Home Interesting ‘ಪಬ್ ಜಿ’ಗಾಗಿ ಹೆತ್ತಬ್ಬೆಯನ್ನೇ ಗುಂಡಿಕ್ಕಿ ಕೊಂದು ಶವವನ್ನು ಮುಚ್ಚಿಟ್ಟ ಸೇನಾಧಿಕಾರಿಯ ಮಗ!!

‘ಪಬ್ ಜಿ’ಗಾಗಿ ಹೆತ್ತಬ್ಬೆಯನ್ನೇ ಗುಂಡಿಕ್ಕಿ ಕೊಂದು ಶವವನ್ನು ಮುಚ್ಚಿಟ್ಟ ಸೇನಾಧಿಕಾರಿಯ ಮಗ!!

Hindu neighbor gifts plot of land

Hindu neighbour gifts land to Muslim journalist

ಪಬ್​ಜಿ ಆಟದ ಹುಚ್ಚಿನಿಂದ ಅದೆಷ್ಟೋ ಜನರ ಪ್ರಾಣವೇ ಹೋಗಿದೆ. ಇತ್ತೀಚೆಗೆ ಅಂತೂ ಪೋಷಕರು ಈ ಆನ್ಲೈನ್ ಗೇಮ್ ಗೆ ವಿರೋಧ ವ್ಯಕ್ತಪಡಿಸಿದಾಗ ಅವರನ್ನೇ ಕೊಳ್ಳುವಂತಹ ಘಟನೆಗಳು ಬೆಳಕಿಗೆ ಬಂದಿದೆ. ಇದೀಗ ಅದೇ ಸಾಲಿಗೆ ಎಂಬಂತೆ ಪಬ್ ಜಿ ಮತ್ತೊಂದು ಜೀವವನ್ನು ಬಲಿ ಪಡೆದಿದೆ.

ಹೌದು. 16 ವರ್ಷದ ಈ ಬಾಲಕ ಸದಾ ಪಬ್​ಜಿ ಆಡುವ ಚಟ ಹೊಂದಿದ್ದ. ಮೊಬೈಲ್ ಗೇಮ್​ಗೆ ಅಡಿಕ್ಟ್​ ಆಗಿದ್ದ ಆತನಿಂದ ಅಮ್ಮ ಬೇಸತ್ತಿದ್ದಳು. ಹೀಗಾಗಿ, ಆತನಿಗೆ ಆಗಾಗ ಬೈಯುತ್ತಿದ್ದು, ಇನ್ನುಮುಂದೆ ಈ ಆಟ ಆಡಬಾರದು ಎಂದು ಅಮ್ಮ ಎಚ್ಚರಿಸಿದ್ದಳು. ಇದರಿಂದ ಕೋಪಗೊಂಡ ಮಗ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದಿರುವ ಆಘಾತಕಾರಿ ಘಟನೆ ಲಕ್ನೋದಲ್ಲಿ ನಡೆದಿದೆ.

ಆದರೆ, ಈ ಕೊಲೆ ನಡೆದು 2 ದಿನಗಳ ಬಳಿಕ ಘಟನೆ ಬೆಳಕಿಗೆ ಬಂದಿದ್ದು, ಕೂಡಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.16 ವರ್ಷದ ಯುವಕ ಭಾನುವಾರ ಮುಂಜಾನೆ ತನ್ನ ತಂದೆಯ ಲೇಸೆನ್ಸ್​ ಇರುವ ರಿವಾಲ್ವರ್‌ನಿಂದ ತನ್ನ ತಾಯಿಯನ್ನು ಶೂಟ್ ಮಾಡಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಲೆಗೆ ಗುಂಡು ತಗುಲಿದ ಮಹಿಳೆ ಸ್ವಲ್ಪ ಸಮಯದ ನಂತರ ಸಾವನ್ನಪ್ಪಿದ್ದಾಳೆ. ಅಮ್ಮನಿಗೆ ಶೂಟ್ ಮಾಡಿ ಕೊಂದ ಬಳಿಕ ಭಯಗೊಂಡ ಆ ಬಾಲಕ ಆ ಹೆಣವನ್ನು ಮನೆಯಲ್ಲೇ ಮುಚ್ಚಿಟ್ಟಿದ್ದು ಅಲ್ಲದೆ, ಮರುದಿನ ಹೆಣದ ವಾಸನೆ ಮನೆಯಲ್ಲಿ ಹರಡಿದ ಬಳಿಕ ಆತ ಮನೆಗೆ ಏರ್​ ಫ್ರೆಷನರ್ ಹೊಡೆದು ವಾಸನೆ ಹರಡದಂತೆ ಪ್ಲಾನ್ ಮಾಡಿದ್ದಾನೆ.

ಮನೆಯಲ್ಲಿ ಆತನ 9 ವರ್ಷದ ತಂಗಿ ಕೂಡ ಇದ್ದಳು. ಆದರೆ, ಆಕೆಗೆ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನೂ ಕೊಲ್ಲುವುದಾಗಿ ಹೆದರಿಸಿ, ಅಮ್ಮನ ಹೆಣವನ್ನು ರೂಮ್ ಒಂದರಲ್ಲಿ ಇರಿಸಿ, ಮನೆಗೆ ರೂಮ್​ ಫ್ರೆಷನರ್ ಸಿಂಪಡಿಸಿದ್ದಾನೆ. ಕೆಲಸದ ನಿಮಿತ್ತ ಬೇರೆ ಊರಿನಲ್ಲಿದ್ದ ಆತನ ತಂದೆ 2 ದಿನಗಳ ಬಳಿಕ ಮನೆಗೆ ಬಂದಾಗ ಈ ವಿಷಯ ಗೊತ್ತಾಗಿದೆ.

ಆದರೆ, ಅಪ್ಪನ ಬಳಿ ಸುಳ್ಳು ಕತೆ ಕಟ್ಟಿದ ಬಾಲಕ, ರಿಪೇರಿ ಕೆಲಸಕ್ಕೆಂದು ಮನೆಗೆ ಬಂದಿದ್ದ ಎಲೆಕ್ಟ್ರಿಷಿಯನ್ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ಹೇಳಿದ್ದಾನೆ. ಹೀಗಾಗಿ, ಆತನ ತಂದೆ ಪೊಲೀಸರಿಗೆ ಈ ವಿಷಯವನ್ನು ತಿಳಿಸಿದ್ದರು. ಆ ಬಾಲಕನ ತಂದೆ ಸೇನಾಧಿಕಾರಿಯಾಗಿದ್ದು, ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಷಯ ತಿಳಿದ ಕೂಡಲೆ ಆ ಮನೆಗೆ ಬಂದ ಪೊಲೀಸರಿಗೆ ಆ ಬಾಲಕ ಅದೇ ಕತೆಯನ್ನು ಹೇಳಿದ್ದ. ಆದರೆ, ಪೊಲೀರು ತನಿಖೆ ನಡೆಸಲು ಆ ಹುಡುಗನನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಭಯಗೊಂಡ ಆತ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.