Home Interesting ಮಾಜಿ ಪ್ರಧಾನಿಯ ಮಗಳಿಗೆ ದೃಷ್ಟಿ ನೀಡಿದ ಭಾರತದ ಆಯುರ್ವೇದ |ಎಲ್ಲಿಯೂ ಯಶಸ್ಸು ಕಾಣದ ಚಿಕಿತ್ಸೆ ಇಲ್ಲಿ...

ಮಾಜಿ ಪ್ರಧಾನಿಯ ಮಗಳಿಗೆ ದೃಷ್ಟಿ ನೀಡಿದ ಭಾರತದ ಆಯುರ್ವೇದ |ಎಲ್ಲಿಯೂ ಯಶಸ್ಸು ಕಾಣದ ಚಿಕಿತ್ಸೆ ಇಲ್ಲಿ ಯಶಸ್ವಿಯಾಗಿದೆ |ಭಾರತವನ್ನು ಕೊಂಡಾಡಿದ ಕೀನ್ಯಾ

Hindu neighbor gifts plot of land

Hindu neighbour gifts land to Muslim journalist

ಜಗತ್ತು ಅದೆಷ್ಟೇ ಮುಂದುವರಿದರು ಪುರಾತನದ ಸಂಸ್ಕೃತಿ ಸಂಪ್ರದಾಯ ಪದ್ಧತಿ ಅಚ್ಚಳಿಯಾಗಿ ಉಳಿದಿದೆ.ಚಿಕಿತ್ಸೆಯ ವಿಷಯಕ್ಕೆ ಬಂದರೆ ಇಂಗ್ಲಿಷ್ ಮದ್ದುಗಳನ್ನೇ ಖರೀದಿಸೋರು ಅಧಿಕವೆಂದೇ ಹೇಳಬಹುದು.ಆದ್ರೆ ಕಾಲ ಬದಲಾದರೂ ಆಯುರ್ವೇದ ಮಾತ್ರ ಚಿರವಾಗಿರುತ್ತೆ. ಅದೆಷ್ಟೋ ಆಧುನಿಕ ವೈದ್ಯರಿದ್ದರು ಪುರಾತನ ವೈದ್ಯ ಪದ್ಧತಿಯೇ ಉತ್ತಮ.

ಹೌದು. ಆಯುರ್ವೇದದ ಕುರಿತು ಇಷ್ಟೆಲ್ಲಾ ನಂಬಿಕೆ ಇರೋದಕ್ಕೆ ಕಾರಣ ಈ ಘಟನೆಗೆ ಸಾಕ್ಷಿ.ಕೀನ್ಯಾದ ಮಾಜಿ ಪ್ರಧಾನಿ ರೈಲಾ ಒಡಿಂಗಾರರ ಮಗಳು ಕಣ್ಣಿನ ದೃಷ್ಟಿಯನ್ನು ವಾಪಸ್‌ ಪಡೆದುಕೊಳ್ಳಬಲ್ಲಳು ಎಂಬ ನಂಬಿಕೆಯನ್ನೇ ಕಳೆದುಕೊಂಡಿದ್ದ ಅವರಿಗೆ ಆಯುರ್ವೇದ ಕೈ ಹಿಡಿದಿದೆ. ಹೌದು ಆಕೆ ಆಯುರ್ವೇದ ಚಿಕಿತ್ಸೆಯಿಂದ ಮರಳಿ ಕಣ್ಣು ಪಡೆದುಕೊಂಡಿದ್ದಾರೆ. ಕೇರಳದ ಎರ್ನಾಕುಲಂನ ಕೂತ್ತಟ್ಟುಕುಳಂನಲ್ಲಿರುವ ಆಯುರ್ವೇದ ಕಣ್ಣಿನ ಆಸ್ಪತ್ರೆ-ಸಂಶೋಧನಾ ಕೇಂದ್ರದಲ್ಲಿ ಇವರ ಮಗಳಿಗೆ ದೃಷ್ಟಿಭಾಗ್ಯ ಸಿಕ್ಕಿದೆ.

ಇದಕ್ಕಾಗಿ ಭಾರತ ಮತ್ತು ಆಯುರ್ವೇದ ಪದ್ಧತಿಯನ್ನು ಹಾಡಿ ಹೊಗಳಿದ ರೈಲಾ ಒಡಿಂಗಾ ತಮ್ಮ ದೇಶದಲ್ಲಿಯೂ ಇದರ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಈ ವರ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಒಡಿಂಗಾ, ಮಗಳ ಚಿಕಿತ್ಸೆಗಾಗಿ ಕೇರಳಕ್ಕೆ ಬಂದಿದ್ದರು. ನಾನು ಕೀನ್ಯಾದ ಅಧ್ಯಕ್ಷನಾದರೆ ಕೀನ್ಯಾದಲ್ಲಿಯೂ ಆಯುರ್ವೇದ ಆಸ್ಪತ್ರೆ ತೆರೆಯುವುದಾಗಿ ಹೇಳಿದ್ದಾರೆ.

ಮಗಳು ದೃಷ್ಟಿ ಪಡೆಯುತ್ತಿದ್ದಂತೆಯೇ, ಖುಷಿಗೊಂಡಿರುವ ಒಡಿಂಗಾ ಈ ಕುರಿತು ಟ್ವೀಟ್‌ ಮಾಡಿದ್ದಾರೆ. ಇವರ ಮಗಳು ಕಣ್ಣಿನ ನರ ಹಾನಿಯ ನಂತರ 2017 ರಲ್ಲಿ ದೃಷ್ಟಿ ಕಳೆದುಕೊಂಡಿದ್ದರು. ದಕ್ಷಿಣ ಆಫ್ರಿಕಾ, ಇಸ್ರೇಲ್ ಮತ್ತು ಚೀನಾದಲ್ಲಿ ಚಿಕಿತ್ಸೆ ಪಡೆದಿದ್ದರೂ ದೃಷ್ಟಿ ಮರಳಿರಲಿಲ್ಲ. ನಂತರ ಆಯುರ್ವೇದದ ಬಗ್ಗೆ ಯಾರೋ ಹೇಳಿದ್ದನ್ನು ಕೇಳಿ ಒಡಿಂಗಾ ಭಾರತಕ್ಕೆ ಬಂದಿದ್ದರು.

ಕೇರಳದಲ್ಲಿ ಒಂದು ತಿಂಗಳ ಕಾಲ ಚಿಕಿತ್ಸೆ ಪಡೆದು ಮನೆಗೆ ಮರಳಿ ಅಲ್ಲಿ ತನ್ನ ಔಷಧಿಯನ್ನು ಮುಂದುವರೆಸಿದರು. ಮುಂದುವರಿದ ಚಿಕಿತ್ಸೆ ಮತ್ತು ತಪಾಸಣೆಯ ನಂತರಆಸ್ಪತ್ರೆಯ ಹೇಳಿಕೆಯ ಪ್ರಕಾರ, ರೋಸ್ಮರಿ ಒಡಿಂಗಾ ತನ್ನ ದೃಷ್ಟಿಯನ್ನು ಮರಳಿ ಪಡೆದಿದ್ದಾರೆ. ತಮ್ಮ ಮಗಳು ದೃಷ್ಟಿ ಪಡೆಯುತ್ತಲೇ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಅವರು, ಪ್ರಪಂಚದಾದ್ಯಂತ ಆಯುರ್ವೇದ ಐ ಕೇರ್ ಸಂಸ್ಥೆಗಳನ್ನು ಹೆಚ್ಚಿಸಬೇಕು ಎಂದು ಮನವಿ ಮಾಡಿದ್ದಾರೆ.