Home News Odisha: ಒಡಿಶಾ ರೈಲು ದುರಂತ: ಹೆಂಡತಿಯ ಅಂತ್ಯಕ್ರಿಯೆ ನಡೆಸಿ, ಮಗಳ ಮೃತ ದೇಹ ಹುಡುಕಲು ಹೋದ...

Odisha: ಒಡಿಶಾ ರೈಲು ದುರಂತ: ಹೆಂಡತಿಯ ಅಂತ್ಯಕ್ರಿಯೆ ನಡೆಸಿ, ಮಗಳ ಮೃತ ದೇಹ ಹುಡುಕಲು ಹೋದ ವ್ಯಕ್ತಿ!

Odisha
Image source- Kannada news

Hindu neighbor gifts plot of land

Hindu neighbour gifts land to Muslim journalist

Odisha: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಒಡಿಶಾದ(Odisha) ಆಘಾತಕಾರಿ ರೈಲು ದುರಂತದಿಂದಾಗಿ ಹಲವಾರು ಕುಟುಂಬಗಳು ಬೀದಿಗೆ ಬಿದ್ದಿವೆ. ಈ ದುರಂತದಲ್ಲಿ ಮಡಿದ ಹಲವಾರು ಜನರ ನೋವಿನ ಕತೆಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಅಂತೆಯೇ ಇದೀಗ ವ್ಯಕ್ತಿಯೊಬ್ಬ ಪತ್ನಿಯ ಅಂತ್ಯಕ್ರಿಯೆ ನಡೆಸಿ, ಮಗಳ ದೇಹ ಹುಡುಕಲು ಹೋದ ಮನ ಮನಮಿಡಿಯುವ ಘಟನೆಯೊಂದು ಬೆಳಕಿಗೆ ಬಂದಿದೆ.

ಹೌದು, ನಿನ್ನೆ ತಾನೆ ತಂದೆಯೊಬ್ಬ ಶವಗಾರದಲ್ಲಿ ಬಿಸಾಕಿದ್ದ ಮಗನನ್ನು ಹುಡುಕಿ ಕರೆದೊಯ್ದು ಬದುಕಿಸಿದ ಘಟನೆಯೊಂದು ಸಾಕಷ್ಟು ಸುದ್ಧಿಯಾಗಿತ್ತು. ಇದರ ಬೆನ್ನಲೇ ಮತ್ತೊಂದು ಮನಮಿಡಿಯುವ ಘಟನೆಯೊಂದು ಬೆಳಕಿಗೆ ಬಂದಿದ್ದು ಮೊಹಮ್ಮದ್ ಸರ್ಫರಾಜ್(Mohammad sarfaz) ಎಂಬುವವರ ಪತ್ನಿ ಹಾಗೂ ಮಗಳು ರೈಲು ದುರಂತದಲ್ಲಿ ಮೃತಟ್ಟಿದ್ದು, ಇದೀಗ ಪತ್ನಿ ದೇಹ ಸಿಕ್ಕಿದ್ದು ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ. ಆದರೆ ಇದೀಗ ಮತ್ತೆ ಮಗಳ ಮೃತ ದೇಹದ ಹುಡುಕಲು ಶವಾಗಾರಕ್ಕೆ ಹೋಗಿದ್ದಾರೆ.

ಅಂದಹಾಗೆ ಶವಾಗಾರದಲ್ಲಿ 150ಕ್ಕೂ ಹೆಚ್ಚು ಶವಗಳಲ್ಲಿ ತನ್ನ ಪತ್ನಿಯ ದೇಹವನ್ನು ಗುರುತಿಸಿದ್ದಾರೆ, ಆದರೆ ರೈಲಿನಲ್ಲಿದ್ದ ತನ್ನ ಮಗಳನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಎಂದು ಹೇಳಿದ್ದಾರೆ. ಪ್ರತಿದಿನ ಜಿಲ್ಲಾಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದು, ಬಾಲಸೋರ್‌ನ ನಿವಾಸಿಗಳು ಸಹ ಸಹಾಯ ಮಾಡಲು ಮುಂದಾಗಿದ್ದರಿಂದ ಮಗಳ ಮೃತದೇಹವನ್ನು ಪತ್ತೆ ಮಾಡುವ ಕಾರ್ಯ ನಡೆಸುತ್ತಿದೆ.

ಆರಂಭದಲ್ಲಿ ಮೃತದೇಹಗಳು ಬೇರೆ ಬೇರೆ ಸ್ಥಳಗಳಿಗೆ ಹೋಗಿದ್ದರಿಂದ ಸ್ವಲ್ಪ ತೊಂದರೆ ಉಂಟಾಗಿದೆ, ಆದರೆ ಎಲ್ಲರೂ ಈ ಬಗ್ಗೆ ಕಾಳಜಿ ವಹಿಸಿದ್ದಾರೆ. ತನ್ನ ಮಗಳು ಸತ್ತಿದ್ದಾರೋ ಅಥವಾ ಬದುಕಿದ್ದಾರೋ ಗೊತ್ತಿಲ್ಲ, ಅದಕ್ಕಾಗಿಯೇ ಹುಡುಕಾಟ ನಡೆಸುತ್ತಿದ್ದಾರೆ ಎಂದು ಭುವನೇಶ್ವರದ ಬಾಲಸೋರ್ ನಿವಾಸಿ ಮೊಹಮ್ಮದ್ ಅಯೂಬ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ತನ್ನ ಮಗಳು ಮತ್ತು ಈ ಸ್ಥಿತಿಗೆ ಬಗ್ಗೆ ಸರ್ಫರಾಜ್ ಕಣ್ಣೀರು ಹಾಕಿದ್ದಾರೆ. ತಾನು ಅನುಭವಿಸಿದ ಕಷ್ಟಗಳನ್ನು ನೆನೆದು ದುಃಖಿಸುತ್ತಿದ್ದಾರೆ. ಇದೀಗ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ತನ್ನ ಮಗಳನ್ನು ಹುಡುಕುವ ಕಾರ್ಯವನ್ನು ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿ ಮತ್ತೆ ಭುವನೇಶ್ವರಕ್ಕೆ ಹೋಗಲು ವ್ಯವಸ್ಥೆ ಮಾಡಿದ್ದಾರೆ.

ಇನ್ನು ಆರಂಭದಲ್ಲಿ ಹೇಳಿದಂತೆ ಹೌರಾದ ಅಂಗಡಿ ಮಾಲೀಕ(Houra shop owner) ಹೆಲರಾಮ್(Helaram) ತನ್ನ 24 ವರ್ಷದ ಮಗ ಬಿಸ್ವಜೀತ್ ಮಲಿಕ್‌ನನ್ನ(Biswajit mallik) ಉಳಿಸಿದ ಘಟನೆ ನಡೆದಿತ್ತು. ಕೊರಮಂಡಲ್ ಎಕ್ಸ್‌ಪ್ರೆಸ್ ರೈಲಿಗೆ ಮಗನ ಹತ್ತಿಸಿ ಮನಗೆ ಮರಳಿದ ತಂದೆಗೆ ಕೆಲ ಹೊತ್ತಲ್ಲೇ ಅಪಘಾತದ ಸುದ್ದಿ ಬಂದಿದೆ. ತಕ್ಷಣವೇ ಮಗನಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಬಿಸ್ವಜಿತ್ ತೀವ್ರವಾಗಿ ಗಾಯಗೊಂಡಿದ್ದೇನೆ ಎಲ್ಲಿದ್ದೇನೆ ಎಂದು ತಿಳಿಯುತ್ತಿಲ್ಲ ಎಂದಷ್ಟೇ ಹೇಳಿದ್ದಾನೆ. ಮತ್ತೆ ಫೋನ್ ಕಟ್ ಮಾಡಿಲ್ಲ. ಆದರೆ ಮಾತಿಲ್ಲ. ಇತ್ತ ತಂದೆ ಮತ್ತಷ್ಟು ಆಘಾತಗೊಂಡಿದ್ದಾರೆ.

ಈ ಕಡೆಯಿಂದ ಹೆಲರಾಮ್​ ತನ್ನ ಮಗನ ಜತೆಗೆ ಹೆಚ್ಚು ಮಾತನಾಡಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಕೂಡಲೇ ಹೆಲರಾಮ್​ ಖಾಸಗಿ ಆ್ಯಂಬುಲೆನ್ಸ್​​(Ambulance) ಬುಕ್​ ಮಾಡಿ 230 ಕಿ.ಮೀ. ದೂರದಲ್ಲಿರುವ ಘಟನಾ ಸ್ಥಳಕ್ಕೆ ಹೋಗಿ ಮಗನನ್ನು ಹುಡುಕಾಡಿದ್ದ. ಆದರೆ, ಮಗನು ಗಾಯಾಳುಗಳ ನಡುವೆ ಸಿಗದಿದ್ದಾಗ ದಿಕ್ಕುತೋಚದ ಹೆಲರಾಮ್​ ಅಧಿಕಾರಿಗಳಿಗೆ ಮಗನ ಕುರಿತು ಹೇಳಿದ್ದಾನೆ. ಅದಕ್ಕೆ ಉತ್ತರವಾಗಿ ಅವರು, ಮಗನನ್ನು ಶವಾಗಾರದಲ್ಲಿ ಹುಡುಕುವಂತೆ ಹೇಳಿದ್ದಾರೆ. ಕೂಡಲೇ ತಾತ್ಕಾಲಿಕ ಶವಾಗಾರಕ್ಕೆ ತೆರಳಿದ ಹೆಲರಾಮ್​ ಅಲ್ಲಿನ ಸಿಬ್ಬಂದಿಗೆ ನಡೆದ ಘಟನೆ ಬಗ್ಗೆ ತಿಳಿಸಿ ಒಳ ನಡೆದು ಮಗನಿಗಾಗಿ ತಡಕಾಡಿದ್ದಾನೆ. ಕೊನೆಗೂ ಮಗನನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸಿದ್ದಾರೆ.

 

ಇದನ್ನು ಓದಿ: Shubman gill: ಸಾರಾ, ಸಾರಾಳನ್ನು ಬಿಟ್ಟು ನಿಹಾರಿಕಾಳ ಜತೆ ಶುಭ್‌ಮನ್ ಗಿಲ್‌ ರೊಮ್ಯಾಂಟಿಕ್ ಡೇಟ್! ತರಹೇವಾರಿ ಕಮೆಂಟಿಸಿದ ನೆಟ್ಟಿಗರು!!