Home Interesting ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ನಿವೃತ್ತಿ ಘೋಷಣೆ|2022 ರ ಕೊನೆಯ ಬಾರಿಗೆ ಟೆನಿಸ್ ಅಂಗಳದಲ್ಲಿ...

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ನಿವೃತ್ತಿ ಘೋಷಣೆ|2022 ರ ಕೊನೆಯ ಬಾರಿಗೆ ಟೆನಿಸ್ ಅಂಗಳದಲ್ಲಿ ಮಿಂಚಲಿರುವ ಸುಂದರಿ

Hindu neighbor gifts plot of land

Hindu neighbour gifts land to Muslim journalist

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ 2022 ತನ್ನ ಕೊನೆಯ ಸೀಸನ್ ಎಂದು ಹೇಳುವ ಮೂಲಕ ಕೊನೆಯ ಬಾರಿಗೆ ಟೆನಿಸ್ ಅಂಗಳದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಆಸ್ಟ್ರೇಲಿಯನ್ ಓಪನ್ ಮಹಿಳಾ ಡಬಲ್ಸ್ ಮೊದಲ ಸುತ್ತಿನಲ್ಲಿ ಪಾಲುದಾರ ನಾಡಿಯಾ ಕಿಚೆನೊಕ್ ಅವರೊಂದಿಗೆ ಸೋತ ನಂತರ ನಿವೃತ್ತಿ ಕುರಿತಾಗಿ ಮಾತನಾಡಿ’ ಇದು ತನ್ನ ಕೊನೆಯ ಋತು’ ಎಂದು ಹೇಳಿದ್ದಾರೆ.

ಬುಧವಾರ ಆಸ್ಟ್ರೇಲಿಯಾ ಓಪನ್ʼನಲ್ಲಿ ಸೋತ ನಂತ್ರ ಅವ್ರಿಂದ ಈ ಹೇಳಿಕೆ ಬಂದಿದೆ. ಇದು ತನ್ನ ಕೊನೆಯ ಸೀಸನ್ ಎಂದು ಸಾನಿಯಾ ಮಿರ್ಜಾ ಹೇಳಿದ್ದಾರೆ. ಆದ್ರೆ, ಅವಳು ಇಡೀ ಋತುವಿನಲ್ಲಿ ಆಡಲು ಸಾಧ್ಯವಾಗುತ್ತದೆಯೇ ಅಥವಾ ಇಲ್ಲವೇ ಅನ್ನೋದು ಇನ್ನೂ ಖಚಿತವಾಗಿಲ್ಲ.

ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ “ನನ್ನ ದೇಹವು ಕ್ಷೀಣಿಸುತ್ತಿದೆ. ಇಂದು ನನ್ನ ಮೊಣಕಾಲು ನಿಜವಾಗಿಯೂ ನೋಯುತ್ತಿದೆ ಮತ್ತು ನಾವು ಸೋತಿದ್ದೇವೆ ಎಂದು ನಾನು ಇದನ್ನು ಹೇಳುತ್ತಿಲ್ಲ. ಆದರೆ ವಯಸ್ಸಾದಂತೆ ನಾನು ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಿದೆ ಎಂದು ನಾನು ಭಾವಿಸುತ್ತೇನೆ”ಎಂದರು.

ನನ್ನ ಚೇತರಿಕೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ನಾನು ಭಾವಿಸುತ್ತೇನೆ, ನನ್ನ ಮಗನಿಗೆ ಮೂರು ವರ್ಷ ವಯಸ್ಸಾಗಿದೆ ನಾನು ಅವನೊಂದಿಗೆ ತುಂಬಾ ಪ್ರಯಾಣಿಸುವ ಮೂಲಕ ಅವನನ್ನು ಅಪಾಯಕ್ಕೆ ಸಿಲುಕಿಸುತ್ತಿದ್ದೇನೆ, ಅದನ್ನು ನಾನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ, “ಎಂದು ಸಾನಿಯಾ ಹೇಳಿದ್ದಾರೆ.

35 ರ ಹರೆಯದ ಸಾನಿಯಾ ಅವರು ಮಾರ್ಚ್ 2019 ರಲ್ಲಿ ತನ್ನ ಮಗನಿಗೆ ಜನ್ಮ ನೀಡಿದ ಬಳಿಕವೂ ಟೆನಿಸ್‌ಗೆ ಮರಳಿದ್ದರು ಆದರೆ ನಂತರ ಅವರ ಪ್ರಗತಿಗೆ ಕೊರೊನ ಹಬ್ಬುವಿಕೆ ಅಡ್ಡಿಯಾಯಿತು.2003ರಿಂದ ಅಂತಾರಾಷ್ಟ್ರೀಯ ಟೆನಿಸ್ ಆಡುತ್ತಿರುವ ಸಾನಿಯಾ ಮಿರ್ಜಾ ಸುಮಾರು ಎರಡು ದಶಕಗಳ ನಂತರ ಟೆನಿಸ್ ಅಂಗಳದಿಂದ ನಿರ್ಗಮಿಸಲಿದ್ದಾರೆ.