Home Interesting Viral video: ಮನೆ ಬಾಗಿಲಲ್ಲೇ ಕಾದು ಕುಳಿತಿದ್ದ ದೈತ್ಯ ಹೆಬ್ಬಾವು!! ಮುಂದೇನಾಯ್ತು?

Viral video: ಮನೆ ಬಾಗಿಲಲ್ಲೇ ಕಾದು ಕುಳಿತಿದ್ದ ದೈತ್ಯ ಹೆಬ್ಬಾವು!! ಮುಂದೇನಾಯ್ತು?

Hindu neighbor gifts plot of land

Hindu neighbour gifts land to Muslim journalist

ಹಾವು ಅಂದ್ರೆ ಎಲ್ಲರಿಗೂ ಒಂದು ಬಾರಿ ನಡುಕ ಹುಟ್ಟುತ್ತದೆ. ಅದರಲ್ಲೂ ಹೆಬ್ಬಾವು ಅಂದ್ರೆ ಕೇಳಲೇಬೇಕಿಲ್ಲ. ಎಂತವನಿಗೂ ಭಯ ಶುರುವಾಗಿ ಬಿಡುತ್ತೆ. ಇನ್ನೂ ಈ ಹೆಬ್ಬಾವು ಕಣ್ಣ ಮುಂದೆ ಇದೆ ಅಂದ್ರೆ ಹೇಗಾಗಬೇಡ ಅಲ್ವಾ!! ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಮಹಿಳೆಯೊಬ್ಬರ ಮನೆ ಬಾಗಿಲಲ್ಲೇ ದೈತ್ಯ ಹೆಬ್ಬಾವು ಕಾದು ಕುಳಿತಿರುವುದು ಈ ವೀಡಿಯೋದಲ್ಲಿ ನೋಡಬಹುದಾಗಿದೆ. ಹಾಗಾದ್ರೆ ಮುಂದೇನಾಗಿರ್ಬೋದು ಎಂದು ನೋಡೋಣ.

ಈ ವಿಡಿಯೋದಲ್ಲಿ, ಮಹಿಳೆಯೊಬ್ಬರು ತಮ್ಮ ಪಾಡಿಗೆ ತಾವು ಮನೆಯ ಹೋರಾಂಗಣದ ಕಸ ಗುಡಿಸುತ್ತಿದ್ದಾರೆ. ಕಸ ಗುಡಿಸಬೇಕಾದರೆ ಇವರು ಮನೆಗೆ ಮುಖಮಾಡಿ ಗುಡಿಸುತ್ತಿದ್ದರು. ಹಾಗಾಗಿ ತನ್ನ ಬೆನ್ನ ಹಿಂದೆ ದೈತ್ಯ ಹೆಬ್ಬಾವು ಇರೋದು ತಿಳಿದಿಲ್ಲ. ಹಾಗೇ ಗುಡಿಸುತ್ತಾ ಅಲ್ಲೇ ಹರಿದಾಡುತ್ತಿದ್ದ 10 ಅಡಿ ಉದ್ದದ ಹೆಬ್ಬಾವಿನ ಮೇಲೆ ಕಾಲಿಟ್ಟಿದ್ದಾರೆ.

ನೀವೇ ಯೋಚಿಸಿ ಮಹಿಳೆಗೆ ಹೇಗಾಗಿರಬೇಡ ಅಲ್ವಾ!! ಎಲ್ಲರೂ ಹೆಬ್ಬಾವು ದೂರದಿಂದ ನೋಡಿದರೇನೇ ಭಯಭೀತರಾಗಿ ಅಲ್ಲಿಂದ ಪರಾರಿಯಾಗುತ್ತಾರೆ. ಅಂತಹದ್ರಲ್ಲಿ ಮಹಿಳೆ ಆ ದೈತ್ಯ ಹೆಬ್ಬಾವಿಗೆ ತುಳಿದಿದ್ದಾರೆ ಎಂದರೆ ಆಘಾತ ಆಗೋದು ಸರಿಯೇ. ಮಹಿಳೆ ಕೆಲಸದಲ್ಲಿ ಮಗ್ನರಾಗಿದ್ದ ಕಾರಣ ಆಕೆಗೆ ತನ್ನ ಬೆನ್ನ ಹಿಂದೆಯೇ ಹೆಬ್ಬಾವು ಇರೋದು ತಿಳಿದಿಲ್ಲ. ಹಾಗಾಗಿ ಆಕೆ ಗುಡಿಸುತ್ತಾ ಹಿಂದೆ ಬಂದು ಹೆಬ್ಬಾವಿನ ಮೇಲೆ ಕಾಲು ಇಟ್ಟು ಅದರ ಮೇಲೆಯೇ ಬಿದ್ದಿದ್ದಾರೆ.

ಹಾವುಗಳು ಸಹಜವಾಗಿಯೇ ತಮ್ಮ ಮೇಲೆ ದಾಳಿಯಾದಾಗ ಪ್ರತಿದಾಳಿ ಮಾಡುತ್ತದೆ. ಹಾಗೇ ಈ ಹೆಬ್ಬಾವು ಕೂಡಲೇ ಮಹಿಳೆಯ ಮೇಲೆ ದಾಳಿ ಮಾಡಲು ತನ್ನ ಬಹುದೊಡ್ಡ ಬಾಯಿ ತೆರೆಯುತ್ತದೆ. ಆದರೆ ಮಹಿಳೆಯ ಅದೃಷ್ಟ ಚೆನ್ನಾಗಿತ್ತು ಎಂದೇ ಹೇಳಬಹುದು. ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಹೆಬ್ಬಾವು ಕಂಡು ತಕ್ಷಣವೇ ಮಹಿಳೆ ಅಲ್ಲಿಂದ ಓಡಿದ್ದಾರೆ. ಇಲ್ಲವಾದರೆ ಮಹಿಳೆ ಹೆಬ್ಬಾವಿಗೆ ಆಹಾರವಾಗುತ್ತಿದ್ದರು.

ಇನ್ನೂ, ಈ ವಿಡಿಯೋ ಟ್ರೆಂಡಿಂಗ್ ಏಷ್ಯಾ ಎಂಬ ಟ್ವಿಟರ್ ಪುಟದಲ್ಲಿ ಅಪ್ಲೋಡ್ ಮಾಡಲಾಗಿದ್ದು, 15 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿದೆ. ಅಲ್ಲದೆ, ನೆಟ್ಟಿಗರು ವಿವಿಧ ರೀತಿಯ ಕಾಮೆಂಟ್ ಗಳನ್ನು ಮಾಡಿದ್ದಾರೆ.