Home latest Triangle love : ಓರ್ವ ಹುಡುಗನಿಗಾಗಿ ಇಬ್ಬರು ಕಾಲೇಜು ಹುಡುಗಿಯರ ಕಾದಾಟ | ವೀಡಿಯೋ ವೈರಲ್

Triangle love : ಓರ್ವ ಹುಡುಗನಿಗಾಗಿ ಇಬ್ಬರು ಕಾಲೇಜು ಹುಡುಗಿಯರ ಕಾದಾಟ | ವೀಡಿಯೋ ವೈರಲ್

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿನ ದಿನಗಳಲ್ಲಿ ಪ್ರೀತಿ.. ಪ್ರೇಮ. ಎಂದು ಲವ್ ಮಾಡಿ..ಓಡಾಡುವ ಪ್ರಣಯ ಜೋಡಿಗಳನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೋಡಬಹುದು.

ಕಾಲೇಜು ಮೆಟ್ಟಿಲೇರುತ್ತಿದ್ದಂತೆ ಶುರುವಾಗುವ ಪ್ರೇಮ ಕಥನ ನಡುವೆ ಬ್ರೇಕ್ ಪಡೆದು ವರ್ಷದ ಕೊನೆಯಲ್ಲಿ ನಾನೊಂದು ತೀರ.. ನೀನೊಂದು ತೀರ..ಎಂಬಂತೆ ಪ್ರಕರಣಗಳು ಕೊನೆಯಾದರೆ, ಮತ್ತು ಕೆಲವು ಪ್ರೇಮ ಪುರಾಣಗಳು ಪೋಷಕರ ಒತ್ತಾಯಕ್ಕೆ ಕಟ್ಟುಬಿದ್ದು ಪ್ರೇಮ ಪಕ್ಷಿಗಳು ದೂರಾಗುವ ಪ್ರಹಸನ ನಡೆಯುತ್ತದೆ.

ಇವೆಲ್ಲಕ್ಕೂ ಮಿಗಿಲಾಗಿ ಕೆಲವೊಂದು ಪ್ರಕರಣಗಳಲ್ಲಿ ಎಲ್ಲರ ಸಮ್ಮತಿ ಇಲ್ಲದೆ ಮದುವೆಯಾಗಿ ಸುಂದರ ಜೀವನ ಕಟ್ಟಿಕೊಂಡ ಜೋಡಿಗಳು ಇದ್ದಾರೆ.

ಕಾಲೇಜು ಎಂದರೆ ಬಣ್ಣ ಬಣ್ಣದ ಕನಸುಗಳ ಬೆನ್ನೇರಿ ಸಾಗುವ ಪಯಣ..ಈ ಪಯಣದಲ್ಲಿ ಜೊತೆಯಾಗಿ ಸ್ನೇಹ, ಪ್ರೀತಿ ಎಂಬ ಕವಲುಗಳ ದಾಟಿ ಮುಂದಿನ ಜೀವನದ ಕನಸನ್ನೂ ನನಸಾಗಿಸಲು ಬಯಸುವವರೆ ವಿರಳ.

ಸಾಮಾನ್ಯವಾಗಿ ಪ್ರೀತಿಯ ಪಾರಿವಾಳ ಹಾರಿ ಹೋಯಿತು ಗೆಳೆಯ..ಎಂದು ಹುಡುಗರು ತನ್ನ ಪ್ರೇಯಸಿ ಮತ್ತೊಬ್ಬರೊಂದಿಗೆ ತಿರುಗಾಡುವಾಗ ಕಿತ್ತಾಡಿ, ಜಗಳ ಗಲಾಟೆಗಳು ನಡೆಯುವ ಪ್ರಹಸನ ಸಾಮಾನ್ಯ.

ಆದರೆ, ಇತ್ತೀಚಿನ ದಿನಗಳಲ್ಲಿ ಹುಡುಗರಿಗಿಂತ ನಾವೇನು ಕಡಿಮೆಯಿಲ್ಲ ಎಂದು ನಿರೂಪಿಸುವ ಮಹಿಳಾಮಣಿಗಳು ತನ್ನ ಲವರ್ ಗಾಗಿ ಕಿತ್ತಾಡಿ ಹೊಡೆದಾಟ ನಡೆಸುವ ಪ್ರಕರಣಗಳು ನಡೆಯುತ್ತಿವೆ.

ಇದೇ ರೀತಿಯ ಪ್ರಹಸನವೊಂದು ನಡೆದಿದ್ದು, ಇಬ್ಬರು ಯುವತಿಯರು ಒಬ್ಬನನ್ನು ಪ್ರೀತಿಸಿ ಆತ ತನ್ನವನೆಂದು ಹೇಳುತ್ತಾ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಯುವತಿಯರು ಕಾಲೇಜು ಸಮವಸ್ತ್ರ ಧರಿಸಿಕೊಂಡು ಹೊಡೆದಾಡಿಕೊಳ್ಳುತ್ತಿರುವ ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿ ಟ್ರೆಂಡ್ ಆಗುತ್ತಿದೆ.

ಇಬ್ಬರು ವಿದ್ಯಾರ್ಥಿನಿಯರು ಕೂಡ ಪರಸ್ಪರ ತಲೆಗೂದಲನ್ನು ಎಳೆಯುತ್ತಾ ಹೊಡೆದಾಡಿಕೊಂಡಿದ್ದು, ಇಬ್ಬರ ಜಗಳವನ್ನು ಕೊನೆಗೊಳಿಸಲು ಅವರ ಸ್ನೇಹಿತರು ಹರಸಾಹಸ ಪಟ್ಟು ಕೊನೆಗೂ ಅವರನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

https://twitter.com/USIndia_/status/1580858114491809793?ref_src=twsrc%5Etfw%7Ctwcamp%5Etweetembed%7Ctwterm%5E1580858114491809793%7Ctwgr%5E7ef57b01d752e3cfdcede822eea14352cfb434ff%7Ctwcon%5Es1_c10&ref_url=https%3A%2F%2Fkannadanewsnow.com%2Fkannada%2Fviral-news-two-college-girls-fight-over-a-boy-video-dragging-each-others-hair-watch%2F

UnSeen India ಎಂಬ ಟ್ವಿಟರ್ ಖಾತೆಯಲ್ಲಿ ಇದರ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, “ಒಬ್ಬ ಹುಡುಗನಿಗಾಗಿ ಇಬ್ಬರು ಹುಡುಗಿಯರ ನಡುವೆ ಜಗಳ” ಎಂದು ಶೀರ್ಷಿಕೆ ನೀಡಲಾಗಿದ್ದು, 1.27 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಣೆ ಮಾಡಿದ್ದು, 3 ಸಾವಿರಕ್ಕೂ ಅಧಿಕ ಲೈಕ್​ಗಳನ್ನೂ ಈ ವಿಡಿಯೋ ಪಡೆದಿದೆ.