Home Karnataka State Politics Updates K N Rajanna: ಟೆಂಟ್ ಒಳಗೆ ಗೊಂಬೆ ಕೂರಿಸಿ ರಾಮ, ರಾಮ ಅಂತಿದ್ರು !! ಅಯೋಧ್ಯೆ...

K N Rajanna: ಟೆಂಟ್ ಒಳಗೆ ಗೊಂಬೆ ಕೂರಿಸಿ ರಾಮ, ರಾಮ ಅಂತಿದ್ರು !! ಅಯೋಧ್ಯೆ ಶ್ರೀರಾಮನ ಕುರಿತು ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಕಾಂಗ್ರೆಸ್ ಸಚಿವ

K N Rajanna

Hindu neighbor gifts plot of land

Hindu neighbour gifts land to Muslim journalist

K N Rajanna: ಅಯೋಧ್ಯೆಯಲ್ಲಿ ರಾಮ ಮಂದಿರದೊಳಗೆ ಶ್ರೀರಾಮನ ಪ್ರಾಣ ಪ್ರತಿಷ್ಠೆಗೆ ದಿನಗಣನೆ ಶುರುವಾಗಿದ್ದು, ಇಡೀ ದೇಶ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಆದರೆ ಈ ಬೆನ್ನಲ್ಲೇ ಈ ಮಂದಿರ ಉದ್ಘಾಟನೆ ಕುರಿತು ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಶಾಸಕ, ಸಚಿವರು ವಿವಾದಾತ್ಮಕ, ಶಾಕಿಂಗ್ ರೀತಿ ಸ್ಟೇಟ್ಮೆಂಟ್ ನೀಡುತ್ತಿದ್ದಾರೆ. ಅಂತೆಯೇ ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವ ಕೆಎನ್ ರಾಜಣ್ಣ(K N Rajanna) ಅವರು ಅಯೋಧ್ಯೆಯ ಶ್ರೀರಾಮನ ಕುರಿತು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಹೌದು, ಬಿಜೆಪಿಯನ್ನು ಟೀಕಿಸುವ ಬರದಲ್ಲಿ ಸಹಕಾರ ಸಚಿವ ಕೆಎನ್ ರಾಜಣ್ಣ ಅವರು ಶ್ರೀರಾಮಚಂದ್ರನಿಗೇ ಅವಮಾನಮಾಡಿದ್ದಾರೆ. ಟೆಂಟ್ ಒಳಗೆ ಎರಡು ಗೊಂಬೆಗಳನ್ನಿಟ್ಟು ರಾಮ ರಾಮ ಎನ್ನುತ್ತಿದ್ದರು. ನಮ್ಮೂರಿನ ದೇವಸ್ಥಾನಗಳಿಗೆ ಹೋದಾಗ ಸಿಗುವ ಭಕ್ತಿಯ ಮತ್ತು ಧನಾತ್ಮಕ ಅನುಭೂತಿ ಅಲ್ಲಿರಲಿಲ್ಲ. ಅಯೋಧ್ಯೆಯ ರಾಮಲಲ್ಲಾನ ಬಗ್ಗೆ ನನಗೆ ಏನೂ ಅನಿಸಲೇ ಇಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Actress Anjali: ಬೆಡ್ ರೂಮ್, ಕಿಸ್ಸಿಂಗ್ ಸೀನ್ ಮಾಡುವಾಗ ನನಗೆ ಹೀಗೆ ಫೀಲ್ ಆಗುತ್ತೆ; ಹಾಟ್ ಸೀನ್ ಮಾಡುವಾಗ ಹೀಗೆ ಆಗೋದು ಸಹಜ; ಅಚ್ಚರಿಯ ಗುಟ್ಟು ಬಿಚ್ಚಿಟ್ಟ ನಟಿ ಅಂಜಲಿ!!

ತುಮಕೂರಿನಲ್ಲಿ ಮಂಗಳವಾರ ನಡೆದ ಹಿಂದುಳಿದ ವರ್ಗಗಳ ಒಕ್ಕೂಟ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಬಾಬ್ರಿ ಮಸೀದಿ ಬೀಳಿಸಿದ್ದಾಗ ಅಲ್ಲಿಗೆ ಹೋಗಿದ್ದೆ. ಅಲ್ಲಿ ಟೆಂಟ್ ಒಳಗೆ ಗೊಂಬೆ ಇಟ್ಟು ಶ್ರೀರಾಮ ಅಂತಾರೆ ಅಷ್ಟೇ. ಈಗೆಲ್ಲಾ ಶ್ರೀರಾಮನ ದೇವಸ್ಥಾನ ಕಟ್ಟಿಸ್ತಿದ್ದಾರೆ ಅಲ್ಲಿ. ಇನ್ನೊಂದು ಐದಾರು ತಿಂಗಳು ಕಳೀಲಿ ಏನೇನ್ ಬರ್ತವೆ, ಏನೇನು ಅಂತೇಳಿ. ಯಾವತ್ತೂ ಕೂಡ ಶ್ರೀರಾಮ ಎಲ್ಲಾ ಜನರನ್ನ ಆಶೀರ್ವದಿಸುವ ದೇವರು. ಅದಕ್ಕೋಸ್ಕರ ರಾಮರಾಜ್ಯದ ಕಲ್ಪನೆ ಬಂದಿದ್ದು ಎಂದು ತಿಳಿಸಿದ್ದಾರೆ.

ಅಲ್ಲದೆ ನಮ್ಮಲ್ಲಿ ಸಾವಿರಾರು ವರ್ಷಗಳ ಇತಿಹಾಸವಿರುವ ಅನೇಕ ರಾಮ ದೇಗುಲಗಳಿವೆ. ಆದರೆ, ಬಿಜೆಪಿ ಚುನಾವಣೆಗಾಗಿ ದೇಗುಲ ಕಟ್ಟುತ್ತಿದೆ. ಬಿಜೆಪಿ ಜನರನ್ನು ಮೋಸ ಮಾಡುತ್ತಿದೆ ಎಂದು ರಾಜಣ್ಣ ಟೀಕಿಸಿದ್ದಾರೆ. ರಾಜಣ್ಣ ಹೇಳಿಕೆಗೆ ಇದೀಗ ವ್ಯಾಪಕ ಆಕ್ಷೇಪ ವ್ಯಕ್ತವಾಗುತ್ತಿದೆ.