Home Interesting 21ನೇ ಶತಮಾನದಲ್ಲೂ ಮೂಢನಂಬಿಕೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ನೈಜ ಉದಾಹರಣೆ ಈ ಘಟನೆ | ಗರ್ಭಿಣಿ...

21ನೇ ಶತಮಾನದಲ್ಲೂ ಮೂಢನಂಬಿಕೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ನೈಜ ಉದಾಹರಣೆ ಈ ಘಟನೆ | ಗರ್ಭಿಣಿ ಮಹಿಳೆಯ ತಲೆಗೆ ಮೊಳೆ ಹೊಡೆದ ಧಾರ್ಮಿಕ ಮುಖಂಡ|ಇದರ ಹಿಂದಿರುವ ನಂಬಿಕೆ ಏನು ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

ಕೆಲವೊಂದು ಮೂಢನಂಬಿಕೆಗಳು ಇಂದಿಗೂ ಚಾಲ್ತಿಯಲ್ಲಿದೆ. ಕೆಲವೊಂದಿಷ್ಟು ಮಂದಿ ಅದೆಲ್ಲ ಹಿಂದಿನ ನಂಬಿಕೆಯೆಂದರೆ ಇನ್ನೂ ಕೆಲವರು ಪುರಾತನದ ಆರಾಧನೆಗಳನ್ನು ಇಂದಿಗೂ ನಂಬುತ್ತಾರೆ. ಹೌದು. ಇಲ್ಲೊಂದು ಕಡೆ ಮೂಢನಂಬಿಕೆಗಳ ಮೊರೆ ಹೋದ ಮಹಿಳೆಗೆ ಆದ ಪರಿಸ್ಥಿತಿ ಎಂತದ್ದು ಗೊತ್ತೇ? ಅಷ್ಟಕ್ಕೂ ಯಾವ ವಿಷಯದ ಮೇರೆಗೆ ಈ ರೀತಿ ಮಾಡಿದ್ದಾರೆ ಎಂದು ತಿಳಿದರೆ ಗಾಬರಿಯಾಗೋದು ಖಚಿತ.

ಇಲ್ಲೊಂದು ಕಡೆ ಗಂಡು ಮಗುವಾಗುತ್ತದೆ ಎಂಬ ಮೂಢನಂಬಿಕೆಯಿಂದ ಪಾಕಿಸ್ತಾನದ ಗರ್ಭಿಣಿಯೊಬ್ಬರು ತಲೆಗೆ ಮೊಳೆ ಹೊಡೆದುಕೊಂಡಿರುವ ಪ್ರಸಂಗ ನಡೆದಿದೆ. ದಕ್ಷಿಣ ಏಷ್ಯಾದಲ್ಲಿ ಹೆಣ್ಣುಮಕ್ಕಳಿಗಿಂತ ಗಂಡು, ಪೋಷಕರಿಗೆ ಉತ್ತಮ ಆರ್ಥಿಕ ಭದ್ರತೆ ಒದಗಿಸುತ್ತಾನೆ ಎಂಬುದು ನಂಬಿಕೆ.ಈ ಹಿನ್ನೆಲೆಯಲ್ಲಿ ಪಾಕ್‌ ಗರ್ಭಿಣಿಯೊಬ್ಬರು ತಮಗೆ ಗಂಡು ಮಗು ಆಗಲಿ ಎಂದು ಗುಂಡು ಸೂಜಿಯಂತಹ ಮೊಳೆ ಗಳನ್ನು ತನ್ನ ಹಣೆಗೆ ಹೊಡೆದುಕೊಂಡಿದ್ದಾರೆ ಎಂದು ವೈದ್ಯ ಹೈದರ್‌ ಖಾನ್‌ ತಿಳಿಸಿದ್ದಾರೆ.

ಮಹಿಳೆಗೆ ಯಾವುದೇ ಮಾನಸಿಕ ಸಮಸ್ಯೆ ಇಲ್ಲ. ಆದರೆ ಅತಿಯಾದ ನೋವಿನಿಂದಾಗಿ ಅವರು ಆಸ್ಪತ್ರೆಗೆ ಬಂದಿದ್ದರು. ಈಕೆಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಈಗ ಮತ್ತೆ ಗರ್ಭಿಣಿಯಾಗಿದ್ದು, ಅದು ಕೂಡ ಹೆಣ್ಣು ಎಂದು ವೈದ್ಯರು ಹೇಳಿದ್ದಾರೆ. ಎಕ್ಸರೇ ತೆಗೆದು ನೋಡಿದಾಗ ಸುಮಾರು 2 ಇಂಚಿನ ಸಣ್ಣ ಮೊಳೆಗಳನ್ನು ಹಣೆಗೆ ಹೊಡೆದುಕೊಂಡಿದ್ದಾರೆ.ಆಕೆಗೆ ಗಂಡು ಮಗುವಾಗುವ ಭರವಸೆಯನ್ನು ನೀಡಿ ಆಕೆಯ ತಲೆಗೆ ಧಾರ್ಮಿಕ ಮುಖಂಡನೊಬ್ಬ ಮೊಳೆ ಹೊಡೆದಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಅದೃಷ್ಟವಶಾತ್‌, ಮಹಿಳೆಯ ಮಿದುಳಿಗೆ ಇದರಿಂದ ಯಾವುದೇ ಹಾನಿಯಾಗಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೇಶಾವರ ಪೊಲೀಸರು, ನಾವು ಆಸ್ಪತ್ರೆಯಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದೇವೆ. ಶೀಘ್ರದಲ್ಲೇ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೇ ಮಹಿಳೆಗೆ ಸಲಹೆ ನೀಡಿದ ಮಾಂತ್ರಿಕನ ಮೇಲೂ ಸೂಕ್ತ ಕ್ರಮವಹಿಸಲಾಗುವುದು ಎಂದಿದ್ದಾರೆ.ಮುಸ್ಲಿಂ ಹೆಚ್ಚಿನ ಸಂಖ್ಯೆಯಲ್ಲಿರುವ ಪಾಕಿಸ್ತಾನದಾದ್ಯಂತ ಇಂಥಹ ಪದ್ಧತಿಗಳು ಬಹಳ ಸಾಮಾನ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಪೇಶಾವರದ ವಾಯುವ್ಯ ಪ್ರದೇಶದ ಆಸ್ಪತ್ರೆಗೆ ಬಂದ ಮಹಿಳೆ ತಾವೇ ಮೊಳೆಯನ್ನು ತೆಗೆಯಲು ಪ್ರಯತ್ನಿಸಿದ್ದರು. ಆದರೆ ಸಾಧ್ಯವಾಗದ ಕಾರಣ ಆಕೆ ಆಸ್ಪತ್ರೆಗೆ ಬಂದಿದ್ದರು ಎಂದು ವೈದ್ಯ ಹೈದರ್ ಖಾನ್ ತಿಳಿಸಿದ್ದಾರೆ.

ಎಕ್ಸ್‌ರೇ ತೆಗೆದು ನೋಡಿದಾಗ ಅದರಲ್ಲಿ ಆಕೆಯ ತಲೆಗೆ 2 ಇಂಚಿನ ಅಂದರೆ 5 ಸೆಂಟಿಮೀಟರ್ ಮೊಳೆ ಮಹಿಳೆಯ ಹಣೆಯಲ್ಲಿತ್ತು. ಮೊದಲು ಮಹಿಳೆ ಧಾರ್ಮಿಕ ಮುಖಂಡ ಹೇಳಿದ ಕಾರಣಕ್ಕೆ ತಾನೇ ಮೊಳೆ ಹೊಡೆದುಕೊಂಡೆ ಎಂದಿದ್ದರು. ಆದರೆ ನಂತರ ಅವರು ಸತ್ಯ ತಿಳಿಸಿದ್ದು, ಆತನೇ ತನ್ನ ಹಣೆಗೆ ಮೊಳೆ ಹೊಡೆದಿರುವುದನ್ನು ರಿವೀಲ್ ಮಾಡಿದ್ದಾರೆ. ಪೇಶಾವರ ಪೊಲೀಸರು ಆತನನ್ನು ಪ್ರಶ್ನಿಸುವ ಸಲುವಾಗಿ ಮಹಿಳೆಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ.