Home latest AAP ನಾಯಕ ಸತ್ಯೇಂದ್ರ ಜೈನ್ ಗೆ 10 ಕೋಟಿ ನೀಡಿದ್ದೆ – ಸುಖೇಶ್ ಚಂದ್ರಶೇಖರ್

AAP ನಾಯಕ ಸತ್ಯೇಂದ್ರ ಜೈನ್ ಗೆ 10 ಕೋಟಿ ನೀಡಿದ್ದೆ – ಸುಖೇಶ್ ಚಂದ್ರಶೇಖರ್

Hindu neighbor gifts plot of land

Hindu neighbour gifts land to Muslim journalist

ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡೀಸ್‌ (Jacqueline Fernandez) ಎಕ್ಸ್‌ ಬಾಯ್‌ಫ್ರೆಂಡ್‌ ಹಾಗೂ ವಂಚಕ ಸುಖೇಶ್‌ ಚಂದ್ರಶೇಖರ್‌ (Sukesh Chandrasekhar) ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾಗೆ (Delhi Lieutenant Governor V.K. Saxena) ಪತ್ರದ ಮೂಲಕ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಹೈ ಪ್ರೊಫೈಲ್‌ ನೊಂದಿಗೆ ಸೆಲೆಬ್ರಿಟಿಗಳಿಂದ ಹಣವನ್ನು ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ಸುಖೇಶ್‌ ಚಂದ್ರಶೇಖರ್‌ ದೆಹಲಿಯ ಮಾಂಡೋಲಿ ಸೆರೆಮನೆ ವಾಸ ಅನುಭವಿಸುತ್ತಿದ್ದಾನೆ. ಈ ಹಿಂದೆ ಅವನನ್ನು ದೆಹಲಿಯ ತಿಹಾರ್‌ ಜೈಲಿನಲ್ಲಿಡಲಾಗಿದ್ದಾಗ, ತನಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ನಿರಂತರ ಮನವಿ ಮಾಡಿದ್ದರಿಂದ ಬೇರೆ ಕಡೆ ಶಿಫ್ಟ್‌ ಮಾಡಲಾಗಿತ್ತು.

ಎಎಪಿ ಸರ್ಕಾರದ (AAP Government) ಬಣ್ಣದ ಮುಖವಾಡ ಕಳಚ ಬೇಕಾಗಿದೆ. ಏಕೆಂದರೆ, ಜೈಲಿನೊಳಗೂ ಅವರು ಉನ್ನತ ಮಟ್ಟದ ಭ್ರಷ್ಟಾಚಾರ ಮಾಡುತ್ತಿದ್ದರು ಎಂದು ಜೈಲಿನಲ್ಲಿರುವ ವಂಚಕ ಸುಖೇಶ್‌ ಚಂದ್ರಶೇಖರ್‌ ಪತ್ರದಲ್ಲಿ ಉಲ್ಲೇಖಿಸಿದ್ದು, ಜೊತೆಗೆ ದೆಹಲಿಯ ತಿಹಾರ್‌ ಜೈಲಿನಲ್ಲಿ (Tihar Jail) ತನಗೆ ತೀವ್ರ ಹಿಂಸೆ ಹಾಗೂ ಬೆದರಿಕೆ ನೀಡಲಾಗುತ್ತಿತ್ತು ಎಂದು ದೂರಿದ್ದಾರೆ.

ಇನ್ನು, ತಾನು ಜೈಲಿನಲ್ಲಿ ಸುರಕ್ಷಿತವಾಗಿರಲು ‘ಪ್ರೊಟೆಕ್ಷನ್‌ ಮನಿ’ಯ ಕಾರಣಕ್ಕೆ ಎಎಪಿಯ ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್‌ಗೆ (Satyendar Jain) 10 ಕೋಟಿ ರೂ ನೀಡಿರುವ ಕುರಿತು ಸ್ಫೋಟಕ ರಹಸ್ಯ ಬಹಿರಂಗ ಪಡಿಸಿದ್ದಾನೆ.

ಇದಲ್ಲದೆ, ಸತ್ಯೇಂದ್ರ ಜೈನ್‌ ತನಗೆ 2015 ರಿಂದಲೂ ಪರಿಚಯವಿದ್ದು , ದಕ್ಷಿಣ ಭಾರತದಲ್ಲಿ ಎಎಪಿ ಪಕ್ಷ ತನಗೆ ಪ್ರಮುಖ ಸ್ಥಾನಮಾನ ನೀಡುವ ಭರವಸೆ ನೀಡಿದ್ದ ಹಿನ್ನೆಲೆ ನಾನು ಪಕ್ಷಕ್ಕೆ 50 ಕೋಟಿ ರೂ. ನೀಡಿದ್ದಾಗಿ ಪತ್ರದಲ್ಲಿ ಹೇಳಿಕೊಂಡಿದ್ದಾನೆ.

ಕಳೆದ ತಿಂಗಳು ಸಿಬಿಐ ತನಿಖಾ ತಂಡಕ್ಕೆ ನಾನು ಸತ್ಯೇಂದ್ರ ಜೈನ್‌, ಎಎಪಿ ಹಾಗೂ ಡಿಜಿ – ಪ್ರಿಸನ್ಸ್‌ಗೆ ನೀಡಿರುವ ಹಣದ ಬಗ್ಗೆ ಒಪ್ಪಿಕೊಂಡಿದ್ದು ಇದರ ಜೊತೆಗೆ ದೆಹಲಿ ಹೈಕೋರ್ಟ್‌ನಲ್ಲಿ ಈ ಬಗ್ಗೆ ಸಿಬಿಐ ತನಿಕೆ ನಡೆಯಲು ಅರ್ಜಿಯನ್ನು ಹಾಕಿಕೊಂಡಿರುವುದಾಗಿ ಸುಖೇಶ್‌ ಚಂದ್ರಶೇಖರ್‌ ಹೇಳಿಕೊಂಡಿದ್ದಾನೆ.

ಈ ದೂರನ್ನು ಹಿಂಪಡೆಯುವ ಸಲುವಾಗಿ ಸತ್ಯೇಂದ್ರ ಜೈನ್‌ ತನಗೆ ನಿರಂತರ ಬೆದರಿಕೆ ಹಾಗೂ ಕಿರುಕುಳ ನೀಡುತ್ತಿದ್ದರು ಎಂದು ಕೂಡ ಆರೋಪಿಸಿದ್ದಾನೆ.

ದೆಹಲಿಯ ಲೆಫ್ಟಿನೆಂಟ್‌ ಗವರ್ನರ್ ವಿ.ಕೆ. ಸಕ್ಸೇನಾ ಅವರಿಗೆ ಸುಖೇಶ್‌ ಚಂದ್ರಶೇಖರ್‌ ಪತ್ರ ಬರೆದಿದ್ದು, ಈ ಪತ್ರವನ್ನು ದೆಹಲಿಯ ಲೆಫ್ಟಿನೆಂಟ್‌ ಗವರ್ನರ್‌ ಎಎಪಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ರವಾನೆ ಮಾಡಿದ್ದು, ಮುಂದಿನ ಕ್ರಮಕ್ಕೆ ಆದೇಶಿಸಿದ್ದಾರೆ.

ತಿಹಾರ್‌ ಜೈಲು ವ್ಯಾಪ್ತಿಗೆ ಈ ವಿಚಾರ ಬರುವುದರಿಂದ ದೆಹಲಿ ಸರ್ಕಾರದ ಗೃಹ ಇಲಾಖೆ ಈ ಕೇಸ್‌ನ ಕುರಿತಾದ ಸಮಗ್ರ ತನಿಖೆಯ ಕ್ರಮ ಕೈಗೊಳ್ಳಲಿದೆ . ಸುಖೇಶ್‌ ಚಂದ್ರಶೇಖರ್‌ ಪತ್ರದ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಬಿಜೆಪಿ ನಾಯಕ ಸಂಬಿತ್‌ ಪಾತ್ರ ಎಎಪಿ ಹಾಗೂ ದೆಹಲಿ ಸಚಿವ ಸತ್ಯೇಂದ್ರ ಜೈನ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯ ತಿಹಾರ್‌ ಜೈಲಿನಲ್ಲಿರುವ ಸಚಿವ ಸತ್ಯೇಂದ್ರ ಜೈನ್‌ ಸುಖೇಶ್‌ ಚಂದ್ರಶೇಖರ್‌ಗೆ ಒಳ್ಳೆಯ ಸ್ನೇಹಿತ ಎಂದು ಆರೋಪಿಸಿದ್ದಾರೆ.

2017ರಲ್ಲಿ ಕಾರಾಗೃಹ ಸಚಿವರಾಗಿದ್ದ ಸತ್ಯೇಂದ್ರ ಜೈನ್‌, ಸುಖೇಶ್‌ ಚಂದ್ರಶೇಖರ್‌ರನ್ನು ತಿಹಾರ್‌ ಜೈಲಿನಲ್ಲಿ ನಿಯಮಿತವಾಗಿ ಭೇಟಿ ಮಾಡುತ್ತಿದ್ದರು ಎಂಬುದನ್ನು ಸಂಬಿತ್‌ ಪಾತ್ರ ಹೇಳಿಕೊಂಡಿದ್ದಾರೆ.

ಅಲ್ಲದೆ, ಜೈಲಿನೊಳಗೆ ಮೂಲಸೌಕರ್ಯಗಳನ್ನು ಪಡೆಯಲು ಪ್ರತಿ ತಿಂಗಳು 2 ಕೋಟಿ ರೂ, ನೀಡಬೇಕೆಂದು ವಂಚಕನಿಗೆ ಸತ್ಯೇಂದ್ರ ಜೈನ್‌ ಕಾರ್ಯದರ್ಶಿ ಹೇಳಿದ್ದರು ಎಂಬುದಾಗಿ ಬಿಜೆಪಿ ನಾಯಕ ಸಂಬಿತ್‌ ಪಾತ್ರ ಕೂಡ ಆರೋಪಿಸಿದ್ದಾರೆ.