Home Karnataka State Politics Updates Yatnal hits Muslims: ಮುಸ್ಲಿಮರು 3 ಕಡೆ ಲಾಭ ಪಡೆಯುತ್ತಿದ್ದಾರೆ; ಮೀಸಲಾತಿ ಇವರಪ್ಪನ ಮನೆಯದ್ದಾ ?...

Yatnal hits Muslims: ಮುಸ್ಲಿಮರು 3 ಕಡೆ ಲಾಭ ಪಡೆಯುತ್ತಿದ್ದಾರೆ; ಮೀಸಲಾತಿ ಇವರಪ್ಪನ ಮನೆಯದ್ದಾ ? –ಗುಡುಗಿದ ಯತ್ನಾಳ್‌ !

Yatnal hits Muslims

Hindu neighbor gifts plot of land

Hindu neighbour gifts land to Muslim journalist

Yatnal hits Muslims: ಮುಸ್ಲಿಮರು (Muslims) ಮೂರು ಕಡೆಗಳಲ್ಲಿ ಲಾಭ ಪಡೆಯುತ್ತಿದ್ದಾರೆ. ಒಂದೇ ಕಡೆ ಲಾಭ ಸಿಗಬೇಕು. ಮೀಸಲಾತಿ (Yatnal hits Muslims) ಏನು ಇವರಪ್ಪನ ಮನೆಯದಾ ? ಎಂದು ಮೀಸಲಾತಿ ಕಡಿತ ವಿಚಾರಕ್ಕೆ ವಿಜಯಪುರ (Vijayapura) ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagouda Patil Yatnal) ಗುಡುಗಿದ್ದಾರೆ.

ನಿನ್ನೆ ವಿಜಯಪುರದಲ್ಲಿ (Vijayapura) ಅವರು ಮಾತನಾಡುತ್ತಿದ್ದರು. ನಾವು ದಲಿತರಿಗೆ ಇನ್ನೂ 2 ಪರ್ಸೆಂಟ್ ಮೀಸಲಾತಿ ಹೆಚ್ಚು ಮಾಡ್ತೀವಿ. ದಲಿತರಿಗೆ ಈಗ 17 ಮಾಡಿದ್ದೇವೆ, ಮುಂದೆ ನರೇಂದ್ರ ಮೋದಿ ಅವರು 21 ಪರ್ಸೆಂಟ್ ಮಾಡ್ತಾರೆ ಎಂದಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಈ ಮೀಸಲಾತಿ ರದ್ದು ಮಾಡ್ತೀವಿ ಎಂದ ಡಿಕೆಶಿ ಹೇಳಿಕೆಗೆ ಟಾಂಗ್ ನೀಡಿದ ಯತ್ನಾಳ್ ಅವರು, ನಮ್ಮ ಐತಿಹಾಸಿಕ ನಿರ್ಣಯದಿಂದ ಕಾಂಗ್ರೆಸ್ ಕಂಗಾಲಾಗಿದೆ. ಇದರಿಂದ ಕಾಂಗ್ರೆಸ್ ಥರಥರ ಎಂದು ಅಲುಗಾಡಿ ಹೋಗಿದೆ. ಡಿಕೆಶಿಗೆ ತಾಕತ್ತಿದ್ದರೆ ಮೀಸಲಾತಿ ರದ್ದು ಮಾಡ್ತೀವಿ ಎಂದು ಚುನಾವಣೆಯಲ್ಲಿ ಹೇಳಲಿ. ‘ಮೀಸಲಾತಿ ರದ್ದು ಮಾಡ್ತೀವಿ’ ಎಂದ್ರೆ ಚುನಾವಣೆಯಲ್ಲಿ ಕಾಂಗ್ರೆಸ್ ಡೆಪಾಜಿಟ್ ರದ್ದಾಗುತ್ತೆ ಎಂದು ಕುಟುಕಿದ್ದಾರೆ ಯತ್ನಾಳ್.

ಮಾಜಿ ಸಿಎಂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ ರಾಜ್ಯದಲ್ಲಿ 5 ವರ್ಷ ಸಿಎಂ ಆಗಿದ್ದವರಿಗೆ ಈ ಪರಿಸ್ಥಿತಿ ಬರಬಾರದಿತ್ತು. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರನ್ನ ಸಿಎಂ ಮಾಡಲ್ಲ. ಸಿದ್ದರಾಮಯ್ಯರನ್ನ ಬಲಿಪಶು ಮಾಡಲಿದ್ದಾರೆ. ಸಿದ್ದರಾಮಯ್ಯ ಸಮುದಾಯದವರು ಕಾಂಗ್ರೆಸ್ ಬೆಂಬಲಿಸಬಾರದು. ನಾಳೆ ಕಾಂಗ್ರೆಸ್ ಗೂಂಡಾನನ್ನ (ಡಿಕೆಶಿಯನ್ನು) ಸಿಎಂ ಮಾಡಿದ್ರೆ ನಾವು ನೀವು ಸೇರಿಯೇ ಒಟ್ಟಿಗೆ ಸಾಯ್ತೇವೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಅವರು ಚಾಟಿ ಬೀಸಿದ್ದಾರೆ.

ಸಿದ್ದರಾಮಯ್ಯ ಅವರ ಇವತ್ತಿನ ಸ್ಥಿತಿಗೆ ಅವರ ಅತಿಯಾದ ಮುಸ್ಲಿಂ ತುಷ್ಟೀಕರಣವೇ ಕಾರಣ. ಸಿದ್ದರಾಮಯ್ಯ ನವರು ಈಗ ಒನ್ ಸೈಡ್ ಆಗಿ ಹೋಗಿದ್ದಾರೆ. ನಾವು ಎಲ್ಲಾ ಜನಾಂಗಗಳನ್ನ ಪ್ರೀತಿ ಮಾಡಬೇಕು. ಒಂದೇ ಜನಾಂಗವನ್ನ ತಲೆ ಮೇಲೆ ಕೂರಿಸಿಕೊಂಡ್ರೆ, ಉಳಿದವರು ಬುದ್ಧಿ ಕಲಿಸುತ್ತಾರೆ’ ಎಂದು ಯತ್ನಾಳ್ ಟಾಂಗ್ ಮೇಲೆ ಟಾಂಗ್ ಕೊಟ್ಟಿದ್ದಾರೆ.

ವರುಣಾದಲ್ಲೂ ಸಿದ್ದರಾಮಯ್ಯ ಗೆಲ್ಲೋದು ಕಷ್ಟ. ಈಗ ಸೋಶಿಯಲ್ ಇಂಜಿನಿಯರಿಂಗ್ ಅಷ್ಟಾಗಿ ಸರಿ ಇಲ್ಲ. ಮೊದಲು ಜನ ಮುಗ್ದರಿದ್ದರು, ವೋಟು ಹಾಕ್ತಿದ್ರು, ಈಗ ಯಾರೆಲ್ಲ ಏನು ಮಾಡಿದ್ದಾರೆ ಅನ್ನೋ ಲಿಸ್ಟ್ ಜನರ ಬಳಿ ಇದೆ ಎಂದವರು ಹೇಳಿದ್ದಾರೆ.