Home latest Bigg Boss: ಬೀದಿ ಬೀದಿಯಲ್ಲಿ, ಊಟ ಕೊಡಿ ಎಂದು ಅಲೆಯುತ್ತಿದ್ದಾನೆ ಹುಚ್ಚ ವೆಂಕಟ್ –...

Bigg Boss: ಬೀದಿ ಬೀದಿಯಲ್ಲಿ, ಊಟ ಕೊಡಿ ಎಂದು ಅಲೆಯುತ್ತಿದ್ದಾನೆ ಹುಚ್ಚ ವೆಂಕಟ್ – ಏನಪ್ಪಾ ಇದು ಶಾಕಿಂಗ್ ನ್ಯೂಸ್?!

Bigg Boss

Hindu neighbor gifts plot of land

Hindu neighbour gifts land to Muslim journalist

Bigg Boss: ಹುಚ್ಚ ವೆಂಕಟ್ ಎಂಬ ಹೆಸರಿನಿಂದಲೇ ಖ್ಯಾತಿ ಪಡೆದ ವೆಂಕಟರಮಣ್ ಲಕ್ಷ್ಮಣ್ ಕನ್ನಡ ಚಿತ್ರರಂಗದ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಗಾಯಕರಾಗಿದ್ದಾರೆ. ವಿಶಿಷ್ಟ ರೀತಿಯಲ್ಲಿ ವರ್ತಿಸುವ ಈ ಹುಚ್ಚ ವೆಂಕಟ್ ಬಿಗ್ ಬಾಸ್ (Bigg Boss) ಸೀಜನ್ 3 ಶೋನಲ್ಲಿ ಗಲಾಟೆ ಮಾಡಿಕೊಂಡು ನಂತರ ಹುಚ್ಚ ವೆಂಕಟ್ ಫ್ಯಾನ್ಸ್ ಗಳು ಹುಟ್ಟಿಕೊಂಡರು. ಇವರು ಹಾಡಿರುವ ಕೆಲ ಫನ್ನಿ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲಾಗಿ ಮೆಚ್ಚುಗೆಗೆ ಪಾತ್ರವಾಗಿವೆ.

ಇದೀಗ ನಟ ಹುಚ್ಚ ವೆಂಕಟ್ ಈಗ ಬೀದಿ ಬೀದಿ ಅಲೆಯುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೌದು, ಬೆಂಗಳೂರಿನ ಕೊಡಿಗೇಹಳ್ಳಿ ಪ್ರದೇಶದಲ್ಲಿ ಹುಚ್ಚ ವೆಂಕಟ್ ಅಲೆದಾಡುತ್ತಿದ್ದು, ಮನೆ ಮನೆಗೆ ಹೋಗಿ ನೀರು ಕೊಡಿ, ಊಟ ಕೊಡಿ ಎಂದು ಕೇಳುತ್ತಿದ್ದಾರೆ ಎಂದು ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪ್ರಕಟಿಸಿದ್ದಾರೆ.

ಹುಚ್ಚ ವೆಂಕಟ್ ನನ್ನು ಈ ಪರಿಸ್ಥಿತಿಯಲ್ಲಿ ನೋಡಿ ಬೇಸರವಾಯಿತು. ನನ್ನ ಬಳಿಯಿದ್ದ ಹಣ ನೀಡಿದ್ದೇನೆ. ಊಟ ಕೊಡಿ ಎಂದು ಮನೆ ಮನೆಗೆ ಭಿಕ್ಷೆ ಬೇಡುತ್ತಿದ್ದಾರೆ. ಸದ್ಯಕ್ಕೆ ಕೊಡಿಗೇಹಳ್ಳಿ ಪ್ರದೇಶದಲ್ಲಿದ್ದಾರೆ ಎಂದು ವ್ಯಕ್ತಿಯೊಬ್ಬರು ಬರೆದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿದ್ದಾಗ ಸಹ ಸ್ಪರ್ಧಿಗೆ ಹೊಡೆದು ಮನೆಯಿಂದ ಹೊರಬಂದಿದ್ದರು. ಬಳಿಕ ಹಲವು ಬಾರಿ ಈ ರೀತಿ ಬೀದಿ ಬೀದಿ ಅಲೆದಾಡುತ್ತಿದ್ದ ಘಟನೆಗಳು ನಡೆದಿತ್ತು. ಇದೀಗ ಮತ್ತೆ ಅದೇ ರೀತಿ ಮನೆ ಮನೆಗೆ ಹೋಗಿ ಭಿಕ್ಷೆ ಬೇಡುತ್ತಿರುವ ದೃಶ್ಯ ಕಂಡುಬಂದಿರುವುದು ಜನರಲ್ಲಿ ಇವರ ವರ್ತನೆ ಬಗ್ಗೆ ಕುತೂಹಲ ಮೂಡಿದೆ.

https://twitter.com/bbk10karthii/status/1737422678984909040?ref_src=twsrc%5Etfw%7Ctwcamp%5Etweetembed%7Ctwterm%5E1737422678984909040%7Ctwgr%5E72a491487273a87ca5b5517cf277115ab09afe1e%7Ctwcon%5Es1_c10&ref_url=https%3A%2F%2Fnewsfirstlive.com%2Fhuccha-venkat-begging-in-bangalore-video-viral%2F

ಇದನ್ನು ಓದಿ: Bigg boss kannada: ಬಿಗ್ ಬಾಸ್ ಮನೆಯಲ್ಲಿ ಕದ್ದು ಮೊಬೈಲ್ ಬಳಕೆ ?! ವೈರಲ್ ಆಯ್ತು ಫೋಟೋಸ್ !!