Home Interesting ಟೀ ಬೇಡವೆಂದ ಡಿಸಿಗೆ ಮದ್ಯಪಾನ ಮಾಡುತ್ತೀರಾ!! ಎಂಬ ಆಫರ್ ಕೊಟ್ಟ ಮಹಾರಾಷ್ಟ್ರ ಕೃಷಿ ಸಚಿವ|ಈ ಕಹಾನಿಯ...

ಟೀ ಬೇಡವೆಂದ ಡಿಸಿಗೆ ಮದ್ಯಪಾನ ಮಾಡುತ್ತೀರಾ!! ಎಂಬ ಆಫರ್ ಕೊಟ್ಟ ಮಹಾರಾಷ್ಟ್ರ ಕೃಷಿ ಸಚಿವ|ಈ ಕಹಾನಿಯ ಡೀಟೇಲ್ಸ್ ಇಲ್ಲಿದೆ!!

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ಮಾತಾಡೋವಾಗ ಸಣ್ಣ ಪುಟ್ಟ ವಿಷಯಗಳಿಗೆ ಕೆಲವೊಂದು ಮಾತುಗಳು ಬಂದು ಹೋಗುತ್ತದೆ.

ಆದರೆ ಇಲ್ಲಿ ದೊಡ್ಡ ಜನರ ನಡುವೆ ವಿಷಯ ಸ್ವಲ್ಪ ದೊಡ್ಡದಾಗೇ ಇದೆ. ಅದೇನೆಂದರೆ ಟೀ ಬೇಡ ಎಂದ ಡಿಸಿಗೆ ಮಹಾರಾಷ್ಟ್ರದ ಕೃಷಿ ಸಚಿವ ಹಾಗಾದರೆ ಮದ್ಯ ಕುಡಿತೀರಾ ಅಂತಾ ಕೇಳಿದ್ದಾರೆ. ಅರೆ! ಹೀಗೇಕೆ ಕೇಳಿದರಿವರು ಅಲ್ವಾ, ಹಾಗಿದ್ರೆ ಯಾಕೆ ಅಂತ ನೋಡೋಣ!!

ಮಹಾರಾಷ್ಟ್ರದ ಕೃಷಿ ಸಚಿವ ಅಬ್ದುಲ್ ಸತ್ತಾರ್ ಅವರು ಜಿಲ್ಲಾಧಿಕಾರಿ ರಾಧಾಬಿನೋದ್ ಶರ್ಮಾ ಅವರಿಗೆ ಮದ್ಯ ಕುಡಿತೀರಾ ಎಂದು ಕೇಳಿರುವ ವೀಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಮಾಡಿದೆ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪ್ರವಾಸದಲ್ಲಿರುವಾಗ ಅಬ್ದುಲ್ ಸತ್ತಾರ್ ಅವರೊಂದಿಗೆ ಅಕ್ಟೋಬರ್ ೨೧ ರಂದು ಜಿಲ್ಲೆಯ ಗೆವ್ರಾಯಿ ತಾಲೂಕಿನಲ್ಲಿ ಅತಿವೃಷ್ಟಿಯಿಂದಾದ ಬೆಳೆ ಹಾನಿಯ ಕುರಿತು ಪರಿಶೀಲನೆ ನಡೆಸಲು ರಾಧಾಬಿನೋದ್ ಶರ್ಮಾ ಬಂದಿದ್ದರು. ಈ ಸಂದರ್ಭದಲ್ಲಿ ಚಹಾ ನೀಡಲು ಬಂದಾಗ ಬೇಡವೆಂದು ನಿರಾಕರಿಸಿದ್ದಾರೆ ಆಗ ರಾಧಾಬಿನೋದ್ ಶರ್ಮಾ ಮದ್ಯ ಕುಡಿತೀರಾ ಎಂದು ಅಬ್ದುಲ್ ಸತ್ತಾರ್ ಚೆನ್ನಾಗಿಯೇ ಅಣಕಿಸಿದ್ದಾರೆ.

ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಭಾರಿ ಆಗುತ್ತಿದೆ. ಪ್ರತಿಪಕ್ಷದ ವಿರುದ್ಧ ಮಾತೆತ್ತಲು ಎಲ್ಲಿ ಏನು ಸಿಗುತ್ತದೆ ಎಂದು ಕಾಯುವ ಪಕ್ಷದವರು, ಸಾಕಷ್ಟು ಟೀಕೆಗಳ ಮಳೆಯನ್ನೇ ಸುರಿಸಿದ್ದಾರೆ.

ಮಹಾರಾಷ್ಟ್ರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ಸಾವಂತ್ ಸತ್ತಾರ್ ಅವರು ಇದು ಬೆಳೆ ಹಾನಿ ಪರಿಶೀಲನೆಯ ಪ್ರವಾಸವೋ ಇಲ್ಲಾ ಮದ್ಯ ಸೇವಿಸಲು ಹೋಗಿರುವ ಪ್ರವಾಸವೋ ಎಂದು ಅಣಕಿಸುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ.