Home Social Viral video: ಅಬ್ಬಬ್ಬಾ.. ಏನ್ ನಟನೆ ಗುರೂ ಈ ಹಾವಿದ್ದು!! ಮುಟ್ಟಿದ್ರೆ ಸಾಕು ನೆಲಕ್ಕುರುಳಿ ಸತ್ತಂತೆ...

Viral video: ಅಬ್ಬಬ್ಬಾ.. ಏನ್ ನಟನೆ ಗುರೂ ಈ ಹಾವಿದ್ದು!! ಮುಟ್ಟಿದ್ರೆ ಸಾಕು ನೆಲಕ್ಕುರುಳಿ ಸತ್ತಂತೆ ನಟಿಸೋ ನಟ ಭಯಂಕರ ಉರಗವಿದು! ವಿಡಿಯೋ ವೈರಲ್!!

Dangerous snake viral video
Image source- YouTube

Hindu neighbor gifts plot of land

Hindu neighbour gifts land to Muslim journalist

Dangerous snake Viral video : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಉರಗ ತಜ್ಞರು(Entomologists) ಹುಟ್ಟಿಕೊಂಡಿದ್ದು, ಸಮಾಜಕ್ಕಾಗಲಿ, ಉರಗ(Snake) ಕುಲಗಳಿಗಾಗಲಿ ತಮ್ಮ ಕೈಲಾದ ಸೇವೆಯನ್ನು ನೀಡುತ್ತಾ ಎರಡೂ ಜೀವಿಗಳ ಜೀವರಕ್ಷಣೇಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಅಂತೆಯೇ ಇವರು ಸೋಷಿಯಲ್ ಮೀಡಿಯಾಗಳಲ್ಲೂ ಆಕ್ಟಿವ್ ಇದ್ದು ಬೇರೆ ಬೇರೆ ಜಾತಿಯ ಹಾವುಗಳ ಮೂಲಕ ಜನರನ್ನು ಬೆರಗುಗೊಳಿಸುತ್ತಾರೆ. ಆದರೆ ಇಲ್ಲೊಂದೆಡೆ ಸ್ವತಃ ಉರಗವೇ ತನ್ನ ವಿಶೇಷ ನಟನೆಯ ಮೂಲಕ ಜನರನ್ನು ಬೆರಗಾಗಿಸಿರೋ ಘಟನೆ ಬೆಳಕಿಗೆ ಬಂದಿದೆ.

ಹೌದು, ನೆಟ್ಟಿಗರು ಯಾವಾಗಲೂ ಹಾವಿನ ವೀಡಿಯೊಗಳ ಮೇಲೆ ವಿಶೇಷ ಆಕರ್ಷಣೆ ಹೊಂದಿರುತ್ತಾರೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ(Social media) ಬಳಕೆದಾರರನ್ನು ಅತಿ ಹೆಚ್ಚು ತಮ್ಮತ್ತ ಸೆಳೆದ ವಿಡಿಯೋಗಳಲ್ಲಿ ಹಾವುಗಳ ವಿಡಿಯೋಗಳು ಕೂಡ ಪ್ರಮುಖವಾದವು. ಹಾವು ಎಂದ ಕೂಡಲೇ ಎಂಥವರ ಕೈ ಕಾಲು ಕೂಡಾ ಒಂದು ಸಲಕ್ಕೆ ನಡುಗುತ್ತದೆ. ಆದರೆ ಇಲ್ಲೊಂದೆಡೆ ವೈರಲ್ ಆಗಿರೋ ಹಾವಿನ ನಟನೆಯ ವಿಡಿಯೋ (Dangerous snake Viral video) ನೋಡಿದ್ರೆ ಎಂತವರೂ ಕೂಡ ಬಿದ್ದು ಬಿದ್ದು ನಗುತ್ತಾರೆ.

ಅಂದಹಾಗೆ ಟೆಕ್ಸಾಸ್(Texas) ನದ್ದು ಎನ್ನಲಾದ ಹಾವಿನ ವಿಡಿಯೋವೊಂದು ಶೇರ್ ಆಗಿದ್ದು, ಭಾರೀ ವೈರಲ್(Viral) ಆಗಿದೆ. ಇದರಲ್ಲಿ ವಿಷಪೂರಿತ ಹಾವಿನ ವಿಡಿಯೋ ಖಂಡಿತಾ ನಿಮಗೆ ನಗು ಬರಿಸುತ್ತದೆ. ಯಾಕೆಂದರೆ ಈ ಹಾವು ಸಾಯುವಂತೆ ನಟಿಸುವುದನ್ನು ಈ ವಿಡಿಯೋದಲ್ಲಿ ಗಮನಿಸಬಹುದು. ಹೌದು…ಈ ವಿಷಕಾರಿ ಹಾವು ತನ್ನ ಎದುರಾಳಿಯ ಮೇಲೆ ದಾಳಿ ಮಾಡುವ ಬದಲು ತಾನೇ ಸತ್ತಂತೆ ನಟಿಸುತ್ತಿದೆ.

ಈ ವಿಡಿಯೋ ಯೂಟ್ಯೂಬ್(You tube) ನಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು 2017 ರಲ್ಲಿ ಚಿತ್ರೀಕರಿಸಲಾಗಿದೆ. ಈ ವಿಡಿಯೋದಲ್ಲಿ ವಿಷಪೂರಿತ ಹಾವು ಸಾಯುವಂತೆ ನಟಿಸುತ್ತಿರುವುದನ್ನು ಸ್ಪಷ್ಟವಾಗಿ ನೋಡಬಹುದು. ಹಾವುಗಳ ಇಂತಹ ನಾಟಕವನ್ನು ನೀವು ಹಿಂದೆಂದೂ ನೋಡಿರಲಿಕ್ಕಿಲ್ಲ. ಈ ವಿಡಿಯೋ ನೋಡಿ ನೆಟ್ಟಿಗರಂತೂ ಮಜಬೂತಾಗಿ ಕಮೆಂಟಿಸುತ್ತಿದ್ದಾರೆ. ಕೆಲವರು ನಟ-ನಟಿಯರಿಗಿಂತಲೂ ಚೆನ್ನಾಗಿ ನಟಿಸುತ್ತೆ ಈ ಹಾವು ಎಂದಿದ್ದಾರೆ. ಅಲ್ಲದೆ ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್‌ನಲ್ಲೂ ವಿಡಿಯೋ ಶೇರ್ ಆಗಿದೆ.

ಇದನ್ನೂ ಓದಿ: Salman khan: 57 ವರ್ಷವಾದರೂ ನಟ ಸಲ್ಮಾನ್ ಮದುವೆ ಆಗದಿರಲು ಅದರ ಸಮಸ್ಯೆಯೇ ಕಾರಣ: ರಹಸ್ಯ ಮಾಹಿತಿ ಹೊರಬಿಟ್ಟ ಸಲ್ಮಾನ್ ಅಪ್ಪ!!