Home Karnataka State Politics Updates Gruha Jyoti: ಗೃಹಜ್ಯೋತಿ ಗ್ರಾಹಕರಿಗೆ ಶಾಕಿಂಗ್‌ ನ್ಯೂಸ್‌; ಅಧಿಕ ವಿದ್ಯುತ್‌ ಬಳಕೆ ಮಾಡಿದವರಿಗೆಲ್ಲ ಎಲ್ಲಾ ಯೂನಿಟ್‌ಗೂ...

Gruha Jyoti: ಗೃಹಜ್ಯೋತಿ ಗ್ರಾಹಕರಿಗೆ ಶಾಕಿಂಗ್‌ ನ್ಯೂಸ್‌; ಅಧಿಕ ವಿದ್ಯುತ್‌ ಬಳಕೆ ಮಾಡಿದವರಿಗೆಲ್ಲ ಎಲ್ಲಾ ಯೂನಿಟ್‌ಗೂ ಬಿಲ್ ‌

Gruha Jyoti

Hindu neighbor gifts plot of land

Hindu neighbour gifts land to Muslim journalist

Gruha Jyoti: ರಾಜ್ಯದಲ್ಲಿ ಬಿಸಿಲ ಬೇಗೆ ಹೆಚ್ಚಿದೆ. ಜೊತೆಗೆ ವಿದ್ಯುತ್‌ ಬೇಡಿಕೆ ಕೂಡಾ ಹೆಚ್ಚಿದೆ. ಜನರು ಬಿಸಿಲ ಧಗೆಯನ್ನು ಕಡಿಮೆ ಮಾಡಲು ಎಸಿ, ಫ್ಯಾನ್‌, ಕೂಲರ್‌ ಗಳ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ವಿದ್ಯುತ್‌ ಬಳಕೆ ಹೆಚ್ಚಾಗಿದೆ. ಗೃಹಜ್ಯೋತಿ ಗ್ರಾಹಕರು ಕೂಡಾ ಸಾಮಾನ್ಯ ಗ್ರಾಹಕರಂತೆ ಎಲ್ಲಾ ಯೂನಿಟ್‌ಗೂ ನಿಗದಿತ ದರದಂತೆ ಇದೀಗ ಬಿಲ್‌ ಪಾವತಿಸಬೇಕಿದೆ.

ಇದನ್ನೂ ಓದಿ: Uber: ಗೂಗಲ್‌ ಟೆಕ್ಕಿಯನ್ನು ಅರ್ಧ ದಾರಿಯಲ್ಲಿ ಕೆಳಕ್ಕಿಳಿಸಿದ ಊಬರ್‌ ಚಾಲಕ

2022-23 ನೇ ಸಾಲಿನ ವಾರ್ಷಿಕ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡಲಾಗಿದೆ. ನಿಗದಿತ ಸರಾಸರಿಗಿಂತ 150 ಉಚಿತ ಯೂನಿಟ್‌ಗಿಂತ 50 ಯೂನಿಟ್‌ ಹೆಚ್ಚು ಬಳಕೆ ಮಾಡಿದ್ದಲ್ಲಿ ಪ್ರತಿ ಯೂನಿಟ್‌ಗೆ 7 ರೂ.ಪಾವತಿ ಮಾಡಬೇಕು.

ಇದನ್ನೂ ಓದಿ: Fuel Price: ದಿಢೀರ್‌ 15 ರೂ. ಇಂಧನ ದರ ಕಡಿತ ಮಾಡಿದ ಸರಕಾರ

ಇದೀಗ ಬಿಸಿಲ ಝಳ ಹೆಚ್ಚಾಗಿರುವ ಕಾರಣ ವಿದ್ಯುತ್‌ ಬಳಕೆ ಶೇ.20 ರಷ್ಟು ಹೆಚ್ಚಾಗಿದೆ. ಹೆಚ್ಚಿನ ಪ್ರಮಾಣದ ವಿದ್ಯುತ್‌ ಬಳಕೆ ಮಾಡುತ್ತಿರುವುದರಿಂದ ಗೃಹಜ್ಯೋತಿ ಬಳಕೆದಾರರು ಕೂಡಾ ಸಾಮಾನ್ಯ ಗ್ರಾಹಕರ ರೀತಿ ನಿಗದಿತ ದರದಂತೆ ಬಿಲ್‌ ಪಾವತಿ ಮಾಡಬೇಕಿದೆ.

ಶೇ.20ಕ್ಕೂ ಅಧಿಕ ಗೃಹಜ್ಯೋತಿ ಗ್ರಾಹಕರಿಗೆ ಇದು ಶಾಕಿಂಗ್‌ ನ್ಯೂಸ್‌ ಎಂದು ಹೇಳಬಹುದು. ಗೃಹಜ್ಯೋತಿ ಸರಾಸರಿ 200 ಯೂನಿಟ್‌ಗಿಂತ ಹೆಚ್ಚು ವಿದ್ಯುತ್‌ ಬಳಕೆಯಾದರೆ ಎಲ್ಲಾ ಯೂನಿಟ್‌ಗೂ ಬಿಲ್‌ ಕಟ್ಟಬೇಕು. ಕಡಿಮೆ ವಿದ್ಯುತ್‌ ಬಳಸಿದರೆ ಗೃಹಜ್ಯೋತಿ ಸೌಲಭ್ಯ ಸಿಗಲಿದೆ.