Home Breaking Entertainment News Kannada South Stars: ʼಮಂಜುಮ್ಮೆಲ್‌ ಬಾಯ್ಸ್‌ʼ ಖ್ಯಾತಿಯ ನಟನ ಜೊತೆ ನಟಿ ಅಪರ್ಣಾ ದಾಸ್‌ ಮದುವೆ

South Stars: ʼಮಂಜುಮ್ಮೆಲ್‌ ಬಾಯ್ಸ್‌ʼ ಖ್ಯಾತಿಯ ನಟನ ಜೊತೆ ನಟಿ ಅಪರ್ಣಾ ದಾಸ್‌ ಮದುವೆ

South Stars

Hindu neighbor gifts plot of land

Hindu neighbour gifts land to Muslim journalist

South Stars: ಮಲಯಾಳಂ ನಟರಾದ ಅಪರ್ಣಾ ದಾಸ್ ಮತ್ತು ದೀಪಕ್ ಪರಂಬೋಲ್ ಏಪ್ರಿಲ್‌ನಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ಇವರ ಮದುವೆಯ ಆಮಂತ್ರಣ ಪತ್ರಿಕೆಯ ಚಿತ್ರವೊಂದು ಲೀಕ್ ಆಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಪರ್ಣಾ ಮತ್ತು ದೀಪಕ್ ಮಲಯಾಳಂನ ‘ಮನೋಹರಂ’ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.

ಇದನ್ನೂ ಓದಿ: Papmochani Ekadashi 2024: ಏಪ್ರಿಲ್ 5 ರಂದು ಏಕಾದಶೀಯ ಶುಭ ದಿನ; ಲಕ್ಷ್ಮೀ ನಾರಾಯಣನನ್ನು ಮೆಚ್ಚಿಸಲು ಈ ಕೆಲಸ ಮಾಡಿ

ವರದಿಯ ಪ್ರಕಾರ, ಅವರು ಕಳೆದ ಕೆಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರೆನ್ನಲಾಗಿದೆ. ಕಳೆದ ವರ್ಷ ಬಾಲಿಯಲ್ಲಿ ವಿಹಾರಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಕೂಡಾ ಇವರಿಬ್ಬರ ಫೊಟೋ ವೈರಲ್‌ ಆಗಿತ್ತು.. ಅಪರ್ಣಾ ಮತ್ತು ದೀಪಕ್ ಇಬ್ಬರೂ ತಮ್ಮ ಸಂಬಂಧ ಅಥವಾ ಮದುವೆಯ ಬಗ್ಗೆ ಇಲ್ಲಿಯವರೆಗೆ ಮಾತನಾಡಿಲ್ಲ. ಅಧಿಕೃತ ದೃಢೀಕರಣ ಇನ್ನಷ್ಟೇ ಬರಬೇಕಿದೆ.

ಇದನ್ನೂ ಓದಿ: HD kumaraswamy: ಒಕ್ಕಲಿಗ ಭದ್ರಕೋಟೆಯಲ್ಲಿ ಎಚ್‌ ಡಿ ಕುಮಾರಸ್ವಾಮಿ ಗೆಲ್ಲುವರೇ ? : ಮಂಡ್ಯದಲ್ಲಿ ಒಕ್ಕಲಿಗರ ಮತವೇ ನಿರ್ಣಾಯಕ

https://twitter.com/SufidulQuerist/status/1774814353146933581
ವೈರಲ್‌ ಆಗಿರುವ ಮದುವೆಯ ಆಮಂತ್ರಣ ಪತ್ರಿಕೆಯ ಪ್ರಕಾರ, ಅಪರ್ಣಾ ಮತ್ತು ದೀಪಕ್ ಅವರ ವಿವಾಹವು ಕೇರಳದ ವಡಕ್ಕಂಚೇರಿಯಲ್ಲಿರುವ ತೇವರಕಾಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಏಪ್ರಿಲ್ 24 ರಂದು ನಡೆಯಲಿದೆ. ಆಹ್ವಾನದ ಪ್ರಕಾರ, ಬೆಳಿಗ್ಗೆ 11 ರಿಂದ ಮಧ್ಯಾಹ್ನ 12 ರ ನಡುವೆ ತಾಳಿ ಕಟ್ಟುವ ಶಾಸ್ತ್ರವಿದೆ.