Home News Pralhad Joshi: ‘ಗುರುವಾರ ರಾಘವೇಂದ್ರ ಸ್ವಾಮಿ ಆರಾಧನೆಗೆ ಬ್ರೇಕ್ ಕೊಡಿ’ – ಪ್ರತಿಪಕ್ಷಗಳ ವಿರುದ್ಧ ...

Pralhad Joshi: ‘ಗುರುವಾರ ರಾಘವೇಂದ್ರ ಸ್ವಾಮಿ ಆರಾಧನೆಗೆ ಬ್ರೇಕ್ ಕೊಡಿ’ – ಪ್ರತಿಪಕ್ಷಗಳ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿ

Hindu neighbor gifts plot of land

Hindu neighbour gifts land to Muslim journalist

Pralhad Joshi: ವಿಧಾನಸಭೆ, ಲೋಕಸಭೆ, ರಾಜ್ಯಸಭೆಗಳಲ್ಲಿ ನಮಾಜ್ ಮಾಡಲು ನೀಡುತ್ತಿರುವ ಸಮಯವಕಾಶದ ವಿಚಾರ ದೇಶದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಅಸ್ಸಾಂ ಸರ್ಕಾರ ಈ ಸಮಯವನ್ನು ರದ್ಧು ಮಾಡಲು ತೀರ್ಮಾನಿಸಿದ ಬಳಿಕ ಇದು ಹೆಚ್ಚಾಗಿದೆ. ಇದೀಗ ಈ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Pralhad Joshi) ಪ್ರತಿಕ್ರಿಯಿಸಿದ್ದಾರೆ.

ಹೌದು, ಅಸ್ಸಾಂ ಸರ್ಕಾರದ(Assam government)ನಡೆಯನ್ನು ಸಮರ್ಥಿಸುದ ಜೋಶಿಯವರು ‘ವಿಧಾನಸಭೆ, ಲೋಕಸಭೆ, ರಾಜ್ಯಸಭೆಗಳಲ್ಲಿ ನಮಾಜ್ ಮಾಡಲು ಇವೆಯೇ? ನಾನು ಶ್ರೀ ರಾಘವೇಂದ್ರ ಸ್ವಾಮಿ ಆರಾಧಕ. ನಾನು ಅಂದು ಗುರು ರಾಯರನ್ನು ಆರಾಧಿಸಬೇಕು. 2 ತಾಸು ಸದನ ಮುಂದೂಡಿ ಅಥವಾ ಅಂದು ರಜೆ ಘೋಷಿಸಿ ಎಂದರೆ ಆಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಮುಂದುವರೆದು ಮಾತನಾಡಿದ ಅವರು ‘ನನ್ನಂತೆ ಎಲ್ಲಾ ಸದಸ್ಯರು ಅವರವರ ದೈವರಾಧನೆಗೆ ಸದನಕ್ಕೆ 2 ಗಂಟೆ ವಿರಾಮ ನೀಡಿ, ಸೋಮವಾರ ರಜೆ ಕೊಡಿ, ಗುರುವಾರ ರಜೆ ಕೊಡಿ ಎನ್ನಬಹುದೇ? ಅದೆಲ್ಲ ನಡೆಯುವಂಥದ್ದೇ? ಭಾನುವಾರ ಸದನಕ್ಕೆ ಬ್ರೇಕ್ ಇದ್ದೇ ಇರುತ್ತದೆ. ನಮ್ಮ ನಮ್ಮ ವೈಯಕ್ತಿಕ ಅನುಕೂಲಕ್ಕೆ ಸೋಮವಾರ ಕೊಡಿ ಎಂದರೆ ಅದು ಎಷ್ಟರ ಮಟ್ಟಿಗೆ ಸಮಂಜಸವಾಗಿರುತ್ತದೆ. ಹೀಗಾಗಿ ಅಸ್ಸಾಂ ವಿಧಾನಸಭೆ ಮುಸ್ಲಿಂ ಶಾಸಕರಿಗೆ ಶುಕ್ರವಾರ 2 ಗಂಟೆ ಕಲಾಪಕ್ಕಿದ್ದ ವಿರಾಮವನ್ನು ರದ್ದುಪಡಿಸಲು ಕೈಗೊಂಡ ನಿರ್ಣಯ ಸ್ವಾಗತಾರ್ಹ ಎಂದ ಹೇಳಿದ್ದಾರೆ.