Home News Cognizant 2.52 LPA job offer: ಕಂಪ್ಯೂಟರ್ ಇಂಜಿನಿಯರ್ ಗಳಿಗೆ ವರ್ಷಕ್ಕೆ ಜುಜುಬಿ 2.5 ಲಕ್ಷ...

Cognizant 2.52 LPA job offer: ಕಂಪ್ಯೂಟರ್ ಇಂಜಿನಿಯರ್ ಗಳಿಗೆ ವರ್ಷಕ್ಕೆ ಜುಜುಬಿ 2.5 ಲಕ್ಷ ರೂ. ಸಂಬಳ, ಭಾರೀ ಟ್ರೋಲ್‌ ಆದ ಕಾಗ್ನಿಜೆಂಟ್‌ ಆಫರ್‌ !

Hindu neighbor gifts plot of land

Hindu neighbour gifts land to Muslim journalist

Cognizant 2.52 LPA job offer: ಬೃಹತ್‌ ಆಫ್‌ ಕ್ಯಾಂಪಸ್‌ ನೇಮಕಾತಿ ಘೋಷಿಸಿರುವ ಅಮೆರಿಕ ಮೂಲದ ದೈತ್ಯ ಐಟಿ ಕಂಪನಿ ಕಾಗ್ನಿಜೆಂಟ್‌, ಹೊಸಬರಿಗೆ ವರ್ಷಕ್ಕೆ ಜುಜುಬಿ ಸಂಬಳ ಘೋಷಿಸಿ ನಗೆಪಾಟಲಿಗೆ ಈಡಾಗಿದೆ. ಈ ಅಮೆರಿಕನ್ ಕಂಪನಿ ಕೇವಲ 2.5 ಲಕ್ಷ ರೂಪಾಯಿ ಅಂದರೆ ತಿಂಗಳಿಗೆ 20,000 ರೂ ಪ್ಯಾಕೇಜ್‌ ಪ್ರಕಟಿಸಿದೆ. ಕಂಪನಿ ಘೋಷಿಸಿರುವ ಈ ಆಫರ್‌ಗೆ ಭಾರೀ ಟೀಕೆ ವ್ಯಕ್ತವಾಗಿದ್ದು, ಈ ಜುಜುಬಿ ವೇತನಕ್ಕೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಕಿಡಿ ಹಾರಿಸಿದ್ದಾರೆ. Cognizant 2 52 Lpa Job offer, American Company is getting trolled.

ಅಮೆರಿಕ ಮೂಲದ  ದೈತ್ಯ ಐಟಿ ಕಂಪನಿಯಾಗಿರುವ ಕಾಗ್ನಿಜೆಂಟ್‌ ದೊಡ್ಡ ಮಟ್ಟದ ಆಫ್‌ ಕ್ಯಾಂಪಸ್‌ ನೇಮಕಾತಿಗೆ ಚಾಲನೆ ನೀಡಿದೆ. ಈ ವೇಳೆ ಕಂಪನಿ ಘೋಷಿಸಿದ ಆಫರ್‌ಗೆ ನೆಟ್ಟಿಗರಿಂದ ಭಾರೀ ಟೀಕೆ ವ್ಯಕ್ತವಾಗಿದೆ. ಕಂಪನಿಯು ವರ್ಷಕ್ಕೆ 2.5 ಲಕ್ಷ ರೂ, ಅಂದ್ರೆ ಮಾಸಿಕ ರೂಪಾಯಿ 20,000 ಪ್ಯಾಕೇಜ್‌ ಘೋಷಿಸಿದೆ. ಅದೂ 2024ರ ಫ್ರೆಶ್ ಇಂಜಿನಿಯರಿಂಗ್‌ ಪದವೀಧರರಿಗೆ ಈ ಪ್ಯಾಕೇಜ್‌ ನೀಡುತ್ತಿರುವುದಾಗಿ ಕಂಪನಿ ಹೇಳಿದೆ. ಜುಜುಬಿ ಸಂಬಳ ಘೋಷಿಸಿರುವ ಅಮೆರಿಕನ್‌ ಕಂಪನಿ ಭಾರಿ ಟೀಕೆಗೆ ಗುರಿಯಾಗಿದೆ.

ಭಾರತದ ಐಟಿ ಕಂಪನಿಗಳೇ ವಾರ್ಷಿಕ 3.5 ಲಕ್ಷ ರೂ.ನಿಂದ 4 ಲಕ್ಷ ರೂಪಾಯಿಯ ವೇತನದ ಪ್ಯಾಕೇಜ್‌ ನೀಡುತ್ತವೆ. ಆದರೆ ಈ ಅಮೆರಿಕನ್ ಕಾಗ್ನಿಜೆಂಟ್‌ ಕಂಪನಿ ಇದನ್ನು 2.5 ಲಕ್ಷ ರೂ.ಗೆ ಇಳಿಸಿರುವುದಕ್ಕೆ ಜನರು ಕಿಡಿಕಾರಿದ್ದಾರೆ. ಅಂದ ಹಾಗೆ ಈ ನೇಮಕಾತಿಗೆ ನಿಮ್ಮ ಅರ್ಜಿ ಸಲ್ಲಿಸಲು ನಿನ್ನೆ ಅಂದರೆ ಆಗಸ್ಟ್‌ 14 ಕೊನೆಯ ದಿನವಾಗಿತ್ತು.

ವಾರ್ಷಿಕ 2.5 ಲಕ್ಷ? ಹೊಸ ತಲೆಮಾರಿನವರು ರೀಲ್ಸ್‌ ಮಾಡಿ ಯಶಸ್ವಿ ಯೂಟ್ಯೂಬರ್‌ ಆಗಬೇಕು ಎಂದು ಬಯಸುತ್ತಿರುವುದರಲ್ಲಿ ತಪ್ಪೇನಿಲ್ಲ,” ಎಂದು ‘ಎಕ್ಸ್‌’ ಬಳಕೆದಾರರು ಬೇಸರ ವ್ಯಕ್ತಪಡಿಸಿದ್ದಾರೆ. “ವರ್ಷಕ್ಕೆ 2.5 ಲಕ್ಷ ತುಂಬಾ ಜಾಸ್ತಿ ಆಯ್ತು. ಪದವೀಧರ ಹುಡುಗರು ಇಷ್ಟೊಂದು ದುಡ್ಡಲ್ಲಿ ಏನು ಮಾಡುತ್ತಾರೆ ?” ಎಂದು ಇನ್ನೋರ್ವ ಬಳಕೆದಾರರು ಲೇವಡಿ ಮಾಡಿದ್ದಾರೆ.

‘ಉದ್ಯೋಗಿಗಳ ಕಳ್ಳಬೇಟೆ’ – ವಿಪ್ರೋ ಬಳಿಕ ಕಾಗ್ನಿಜೆಂಟ್‌ ವಿರುದ್ಧ ಕಿಡಿಕಾರಿದ ಇನ್ಫೋಸಿಸ್‌ ಕೂಡಾ ಕಿಡಿ ಕಾರಿದೆ. ಇನ್ನು ಡೇಜ್‌ ಇನ್ಫೋ ಎಂಬ ಕಂಪನಿಯ ಸಿಇಒ ಅಮಿತ್‌ ಮಿಶ್ರಾ, “ಕಾಗ್ನಿಜೆಂಟ್ ಎಂಜಿನಿಯರ್‌ಗಳಿಗೆ ವರ್ಷಕ್ಕೆ 2.52 ಲಕ್ಷ ರೂ. ನೀಡುತ್ತಿದೆ. ಇದೇ ವೇಳೆ ಮೊಮೊ ಅಂಗಡಿಯಲ್ಲಿ ಸಹಾಯಕನಿಗೆ 3 ಲಕ್ಷ ರೂ. ನೀಡಲಾಗುತ್ತಿದೆ,” ಎಂದು ಜಾಹೀರಾತಿನ ಸಮೇತ ಪೋಸ್ಟ್‌ ಹಾಕಿದ್ದಾರೆ.

“ಇದು ಹಳ್ಳಿಯಲ್ಲಿ ವರ್ಷದ ಬಾಡಿಗೆ ಹಾಗೂ ಕೆಲವು ಮ್ಯಾಗಿ ಪ್ಯಾಕೇಟ್‌ಗಷ್ಟೇ ಸಾಕು. ಬಹುಶಃ ಕಾಗ್ನಿಜೆಂಟ್‌ ಜನರು ಚಹಾ ಮತ್ತು ನಂಬಿಕೆಯಲ್ಲೇ ಬದುಕುತ್ತಿದ್ದಾರೆಯೇ ಎಂಬುದನ್ನು ಕಂಡುಕೊಳ್ಳಲು ಈ ಪ್ರಯೋಗ ನಡೆಸುತ್ತಿರಬೇಕು,” ಎಂದು ಎಕ್ಸ್‌ ಬಳಕೆದಾರರೊಬ್ಬರು ವ್ಯಂಗ್ಯವಾಡಿದ್ದಾರೆ.

“ವಾವ್‌ ವರ್ಷಕ್ಕೆ 2 ಲಕ್ಷವಾ? ನನ್ನ ಕಾರಿನ ಚಾಲಕ ವಾರಕ್ಕೆ ನಾಲ್ಕೇ ದಿನ ದುಡಿದು ಇದಕ್ಕಿಂತ ಜಾಸ್ತಿ ಸಂಪಾದಿಸುತ್ತಾನೆ,” ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.

“ಉತ್ತಮ ಅರ್ಹತೆ ಹೊಂದಿರುವ ಕಂಪ್ಯೂಟರ್ ಸೈನ್ಸ್ ವೃತ್ತಿಪರರಿಗೆ ವಾರ್ಷಿಕ 2.5 ಲಕ್ಷ ರೂ. ಪ್ಯಾಕೇಜ್ ನೋಡಿ ಆಘಾತವಾಗಿದೆ. ಇಂದು ಬೆಂಗಳೂರಿನಲ್ಲಿ ಚಾಲಕರು ಮತ್ತು ಅಡುಗೆಯವರೇ ವಾರ್ಷಿಕ 5 ಲಕ್ಷ ರೂ. ಗಳಿಸುತ್ತಿದ್ದಾರೆ. ಯಾವುದೇ ವೃತ್ತಿ ಕೀಳು ಎಂದಲ್ಲ, ಆದರೆ, ಐಟಿ ಉದ್ಯಮ ದಣಿದಿದೆಯೇ?” ಎಂದು ನಿವೃತ್ತ ಐಪಿಎಸ್‌ ಅಧಿಕಾರಿ, ಬಿಜೆಪಿ ನಾಯಕ ಭಾಸ್ಕರ್‌ ರಾವ್‌ ಪ್ರಶ್ನಿಸಿದ್ದಾರೆ.

ಇಲ್ಲಿ ಇನ್ನೊಂದು ಚೋದ್ಯದ ಸಂಗತಿ ಏನೆಂದರೆ ಇದೀಗ ಜುಜುಬಿ ವೇತನದ ವಿಚಾರಕ್ಕೆ ಟ್ರೋಲ್‌ಗೆ ಗುರಿಯಾಗಿರುವ ಕಾಗ್ನಿಜೆಂಟ್‌ ಕಂಪನಿ ಸಿಇಒ ದೇಶದಲ್ಲೇ ಗರಿಷ್ಠ ಸಂಬಳ ಪಡೆಯುತ್ತಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸಿಇಒಗಳಲ್ಲಿ cognizant CEO ರವಿಕುಮಾರ್ ಸಿಂಗಿಸೆಟ್ಟಿ ಮುಂಚೂಣಿಯಲ್ಲಿದ್ದಾರೆ. 2023ರಲ್ಲಿ ಇವರು ಬರೋಬ್ಬರಿ 22.56 ಮಿಲಿಯನ್ ಡಾಲರ್‌ ಅಂದರೆ ಸುಮಾರು 186 ಕೋಟಿ ರೂ. ಪ್ಯಾಕೇಜ್‌ ಸ್ವೀಕರಿಸಿ ಸುದ್ದಿಯಾಗಿದ್ದರು.