Home latest Dogs Marriage: ನಾಯಿಗಳಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿ, ಊರಿಗೆಲ್ಲಾ ಭರ್ಜರಿಯಾಗಿ ಊಟ ಹಾಕ್ತು ಈ ಕುಟುಂಬ!

Dogs Marriage: ನಾಯಿಗಳಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿ, ಊರಿಗೆಲ್ಲಾ ಭರ್ಜರಿಯಾಗಿ ಊಟ ಹಾಕ್ತು ಈ ಕುಟುಂಬ!

Hindu neighbor gifts plot of land

Hindu neighbour gifts land to Muslim journalist

Dogs Marriage :ನಿಯತ್ತಿಗೆ ಹೆಸರಾದ ನಾಯಿಗಳೆಂದರೆ ಪ್ರಾಣಿ ಪ್ರಿಯರಿಗೆಲ್ಲರಿಗೂ ತುಂಬಾನೇ ಇಷ್ಟ. ಅವುಗಳೊಂದಿಗೆ ಅವರಿಗೆ ಏನೋ ಒಂದು ಅವಿನಾಭಾವ ನಂಟು. ಈ ನಾಯಿಗಳನ್ನು ಮನೆ ಮಕ್ಕಳಂತೆ ಪ್ರೀತಿಸುವವರೂ ಹಲವರಿದ್ದಾರೆ. ಇತ್ತೀಚೆಗೆ ಈ ಶ್ವಾನಗಳಿಗೆ ಮನೆಮಕ್ಕಳಂತೆ ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸೋದನ್ನು, ಸೀಮಂತ ಮಾಡೋದನ್ನು ನೋಡಿದ್ದೇವೆ. ಆದರೆ ಇಲ್ಲೊಂದೆಡೆ ತಮ್ಮ ಮನೆಯ ಶ್ವಾನಗಳಿಗೆ ಅದ್ಧೂರಿಯಾಗಿ ಮದುವೆ ಮಾಡಿ, ಇಡೀ ಊರಿಗೇ ಊಟ ಹಾಕಿರುವಂತಹ ವಿಚಿತ್ರ ಘಟನೆಯೊಂದು ನಡೆದಿದೆ.

ಹೌದು, ಈ ರೀತಿಯ ನಾಯಿಗಳ ಮದುವೆ (Dogs Marriage) ಮಾಡಿಸಿರುವ, ಆದರೆ ಯಾರು ಮಾಡಿಸಿದ್ದಾರೆ, ಎಲ್ಲಿ ಮಾಡಿಸಿದ್ದಾರೆ ಎನ್ನುವ ಯಾವುದೇ ಮಾಹಿತಿಗಳಿಲ್ಲದ ವಿವಾಹ ಸಮಾರಂಭದ ವಿಡಿಯೋ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಸಾಕಷ್ಟು ಸುದ್ಧಿ ಮಾಡಿದೆ.

ಅಂದಹಾಗೆ ಥೇಟ್ ಹುಡುಗ ಹುಡುಗಿ ಮದುವೆ ಸಮಾರಂಭ ಹೇಗೆ ನಡೆಯುತ್ತದೋ, ಹಾಗೆ ನಡೆದ ಈ ಮದುವೆ ಸಮಾರಂಭದ ವಿಡಿಯೋದಲ್ಲಿ ಗಂಡು, ಹೆಣ್ಣು ಎರಡು ನಾಯಿಗಳು ಮದುಮಕ್ಕಳಂತೆ ಸಿಂಗಾರ ಗೊಂಡಿದ್ದವು. ಕೆಂಪು ಬಣ್ಣದ ರೇಷ್ಮೆ ಶಾಲಿನ ಜೊತೆ ವಿವಿಧ ಆಭರಣಗಳಿಂದ ಸಿಂಗರಿಸಲಾಗಿತ್ತು. ಅದರ ಜೊತೆಗೆ ಶ್ವಾನಕ್ಕೆ ಗಂಡು ಶ್ವಾನವನನ್ನು ಪುಟ್ಟ ಕಾರಿನಲ್ಲಿ ಕರೆ ತಂದರೆ ಹೆಣ್ಣು ಶ್ವಾನವನ್ನು ಹೆಣ್ಣಿನ ಕಡೆಯವರೆಲ್ಲಾ ಸೇರಿ ಹೊತ್ತುಕೊಂಡು ಬಂದಿದ್ದಾರೆ. ನಂತರ ಈ ಶ್ವಾನ ಜೋಡಿಗೆ ದೊಡ್ಡ ಕಲ್ಯಾಣ ಮಂಟಪದಲ್ಲಿ ಆರತಕ್ಷತೆಯೂ ನಡೆದಿದೆ. ಅಲ್ಲದೇ ಬಳಿಕ ಮದ್ವೆಗೆ ಬಂದವರಿಗೆಲ್ಲಾ ಭೋಜನ ಉಣಬಡಿಸಲಾಗಿದೆ. ಕೊನೆಯದಾಗಿ ಗಂಡು ಶ್ವಾನದ ಮನೆಗೆ ಹೆಣ್ಣು ಶ್ವಾನವನ್ನು ಕರೆದೊಯ್ಯಲಾಗಿದೆ.

ಇದನ್ನೂ ಓದಿ :South Korea: ಅನ್ನ, ನೀರು ನೀಡದೆ 1000ಕ್ಕೂ ಹೆಚ್ಚು ನಾಯಿಗಳನ್ನು ಕೊಂದ ದಕ್ಷಿಣ ಕೊರಿಯಾದ ಪಾಪಿ!