Home Karnataka State Politics Updates Donation to Ram Mandir: ಅಯೋಧ್ಯಾ ರಾಮ ಮಂದಿರಕ್ಕೆ 11ಕೋಟಿ ದೇಣಿಗೆ ನೀಡಿದ ಸಿಎಂ !!

Donation to Ram Mandir: ಅಯೋಧ್ಯಾ ರಾಮ ಮಂದಿರಕ್ಕೆ 11ಕೋಟಿ ದೇಣಿಗೆ ನೀಡಿದ ಸಿಎಂ !!

Donation to Ram Mandir

Hindu neighbor gifts plot of land

Hindu neighbour gifts land to Muslim journalist

Donation to Ram Mandir: ಬರುವ ಜನವರಿ 22ರಂದು ಅಯೋಧ್ಯೆಯ ನೂತನ ರಾಮ ಮಂದಿರದಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆಯಾಗಿ, ಪ್ರಾಣ ಪ್ರತಿಷ್ಠೆಯೂ ನಡೆಯಲಿದೆ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಸರ್ಕಾರದಿಂದ ಒಂದು ರೂಪಾಯಿ ದೇಣಿಗೆಯನ್ನೂ ಪಡೆದಿಲ್ಲ, ಕೇವಲ ಭಕ್ತಾಭಿಮಾನಿಗಳು ನೀಡಿದ ದೇಣಿಗೆಯಿಂದ ಈ ಭವ್ಯ ಮಂದಿರ ನಿರ್ಮಾಣವಾಗಿದೆ. ಇನ್ನೂ ಕೂಡ ಅನೇಕ ಭಕ್ತಾದಿಗಳು, ಗಣ್ಯಮಾನ್ಯರು ದೇಣಿಗೆ ನೀಡುತ್ತಿದ್ದಾರೆ. ಅಂತೆಯೇ ಇದೀಗ ಮಹಾರಾಷ್ಟ್ರ ಸಿಎಂ(Maharashtra CM)ಎಕನಾಥ್ ಶಿಂದೆ(Ekanath Shindhe) ಅವರು 11 ಕೋಟಿ ರೂಪಾಯಿಯಷ್ಟು ರಾಮ ಮಂದಿರಕ್ಕೆ ದೇಣಿಗೆ(Donation to Ram Mandir) ನೀಡಿದ್ದಾರೆ.

 

ಹೌದು, ಆಯೋಧ್ಯೆ ರಾಮ ಮಂದಿರ(Rama mandir)ಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಎಕನಾಥ್ ಶಿಂದೆ ನೇತೃತ್ವದ ಶಿವಸೇನೆ ಬಣ 11 ಕೋಟಿ ರೂಪಾಯಿ ದೇಣಿಗೆ ನೀಡಿದೆ. ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ನೆರವಾಗಲು ಶಿಂಧೆ ಶಿವಸೇನೆ ಬಣ 11 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಏಕನಾಥ್ ಶಿಂಧೆ ಪುತ್ರ, ಕಲ್ಯಾಣ ಕ್ಷೇತ್ರದ ಸಂಸದ ಶ್ರೀಕಾಂತ್ ಶಿಂದೆ ಹಾಗೂ ನಿಯೋಗ ಇಂದು ಆಯೋಧ್ಯೆಗೆ ಭೇಟಿ, ಶ್ರೀ ರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಚೆಕ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

Donation to Ram Mandir

ಅಂದಹಾಗೆ ಈ ಕುರಿತು ಪ್ರತಿಕ್ರಿಯಿಸಿದ ಶಿವಸೇನೆ ವಕ್ತಾರ ದಿವಗಂತ ಬಾಳಾಸಾಹೇಬ್ ಠಾಕ್ರೆ(Balasaheb takhre) ಸವಿನೆನಪಿನಲ್ಲಿ ಶಿಂಧೆ ನೇತೃತ್ವ ಶಿವಸೇನೆ ಬಣ ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದೇವೆ. ರಾಮಜನ್ಮಭೂಮಿ ಹೋರಾಟದಲ್ಲಿ ಬಾಳಸಾಹೇಬ್ ಠಾಕ್ರೆ ಹಾಗೂ ಅಪಾರ ಶಿವಸೇನೆ ಕಾರ್ಯಕರ್ತರು ಮಹತ್ತರ ಕೊಡುಗೆ ಸಲ್ಲಿಸಿದ್ದಾರೆ. ರಾಮ ಮಂದಿರ ಬಾಳಾಸಾಹೇಬ್ ಠಾಕ್ರೆ ಕನಸಾಗಿತ್ತು. ಇದೀಗ ಅವರ ಸವಿನೆನಪಿನಲ್ಲಿ 11 ಕೋಟಿ ರೂಪಾಯಿ ದೇಣಿಗೆ ನೀಡಿದ್ದೇವೆ ಎಂದಿದ್ದಾರೆ.