Home Food Weight Loss Tips : ಬೆಳ್ಳಂಬೆಳಗ್ಗೆ ಬರೀ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ತಿಂದರೆ ತೂಕ ಕಡಿಮೆಯಾಗುವುದು...

Weight Loss Tips : ಬೆಳ್ಳಂಬೆಳಗ್ಗೆ ಬರೀ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ತಿಂದರೆ ತೂಕ ಕಡಿಮೆಯಾಗುವುದು ಖಂಡಿತ!

Hindu neighbor gifts plot of land

Hindu neighbour gifts land to Muslim journalist

ಹಲವಾರು ಜನರು ತೂಕ ಕಡಿಮೆ ಮಾಡಿಕೊಳ್ಳಲು ವಿವಿಧ ರೀತಿಯಲ್ಲಿ ಪ್ರಯತ್ನಿಸಿರುತ್ತಾರೆ. ಆದರೆ ತೂಕವನ್ನು ಹೀಗೂ ಇಳಿಸಿಕೊಳ್ಳಬಹುದು. ಹೇಗೆ? ಹೇಗೆಂದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ಸೇವಿಸಿದರೆ ಸಾಕು 7 ದಿನಗಳಲ್ಲಿ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ.

ಸೇಬು ಹಣ್ಣು : ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇಬು ಹಣ್ಣು ತಿನ್ನುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದರಲ್ಲಿ ಆಪಲ್ ಫೈಬರ್ ಸೇರಿದಂತೆ ಹಲವು ಪೋಷಕಾಂಶಗಳು ಸಮೃದ್ಧವಾಗಿವೆ. ಹಾಗಾಗಿ ತೂಕ ಇಳಿಸಲು ಈ ಸೇಬುಹಣ್ಣು ಸಹಕಾರಿಯಾಗಿದೆ.

ಬಾಳೆಹಣ್ಣು : ಬಾಳೆಹಣ್ಣನ್ನು ಬೆಳಗ್ಗಿನ ಸಮಯ ಖಾಲಿ ಹೊಟ್ಟೆಯಲ್ಲಿ ತಿನ್ನೋದ್ರಿಂದ ತೂಕ ಕಡಿಮೆಯಾಗುತ್ತದೆ. ಬಾಳೆಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ತೂಕವನ್ನು ಕಡಿಮೆ ಮಾಡಲು ಸಹಕಾರಿಯಾದ ಹಲವು ಪೋಷಕಾಂಶಗಳು ಇದೆ. ಹಾಗಾಗಿ ನೀವು ತೂಕ ಕಡಿಮೆ ಮಾಡಿಕೊಳ್ಳಲು ಬಯಸಿದರೆ ಇದರ ಸೇವನೆ ಉತ್ತಮ.

ಕಿತ್ತಳೆ : ಕಿತ್ತಳೆ ಸೇವನೆಯು ತೂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದ್ದು, ಇದನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ, ತೂಕವನ್ನು ಸುಲಭವಾಗಿ ಕಡಿಮೆ ಮಾಡಬಹುದಾಗಿದೆ.

ಪಪ್ಪಾಯಿ : ಸೇಬು ಹಣ್ಣು ಮಾತ್ರವಲ್ಲದೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿಯನ್ನು ಸೇವಿಸಿ. ಇದರಿಂದ ತೂಕದಲ್ಲಿ ಇಳಿಕೆಯಾಗುತ್ತದೆ‌. ಪಪ್ಪಾಯಿಯಲ್ಲಿ ನಾರಿನಂಶವು ಹೇರಳವಾಗಿದ್ದು, ತೂಕ ಕಡಿಮೆಯಾಗಲು ಸಹಕಾರಿಯಾಗಿದೆ.

ಕಿವಿ : ಕಿವಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇರುವುದರಿಂದ ಇದು ನಿಮ್ಮ ತೂಕ ಇಳಿಕೆಗೆ ಸಹಕಾರಿಯಾಗಲಿದೆ. ಅದಕ್ಕೆಂದು ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಿರಿ. ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಿ.