Home Entertainment ಬಿಕಿನಿ ಧರಿಸಿ ಹೊಲದಲ್ಲಿ ಕೆಲಸ ಮಾಡ್ತಾಳೆ ಈ ಬಿಂದಾಸ್ ರೈತ ಮಹಿಳೆ! ಈ ‘ಬಿಕಿನಿ ಪಾರ್ಮರ್’ನ...

ಬಿಕಿನಿ ಧರಿಸಿ ಹೊಲದಲ್ಲಿ ಕೆಲಸ ಮಾಡ್ತಾಳೆ ಈ ಬಿಂದಾಸ್ ರೈತ ಮಹಿಳೆ! ಈ ‘ಬಿಕಿನಿ ಪಾರ್ಮರ್’ನ ಪೋಟೋ, ವಿಡಿಯೋಗಳೀಗ ಎಲ್ಲೆಡೆ ವೈರಲ್!!

Hindu neighbor gifts plot of land

Hindu neighbour gifts land to Muslim journalist

ಮಹಳೆಯರು ಬಟ್ಟೆ ವಿಚಾರವಾಗಿ ನಡೆಯುವ ಚರ್ಚೆಗಳಿಗೆ ಎಂದಿಗೂ ಕೊನೆ ಇಲ್ಲ. ಅದು ಎಂದಿಗೂ ಜೀವಂತವಿರುವ ಚರ್ಚೆ. ಹುಡುಗಿಯರೆಲ್ಲ ಎಂತಹ ಡ್ರೆಸ್ ಧರಿಸಬೇಕೆಂದು ಹಲವರು ಅಡ್ವೈಸ್ ಮಾಡುವರಿದ್ದಾರೆ. ಮಾಡಲು ಸಾಕಷ್ಟು ಜನ ಮುಂದಾಗುತ್ತಾರೆ. ಕೆಲವರು ಅರೆಬರೆ ಬಟ್ಟೆ ಧರಿಸಿದ್ರೆ, ಇನ್ನು ಕೆಲವರು ಮೈ ತುಂಬಾ ತೊಡುತ್ತಾರೆ. ಇದು ಅವರವರ ವೈಯಕ್ತಿಕ ವಿಚಾರವಾದರೂ ಸಮಾಜದ ದೃಷ್ಟಿಯಿಂದ ನಮ್ಮ ಉಡುಗೆ ತೊಡುಗೆಗಳ ಮೇಲೆ ಸ್ವಲ್ಪವಾದರೂ ಗಮನವಿರಬೇಕು. ಹೋಗಲಿ ಬಿಡಿ ಇದು ಸಂಬಂಧವಿಲ್ಲದ ವಿಷಯ. ಆದ್ರೂ ಇದನ್ಯಾಕೆ ಪ್ರಸ್ತಾಪ ಮಾಡ್ತಿದ್ದಾರೆ ಅನ್ಕೊಳಿತ್ತಿದ್ದೀರಾ? ಯಾಕಂದ್ರೆ ಇಲ್ಲಿ ಬಿಂದಾಸ್ ರೈತ ಮಹಿಳೆಯೊಬ್ಳು ನೆಟ್ಟಿಗರ ಗಮನ ಸೆಳೆದಿದ್ದಾಳೆ. ತನ್ನನ್ನು ‘ಬಿಕಿನಿ ಫಾರ್ಮರ್’ ಎಂದು ಹೇಳಿಕೊಂಡಿದ್ದು ಸಕ್ಕತ್ ವೈರಲ್ ಆಗ್ತಿದ್ದಾಳೆ.

ರೈತ ಮಹಿಳೆ ಎಂದರೆ ನಿಮ್ಮ ಮನಸ್ಸಿನಲ್ಲಿ ಮೂಡುವ ಕಲ್ಪನೆಯೇ ಬೇರೆ ಇರಬಹುದು. ಸಾಮಾನ್ಯವಾಗಿ ಮೈ ತುಂಬ ಬಟ್ಟೆ ಧರಿಸಿ ಹೊಲಕ್ಕೆ ಹೋಗುವ ದೃಶ್ಯ ಕಣ್ಣೆದುರು ಬರಬಹುದು. ಆದರೆ ಈ ಮಹಿಳೆ ಹಾಗಲ್ಲ, ಬಿಕಿನಿ ಧರಿಸಿ ಹೊಲಕ್ಕೆ ಹೋಗುತ್ತಾಳೆ. ಈಕೆ ಬಿಕಿನಿ ಧರಿಸಿ ರೈತಾಪಿ ಕೆಲಸ ಮಾಡುತ್ತಿರುವ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ. ಈ ಮಹಿಳೆ ತನ್ನನ್ನು ತಾನು ‘ಬಿಕಿನಿ ಫಾರ್ಮರ್’ ಎಂದೇ ಕರೆದುಕೊಳ್ಳುತ್ತಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಬಿಕಿನಿ ಫಾರ್ಮರ್ ಬಗ್ಗೆ ಈಗ ಸಖತ್ ಹಾಟ್ ಚರ್ಚೆಗಳು ನಡೆಯುತ್ತಿವೆ. ಆದರೆ ಈಕೆ ವಾಸಿಸುವ ಪ್ರದೇಶ ಮಾತ್ರ ಯಾವುದೆಂದು ತಿಳಿದುಬಂದಿಲ್ಲ.

ಈ ಮಹಿಳೆ ತಾನು ಹೊಲದಲ್ಲಿ ಕೆಲಸ ಮಾಡುತ್ತಿರುವ, ಸಾಕುಪ್ರಾಣಿಗಳೊಂದಿಗೆ ಇರುವ ಹಲವಾರು ಫೋಟೊಗಳನ್ನು ಇತ್ತೀಚೆಗೆ ಅಪ್ ಲೋಡ್ ಮಾಡಿದ್ದಾಳೆ. ಬಹಳಷ್ಟು ಚಿತ್ರಗಳಲ್ಲಿ ಈಕೆ ಬಿಕಿನಿಯನ್ನೇ ಧರಿಸಿರುವುದನ್ನು ನೆಟ್ಟಿಗರು ಗುರುತಿಸಿದ್ದಾರೆ. ಬಳಿಕ, ಸಿಕ್ಕಾಪಟ್ಟೆ ಕಾಲೆಳೆದಿದ್ದಾರೆ. ಅಲ್ಲದೆ ಟಿಕ್ ಟಾಕ್ ನಲ್ಲಿ ‘ಫ್ಯಾನ್ಸಿ ಫಾರ್ಮರ್’ ಹೆಸರಿನಲ್ಲಿ ಈಕೆ ತಾನು ಬಿಕಿನಿ ಧರಿಸಿದ ಭಾವಚಿತ್ರಗಳು, ವಿಡಿಯೋಗಳನ್ನೂ ಹಂಚಿಕೊಂಡಿದ್ದಾಳೆ. ಜನ ಮಾಡಿದ ಟೀಕೆಗಳಿಗೆ ಬಿಕಿನಿ ರೈತ ಮಹಿಳೆ ತಲೆಕೆಡಿಸಿಕೊಂಡಿಲ್ಲ. ಬದಲಿಗೆ ಖಡಕ್ ಉತ್ತರವನ್ನೇ ನೀಡಿದ್ದಾಳೆ.

ಫೋಟೊ ಒಂದರಲ್ಲಿ ಈಕೆ ಕಪ್ಪು ಬಿಕಿನಿ ಧರಿಸಿ ಕುದುರೆಯೊಂದಿಗೆ ನಿಂತಿದ್ದಾಳೆ. ಈ ಫೋಟೊಕ್ಕಂತೂ ಕಾಮೆಂಟ್ ಗಳ ಸುರಿಮಳೆಯಾಗಿದೆ. ಈಕೆಯ ಹಲವು ವಿಡಿಯೋಗಳು ಈಗ ಸಾಕಷ್ಟು ವೈರಲ್ ಆಗಿವೆ. ಇನ್ ಸ್ಟಾಗ್ರಾಮ್ ನಲ್ಲೂ ಫೋಟೊ ಶೇರ್ ಮಾಡಿದ್ದಾಳೆ. ಇದಕ್ಕೆ ಸಾಕಷ್ಟು ಮಂದಿ ತಲೆಕೆಡಿಸಿಕೊಂಡು ಬಗೆಬಗೆಯ ಪ್ರಶ್ನೆಗಳನ್ನೂ ಕೇಳಿದ್ದಾರೆ. ಒಬ್ಬಾತ, “ನೀವು ಇಡೀ ದಿನ ಬಿಕಿನಿ ಧರಿಸಿ ನಿಜಕ್ಕೂ ಹೊಲದಲ್ಲಿ ಕೆಲಸ ಮಾಡುತ್ತೀರಾ?’ ಎಂದು ಕೇಳಿದರೆ, ಇನ್ನೊಬ್ಬಾತ “ಇಷ್ಟೊಂದು ಹಾಟ್ ಆಗಿರುವ ಡ್ರೆಸ್ ಯಾಕೆ ಧರಿಸುತ್ತೀರಿ?’ ಎಂದು ಕೇಳಿದ್ದಾನೆ. ಇದಕ್ಕೆ ಈಕೆ “ಇಡೀ ದಿನ ಬಿಸಿಲಲ್ಲಿ ಬಿಕಿನಿ ಧರಿಸಿ ಹೊಲದಲ್ಲಿ ಹುಲ್ಲಿನ ಕೆಲಸ ಮಾಡಿದರೆ ಟ್ಯಾನ್ ಆಗುವುದಿಲ್ಲ’ ಎಂದು ತಿರುಗೇಟು ನೀಡಿದ್ದಾಳೆ.

ಕೆಲವರು, ‘ನೀವು ವಾಸಿಸುವ ಪ್ರದೇಶದಲ್ಲಿ ತುಂಬ ಮಂದಿ ಯುವಜನತೆ ಇದ್ದಾರೆ. ಅವರ ಮೇಲೆ ಪ್ರಭಾವವಾಗುತ್ತದೆ. ಸ್ಥಳದಲ್ಲಿ ಹೇಗಿರಬೇಕು ಎನ್ನುವುದನ್ನು ಕಲಿತುಕೊಳ್ಳಬೇಕು’ ಎಂದು ಸಲಹೆ ನೀಡಿದ್ದಾರೆ. ಆದರೆ, ಇದಕ್ಕೆ ಪ್ರತಿಯಾಗಿ ಬಿಕಿನಿ ಮಹಿಳೆ, ‘ಹುಡುಗಿಯರು ಅವರಿಗೆ ಹೇಗೆ ಬೇಕೋ ಹಾಗೆ ಡ್ರೆಸ್ ಧರಿಸುವ ಸ್ವಾತಂತ್ರ್ಯ ಹೊಂದಿರಬೇಕು. ಇತರರು ಹೇಗೆ ನೋಡುತ್ತಾರೋ, ಅಂದುಕೊಳ್ಳುತ್ತಾರೋ ಎನ್ನುವ ಭಯ ಅವರಲ್ಲಿ ಇರಬಾರದು’ ಎಂದು ಹೇಳಿದ್ದಾಳೆ. ಇನ್ನೊಂದು ವಿಡಿಯೋದಲ್ಲಿ ಈಕೆ ತಾನು ಮನೆಯಿಂದ ಹೊರಹೋಗುವಾಗ ಮಾತ್ರ ಬ್ರಾ ಧರಿಸುತ್ತೇನೆ, ಮನೆಯಲ್ಲಿರುವಾಗ ಬ್ರಾ ಧರಿಸುವುದಿಲ್ಲ’ ಎಂದು ಹೇಳಿಕೊಂಡಿದ್ದಾಳೆ, ಇದಕ್ಕೆ ಹಲವು ಮೆಚ್ಚುಗೆ ಸೂಸಿದ್ದರೆ, ಹಲವರು ಟೀಕೆ ಮಾಡಿದ್ದಾರೆ. ಒಟ್ಟಿನಲ್ಲಿ ಈ ಆಧುನಿಕ ರೈತ ಮಹಿಳೆಯದ್ದೇ ಒಂದು ವಿಚಿತ್ರ ಜೀವನ ಅನ್ನಬಹುದು.