Home Karnataka State Politics Updates BJP: ಪಕ್ಷ ತೊರೆಯುವ ಸುದ್ದಿ ಬೆನ್ನಲ್ಲೇ ಸದಾನಂದ ಗೌಡರಿಗೆ ಭರ್ಜರಿ ಆಫರ್ ಕೊಟ್ಟ ಬಿಜೆಪಿ ಹೈಕಮಾಂಡ್!!

BJP: ಪಕ್ಷ ತೊರೆಯುವ ಸುದ್ದಿ ಬೆನ್ನಲ್ಲೇ ಸದಾನಂದ ಗೌಡರಿಗೆ ಭರ್ಜರಿ ಆಫರ್ ಕೊಟ್ಟ ಬಿಜೆಪಿ ಹೈಕಮಾಂಡ್!!

BJP

Hindu neighbor gifts plot of land

Hindu neighbour gifts land to Muslim journalist

BJP: ಲೋಕಸಭಾ ಚುನಾವಣೆಗೆ(Parliament Election) ರಾಜ್ಯದಲ್ಲಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಟಿಕೆಟ್ ವಂಚಿತ ಬಿಜೆಪಿ(BJP)ಯ ಪ್ರಮುಖ ನಾಯಕರು ಒಳಗೊಳಗೆ ಕೆಂಡಕಾರುತ್ತಿದ್ದಾರೆ. ಈಗಾಗಲೇ ಕೆ ಎಸ್ ಈಶ್ವರಪ್ಪನವರು ಬಂಡಾಯವೆದಿದ್ದು, ಈ ಬೆನ್ನಲ್ಲೇ ಮಾಜಿ ಸಿಎಂ ಸದಾನಂದ ಗೌಡರು(Sadananda Gowda)ಕಾಂಗ್ರೆಸ್ ಸೇರೋದು ಬಹುತೇಕ ಫಿಕ್ಸ್ ಎನ್ನಲಾಗಿದೆ. ಆದರೀಗ ಈ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಸದಾನಂದ ಗೌಡರಿಗೆ ಭರ್ಜರಿ ಆಫರ್ ಕೊಟ್ಟಿದೆ.

ಇದನ್ನೂ ಓದಿ: Crime News: ಬೆಂಗಳೂರಿನಲ್ಲಿ ತನ್ನ 2 ವರ್ಷದ ಮಗುವನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಗಂಭೀರ

ಹೌದು, ಟಿಕೆಟ್ ಸಿಗದೆ ರೊಚ್ಚಿಗೆದ್ದ ಸದಾನಂದ ಗೌಡರನ್ನು ಬಿಜೆಪಿ ಹೈಕಮಾಂಡ್ ಸಮಾಧಾನಪಡಿಸಲು ಮುಂದಾಗಿದೆ. ಸದಾನಂದಗೌಡರನ್ನು ದೂರವಾಣಿ ಕರೆ ಮೂಲಕ ಸಂಪರ್ಕಿಸಿದ ಬಿಜೆಪಿ ಹೈಕಮಾಂಡ್, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್ ಆಫರ್ ಕೊಟ್ಟು ಮುನಿಸು ಶಮನಗೊಳಿಸುವ ಪ್ರಯತ್ನ ಮಾಡಿದೆ ಎನ್ನಲಾಗಿದೆ.

ಇದನ್ನೂ ಓದಿ: Hyderabad: ಯಾರೂ ಇಲ್ಲದಾಗ ಮನೆಗೆ ಬಾಯ್ ಫ್ರೆಂಡ್ ಕರೆಸಿದ ಹುಡುಗಿ – ಸಡನ್ ಆಗಿ ಎಂಟ್ರಿ ಕೊಟ್ಟ ಅಮ್ಮ, ನಡೆದೇ ಹೋಯ್ತು ಘೋರ ಕೃತ್ಯ

ಅಂದಹಾಗೆ ದೊರೆತ ಮಾಹಿತಿ ಪ್ರಕಾರ ಬಿಜೆಪಿ ವಿರುದ್ಧ ಕೋಪಗೊಂಡಿರುವ ಒಕ್ಕಲಿಗ ನಾಯಕರಾಗಿರುವ ಸದಾನಂದಗೌಡರಿಗೆ ಕಾಂಗ್ರೆಸ್‌ ಮೈಸೂರು ಲೋಕಸಭಾ ಕ್ಷೇತ್ರದ ಟಿಕೆಟ್‌ ಆಫರ್‌ ನೀಡಿದೆ. ಹೀಗಾಗಿ ಈ ವಿಚಾರ ತಿಳಿಯುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ದೆಹಲಿಗೆ ತೆರಳುವ ಮುನ್ನ ಸದಾನಂದಗೌಡರ ಜೊತೆ ದೂರವಾಣಿ ಮೂಲಕ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳು ಪ್ರಯತ್ನ ನಡೆಸಿದರು. ಅಲ್ಲದೇ ಬಿಜೆಪಿ ಹೈಕಮಾಂಡ್‌ ಸಹ ಕರೆ ಮಾಡಿ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಬಗ್ಗೆ ಹೈಕಮಾಂಡ್ ಆಫರ್ ನೀಡಿದರೂ ಸದಾನಂದಗೌಡ ಅವರು ಸಹಮತ ಸೂಚಿಸಿಲ್ಲ ಎಂದು ತಿಳಿದು ಬಂದಿದೆ.