Home Interesting ಇಳಿವಯಸ್ಸಿನ ತಾಯಿಯನ್ನು ದೇಗುಲಕ್ಕೆ ಹೊತ್ತು ಕರೆತಂದು ದೇವಿಯ ದರ್ಶನ ಮಾಡಿಸಿದ ಮಗ| ಕಲಿಯುಗದ ಶ್ರವಣಕುಮಾರ ತಿಪಟೂರಿನ...

ಇಳಿವಯಸ್ಸಿನ ತಾಯಿಯನ್ನು ದೇಗುಲಕ್ಕೆ ಹೊತ್ತು ಕರೆತಂದು ದೇವಿಯ ದರ್ಶನ ಮಾಡಿಸಿದ ಮಗ| ಕಲಿಯುಗದ ಶ್ರವಣಕುಮಾರ ತಿಪಟೂರಿನ ಶಿವರುದ್ರಯ್ಯ!

Hindu neighbor gifts plot of land

Hindu neighbour gifts land to Muslim journalist

ನಾವು ಪಾಠ ಪುಸ್ತಕಗಳಲ್ಲಿ ಶ್ರವಣ ಕುಮಾರನ ಕತೆಯನ್ನು ಓದಿರುತ್ತೇವೆ ಅಥವಾ ಕೇಳಿರುತ್ತೇವೆ. ಆದರೆ ಕಲಿಯುಗದಲ್ಲೂ ಅಂತಹ ಶ್ರವಣ ಕುಮಾರ ಇದ್ದಾರೆ ಎಂದರೆ ಅದು ಬೆರಳೆಣಿಕೆಯಷ್ಟು ಜನ ಮಾತ್ರ. ಇಂದಿನ ದಿನಗಳಲ್ಲಿ ಮಕ್ಕಳು ತಂದೆ-ತಾಯಿಯನ್ನು ಹೊರುವುದು ಬಿಡಿ, ಮೂರು ಹೊತ್ತು ಊಟ ಹಾಕಲು ಕೂಡ ಹಿಂದೆ ಮುಂದೆ ನೋಡುತ್ತಾರೆ ಕೊನೆಗೆ ಆಶ್ರಮಕ್ಕೆ ಸಾಗಿಸಿ ಕೈ ತೊಳೆದುಕೊಳ್ಳುತ್ತಾರೆ. ನೀವು ಒಬ್ಬಳು ತಾಯಿ ಮಕ್ಕಳನ್ನು ಹೊರುವುದು ಕಂಡಿರುತ್ತೀರಾ. ಆದರೆ ಮಗನೇ ತನ್ನ ತಾಯಿಯನ್ನು ಹೊತ್ತುಕೊಂಡಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮೂಲ್ಕಿ: ಹಿಂದಿನ ಕಾಲದಲ್ಲಿ ಶ್ರವಣ ಕುಮಾರ ಎಂಬಾತ ತನ್ನ ದೃಷ್ಠಿಹೀನ ತಂದೆ-ತಾಯಿಯನ್ನು ಬುಟ್ಟಿಯಲ್ಲಿ ಕುಳ್ಳಿರಿಸಿ ತೀರ್ಥಯಾತ್ರೆಗೆ ಕರೆದೊಯ್ದಿದ್ದ ಎಂಬ ಕಥೆ ಎಲ್ಲರಿಗೂ ತಿಳಿದಿರುತ್ತದೆ. ಅದೇ ರೀತಿ ತಿಪಟೂರಿನ ಶಿವರುದ್ರಯ್ಯ ಎಂಬವರು ತಮ್ಮ 99 ರ ಇಳಿವಯಸ್ಸಿನಲ್ಲಿರುವ ತಾಯಿಯನ್ನು ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೊತ್ತುಕೊಂಡು ಬಂದು ದೇವಿಯ ದರ್ಶನ ಮಾಡಿಸಿದ್ದಾರೆ. ಮಗನಾಗಿ ತಾಯಿಗೆ ತಾಯಿಯ ದರ್ಶನ ಮಾಡಿಸಿದ್ದಾರೆ.

ಕಲಿಯುಗದ ಶ್ರವಣಕುಮಾರ, ಶಿವರುದ್ರಯ್ಯ ಅವರ ತಾಯಿಗೆ ಒಂದು ಕಣ್ಣಿನ ದೃಷ್ಟಿ ಹೋಗಿತ್ತು. ಹಾಗಾಗಿ ಒಂದು ಕಣ್ಣಿನಲ್ಲಿ ಮಾತ್ರ ಪ್ರಪಂಚವನ್ನು ನೋಡುತ್ತಿದ್ದರು. ಶಿವರುದ್ರಯ್ಯ ಅವರು ತಿಪಟೂರಿನಿಂದ ತಾಯಿಯನ್ನು ಬಸ್‌ನಲ್ಲಿ ಕರೆದುಕೊಂಡು ಬಂದಿದ್ದಾರೆ. ನಂತರ ದೇವಸ್ಥಾನಕ್ಕೆ‌ ಹೊತ್ತುಕೊಂಡು ಬಂದು ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿಯ ದರ್ಶನ ಮಾಡಿಸಿದ್ದಾರೆ. ಮಗನ ಮೂಲಕ ತಾಯಿಯ ದರ್ಶನ ಪಡೆದ ಆತನ ತಾಯಿ ಬಹಳ ಸಂತೋಷಗೊಂಡಿದ್ದಾರೆ.

ಇವರ ಈ ತಾಯಿಯ ಬಗೆಗಿನ ಪ್ರೀತಿ,ತಾಯಿಯ ಆಸೆ, ಬೇಡಿಕೆಗಳನ್ನು ಈಡೇರಿಸಿದ್ದು, ಇವರು ಇತರರಿಗೂ ಮಾದರಿಯಾಗಲಿದ್ದಾರೆ. ಇನ್ನೂ ಇವರನ್ನು ಕಲಿಯುಗದ ಶ್ರವಣಕುಮಾರ ಎಂದರೆ ತಪ್ಪಾಗಲಾರದು.