Home latest OnePlus Nord N300 5G: ವಿಶೇಷವಾದ ನಾರ್ಡ್‌ N300 one plus ಫೋನ್ ಬಿಡುಗಡೆ |...

OnePlus Nord N300 5G: ವಿಶೇಷವಾದ ನಾರ್ಡ್‌ N300 one plus ಫೋನ್ ಬಿಡುಗಡೆ | ಇದರ ಬೆಲೆ ಎಷ್ಟು? ಏನು ವಿಶೇಷತೆ?

Hindu neighbor gifts plot of land

Hindu neighbour gifts land to Muslim journalist

ವನ್ ಪ್ಲಸ್ ಕಂಪೆನಿಯ ಜನಪ್ರಿಯ ಮಧ್ಯಮ ಶ್ರೇಣಿಯ ಮೊಬೈಲ್ ಬ್ರ್ಯಾಂಡ್ ‘OnePlus Nord’ ಸರಣಿಯಲ್ಲಿ ಮತ್ತೊಂದು ವಿನೂತನ ಸ್ಮಾರ್ಟ್ಫೋನನ್ನು ಬಿಡುಗಡೆ ಮಾಡಿರುವ OnePlus ಕಂಪೆನಿ OnePlus Nord ಸರಣಿಯಲ್ಲಿ ಇತ್ತೀಚಿಗಷ್ಟೆ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ OnePlus Nord N200 ಯಶಸ್ಸನ್ನು ಗಳಿಸಿದ ಬೆನ್ನಲ್ಲೇ ಇದೀಗ ಹೊಸ OnePlus Nord N300 ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿದೆ.

ಹೆಚ್ಚಾಗಿ ತನ್ನ ಪ್ರೀಮಿಯಂ ಸ್ಮಾರ್ಟ್ಫೋನ್ಗಳ ಮೂಲಕ ಗಮನಸೆಳೆದಿರುವ ಕಂಪನಿ ಇದೀಗ ಒನ್ಪ್ಲಸ್ ನಾರ್ಡ್ ಎನ್​300 (OnePlus Nord N300 5G) ಸ್ಮಾರ್ಟ್ಫೋನ್ ರಿಲೀಸ್ ಮಾಡಿದೆ.

ಒನ್ಪ್ಲಸ್ ನಾರ್ಡ್ N300 ಸ್ಮಾರ್ಟ್ಫೋನ್ ಸದ್ಯಕ್ಕೆ ಯುಎಸ್ನಲ್ಲಿ ಮಾತ್ರ ಬಿಡುಗಡೆ ಆಗಿದ್ದು, ಕೆಲ ಸಮಯದ ಬಳಿಕ ಇದು ಭಾರತಕ್ಕೂ ಕಾಲಿಡಲಿದೆ. ಯುಎಸ್ನಲ್ಲಿ ಇದರ 4GB RAM ಮತ್ತು 64GB ಸ್ಟೋರೇಜ್ ಆಯ್ಕೆಯ ಬೆಲೆ $228, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 19,000ರೂ. ಎನ್ನಬಹುದಾಗಿದೆ.

ಬಲಿಷ್ಠವಾದ ಪ್ರೊಸೆಸರ್ ಅನ್ನು ಹೊಂದಿರುವ ಈ ಫೋನ್​ನಲ್ಲಿ 5,000mAh ಸಾಮರ್ಥ್ಯದ ಬ್ಯಾಟರಿ ಇದ್ದು, ವೇಗದ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.

ಒನ್ಪ್ಲಸ್ ನಾರ್ಡ್ N300 ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಪಡೆದಿದೆ.

ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್​ನಲ್ಲಿದೆ. ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.ಈ ಸ್ಮಾರ್ಟ್ಫೋನ್ 1612 × 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು 6.65-ಇಂಚಿನ HD+ ಎಲ್ಸಿಡಿ ಡಿಸ್ಪ್ಲೇಯನ್ನು ಹೊಂದಿದೆ.

ಈ ಡಿಸ್ಪ್ಲೇ 90Hz ರಿಫ್ರೆಶ್ ರೇಟ್ ಅನ್ನು ಬೆಂಬಲಿಸಲಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದ್ದು ಇದು 33W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.

ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G SA/NSA, ಡ್ಯುಯಲ್ 4G VoLTE, ಬ್ಲೂಟೂತ್ 5.1, ಜಿಪಿಎಸ್, ಗ್ಲೋನಾಸ್, ಯುಎಸ್ಬಿ ಟೈಪ್ ಸಿ ಪೋರ್ಟ್ ಅನ್ನು ನೀಡಲಾಗಿದೆ.

ಮೀಡಿಯಾಟೆಕ್ ಡೈಮೆನ್ಸಿಟಿ 810 SoC 5G ಪ್ರೊಸೆಸರ್ ವೇಗವನ್ನು ಹೊಂದಿದೆ. ಇದು ಆಂಡ್ರಾಯ್ಡ್ 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಮೈಕ್ರೊ-SD ಕಾರ್ಡ್ ಬೆಂಬಲದೊಂದಿಗೆ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸಬಹುದು.