಮನ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರೈಜ್‌ಸ್ಪೋರ್ 1-1ರಿಂದ ಡ್ರಾ ಸಾಧಿಸಿತು. ಪಂದ್ಯವು ಅಂತ್ಯಗೊಂಡ ಬಳಿಕ ಕೋಕಾ ಮೈದಾನಕ್ಕೆ ಪ್ರವೇಶಿಸಿದ್ದಾರೆ. ನೇರವಾಗಿ ಬಂದು ಪಂದ್ಯದ ರೆಫರಿ ಹಲೀಲ್ ಮುಖಕ್ಕೆ ಹೊಡೆದಿದ್ದಾರೆ. ಈ ವೇಳೆ ರೆಫರಿ ಕೆಳಕ್ಕೆ ಕುಸಿದಿದ್ದಾರೆ. ಅಷ್ಟರಲ್ಲಿ ಫರುಕ್ ಕೋಕಾ ಅವರನ್ನು ತಡೆದು ಹಿಂದೆ ಕರೆದುಕೊಂಡು ಹೋಗಲಾಗಿದೆ. ಅತ್ತ ರೆಫರಿ ಕಣ್ಣಿನ ಕೆಳಗಡೆ ಊದಿಕೊಂಡಿದ್ದನ್ನು ದೃಶ್ಯದಲ್ಲಿ ತೋರಿಸಲಾಗಿದೆ. ಈ ಹೀನ ದಾಳಿಯನ್ನು ಹಲೀಲ್ ಉಮುತ್ ಮೆಲರ್ ಅವರ ಮೇಲೆ ಮಾತ್ರ ಮಾಡಲಾಗಿಲ್ಲ. ಈ ಅಮಾನವೀಯ ಮತ್ತು ಹೇಯ ದಾಳಿಯು ಟರ್ಕಿಯ ಫುಟ್‌ಬಾಲ್‌ ಜೊತೆಗೆ ಪಾಲುಪಡೆದಿರುವ ಎಲ್ಲರ ಮೇಲಾದ ದಾಳಿ” ಎಂದು ಟರ್ಕಿ ಫುಟ್‌ಬಾಲ್ ಫೆಡರೇಶನ್ ಹೇಳಿದೆ.

ಇದನ್ನು ಓದಿ: Brahmanda Guruji: ಮಗ ವಿನೋದ್ ರಾಜ್ ಬಗ್ಗೆ ಲೀಲಾವತಿಗೆ ನಂಬಿಕೆಯೇ ಇರಲಿಲ್ವೇ ?! ತಾಯಿ-ಮಗನ ಕುರಿತು ಮತ್ತೊಂದು ಸ್ಫೋಟಕ ಸತ್ಯ ಬಿಚ್ಚಿಟ್ಟ ಬ್ರಹ್ಮಾಂಡ ಗುರೂಜಿ

ಸದ್ಯ “ಟರ್ಕಿಶ್ ಫುಟ್ಬಾಲ್ ಫೆಡರೇಶನ್ ಎಲ್ಲಾ ಲೀಗ್‌ಗಳ ಎಲ್ಲಾ ಪಂದ್ಯಗಳನ್ನು ಅನಿರ್ದಿಷ್ಟವಾಗಿ ಅಮಾನತುಗೊಳಿಸಲು ನಿರ್ಧರಿಸಿದೆ” ಎಂದು ಫೆಡರೇಶನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. “ಸಂಬಂಧಿತ ಕ್ಲಬ್, ಕ್ಲಬ್ ಅಧ್ಯಕ್ಷರು, ಕ್ಲಬ್ ಅಧಿಕಾರಿಗಳು ಮತ್ತು ರೆಫರಿ ಉಮುತ್ ಮೆಲರ್ ಮೇಲೆ ದಾಳಿ ಮಾಡಿದ ಎಲ್ಲ ತಪ್ಪಿತಸ್ಥರಿಗೂ ಸೂಕ್ತ ಶಿಕ್ಷೆ ವಿಧಿಸಲಾಗುತ್ತದೆ,” ಎಂದು ಸ್ಪಷ್ಟಪಡಿಸಿದೆ.

https://t.co/6zUELDZsVN