Home Karnataka State Politics Updates H D kumarswamy: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಕೇಂದ್ರ ಮಂತ್ರಿ ಪಟ್ಟ ?!...

H D kumarswamy: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿಗೆ ಕೇಂದ್ರ ಮಂತ್ರಿ ಪಟ್ಟ ?! ಬಿಜೆಪಿ ನಾಯಕನಿಂದಲೇ ಸಿಕ್ತು ಬಿಗ್ ಅಪ್ಡೇಟ್

H D kumarswamy

Hindu neighbor gifts plot of land

Hindu neighbour gifts land to Muslim journalist

H D kumarswamy: ರಾಜ್ಯದಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ(BJP) ಮತ್ತು ಜೆಡಿಎಸ್(JDS) ಪಕ್ಷಗಳು ಮೈತ್ರಿ ಮಾಡಿಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಇದೀಗ ಈ ಬೆನ್ನಲ್ಲೇ ಮುಂದೆ ಲೋಕಸಭೆಯಲ್ಲಿ ಗೆದ್ದರೆ ಕುಮಾರಸ್ವಾಮಿಯವರು(H D kumarswamy)ಕೕಂದ್ರದಲ್ಲಿ ಮಂತ್ರಿ ಆಗುತ್ತಾರೆ ಎಂದು ಬಿಜೆಪಿಯ ಪ್ರಬಲ ನಾಯಕರಾದ ಈಶ್ವರಪ್ಪ ಹೇಳಿದ್ದು, ಈ ಮೂಲಕ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರಾ? ಎಂಬುದುರ ಕುರಿತು ಕುತೂಹಲ ಹುಟ್ಟುಹಾಕಿದ್ದಾರೆ.

 

ಹೌದು, ನರೇಂದ್ರ ಮೋದಿಯವರು(PM Modi) ಭರ್ಜರಿ ಬಹುಮತದೊಂದಿಗೆ ಗೆದ್ದು ಮೂರನೇ ಭಾರಿಗೂ ಪ್ರಧಾನಿ ಆಗ್ತಾರೆ. ಆಗ ಅವರ ಸಚಿವ ಸಂಪುಟದಲ್ಲಿ ಎಚ್‌ಡಿ ಕುಮಾರಸ್ವಾಮಿ ಅವರು ಕೇಂದ್ರ ಮಂತ್ರಿಯಾದ್ರೆ ಕರ್ನಾಟಕ ರಾಜ್ಯಕ್ಕೆ, ದೇಶಕ್ಕೆ ತುಂಬಾ ಒಳ್ಳೆಯದಾಗುತ್ತೆ. ಬಿಜೆಪಿ- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಒಳ್ಳೆಯ ಆಡಳಿತ ‌ನೀಡಿರುವುದು ಇದಕ್ಕೆ ಉತ್ತಮ ನಿದರ್ಶನ ಎಂದು ಈಶ್ವರಪ್ಪ ಅವರು ಹೇಳಿದರು.

ಅಂದಹಾಗೆ ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಜೆಡಿಎಸ್ ಈಗಾಗಲೇ ಎನ್‌ಡಿಎ ಜೊತೆಗೆ ಸೇರಿಕೊಂಡಿದೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುತ್ತೆ. ದೇವೇಗೌಡರ ಮಾರ್ಗದರ್ಶನದಲ್ಲಿ ಕುಮಾರಸ್ವಾಮಿ ಒಳ್ಳೆಯ ಆಡಳಿತ ಕೊಟ್ಟಿದ್ದಾರೆ. ಕೇಂದ್ರ ಮಂತ್ರಾಯಾದರೆ ಇನ್ನೂ ಒಳ್ಳೆಯದಾಗುತ್ತೆ ಎಂದರು. ಈ ಮೂಲಕ ಕುಮಾರಸ್ವಾಮಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತತಾರೇನೋ? ಎನ್ನುವ ಕುರಿತು ಕುತೂಹಲ ಹುಟ್ಟಿಹಾಕಿಬಿಟ್ಟರು.

ಇದನ್ನು ಓದಿ: Bengaluru: ಶಾಲಾ ಸಮಯದಲ್ಲಿ ಬದಲಾವಣೆ?! ಸರ್ಕಾರ ಕೊಡ್ತು ಬಿಗ್ ಅಪ್ಡೇಟ್