Home Education Dress Code: ಜಾರಿಯಾಯ್ತು ಅಧ್ಯಾಪಕರಿಗೆ ಹೊಸ ಡ್ರೆಸ್ ಕೋಡ್ !

Dress Code: ಜಾರಿಯಾಯ್ತು ಅಧ್ಯಾಪಕರಿಗೆ ಹೊಸ ಡ್ರೆಸ್ ಕೋಡ್ !

Hindu neighbor gifts plot of land

Hindu neighbour gifts land to Muslim journalist

ಈವರೆಗೆ ಖಾಸಗಿ ಮತ್ತು ಸ್ವಾಯತ್ತ ವಿದ್ಯಾ ಸಂಸ್ಥೆಗಳು ಡ್ರೆಸ್ ಕೋಡ್ ಪಾಲಿಸುತ್ತಿದ್ದು, ಸದ್ಯ ಸರ್ಕಾರಿ ಶಾಲಾ ಕಾಲೇಜುಗಳಿಗೆ ಅದೇ ನಿಯಮವನ್ನು ಜಾರಿ ಮಾಡಲು ಮುಂದಾಗಿದೆ.
ತಮಿಳುನಾಡಿನ ಕಾಲೇಜುಗಳಲ್ಲಿ (Collage) ಅಧ್ಯಾಪಕರು ದೇಹ ಕಾಣದಂತೆ, ‘ಓವರ್ ಕೋಟ್’ (over coat) ಧರಿಸುವಂತೆ ಉನ್ನತ ಶಿಕ್ಷಣ ಇಲಾಖೆಯು ಆದೇಶಿಸಿದೆ. ತಮಿಳುನಾಡಿನ ಉನ್ನತ ಶಿಕ್ಷಣ ಇಲಾಖೆಯು ಕಾಲೇಜು ಶಿಕ್ಷಣ ನಿರ್ದೇಶನಾಲಯಕ್ಕೆ (ಡಿಸಿಇ) ಪತ್ರ ಬರೆದಿದ್ದು, ತಮಿಳುನಾಡಿನ ಎಲ್ಲಾ ಕಾಲೇಜುಗಳ ಪ್ರಾಧ್ಯಾಪಕರು ಓವರ್ ಕೋಟ್ ಧರಿಸುವಂತೆ ಹೇಳಲಾಗಿದೆ.


ಇನ್ನು ಮುಂದೆ ಕೇವಲ ಮಕ್ಕಳಿಗಷ್ಟೇ (Childrens) ಸಮವಸ್ತ್ರ ಕಡ್ಡಾಯವಲ್ಲ ಇವರ ಜೊತೆಗೆ ಶಿಕ್ಷಕರಿಗೂ ಈಗ ಹೊಸ ಡ್ರೆಸ್​​ ಕೋಡ್​ ಜಾರಿಯಾಗಿದ್ದು, ತಮಿಳುನಾಡಿನ ಶಾಲೆಗಳಲ್ಲಿ ವಿದ್ಯಾರ್ಥಿಗಳೊಟ್ಟಿಗೆ ಈಗ ಶಿಕ್ಷಕರೂ ಸಹ ಹೊಸ ಡ್ರೆಸ್​ ಕೋಡ್ (Dress Code)​ ಅನುಸರಿಸಲಿದ್ದಾರೆ

ಈ ಹೊಸ ನೀತಿಯ ಕುರಿತಾಗಿ ಸಾರ್ವಜನಿಕವಾಗಿ ಭಾರೀ ಚರ್ಚೆಗೆ ಕಾರಣವಾಗಿದೆ. ಶಿಕ್ಷಣ ಇಲಾಖೆಯ ಆದೇಶದಂತೆ ಈಗಾಗಲೇ ಖಾಸಗಿ, ಸ್ವಾಯತ್ತ ಶಿಕ್ಷಣ ಸಂಸ್ಥೆಗಳಲ್ಲಿ ಡ್ರೆಸ್ ಕೋಡ್ ಜಾರಿಯಲ್ಲಿದೆ. ತಮಿಳುನಾಡು ಸರ್ಕಾರ ಬರೆದ ಪತ್ರದಲ್ಲಿ ‘ಸಭ್ಯ ವಸ್ತ್ರ ಸಂಹಿತೆ’ ಎಂಬ ಪದವನ್ನು ಮಾತ್ರ ಬಳಸಲಾಗಿದ್ದು, ಹೊರತು ಪ್ರತ್ಯೇಕ ಮಾರ್ಗಸೂಚಿಗಳನ್ನು ತಿಳಿಸಿಲ್ಲ.

ಮಹಿಳಾ ಸಿಬ್ಬಂದಿ ಸೀರೆ ಧರಿಸಿ ತರಗತಿಗಳನ್ನು ತೆಗೆದುಕೊಳ್ಳುವಾಗ ಅವರು ಕಿರಿಕಿರಿ ಅನುಭವಿಸುವುದನ್ನು ತಪ್ಪಿಸಲು,ಜೊತೆಗೆ ಕೆಲವು ವಿದ್ಯಾರ್ಥಿಗಳು ಅವರನ್ನು ಚುಡಾಯಿಸದಂತೆ ನಿಲುವಂಗಿ ಅಥವಾ ಓವರ್ ಕೋಟ್ಗಳನ್ನು ಧರಿಸುವುದು ಒಳ್ಳೆಯದು ಎಂಬ ಮಾತುಗಳು ಪ್ರಾದ್ಯಾಪಕ ವರ್ಗದಿಂದ ಕೇಳಿ ಬರುತ್ತಿದೆ.

ಶಿಕ್ಷಣ ಇಲಾಖೆಯ ಹೊಸ ನೀತಿಗೆ ದ್ವಂದ್ವ ನಿಲುವುಗಳು ಏರ್ಪಟ್ಟಿದ್ದು, ಶಿಕ್ಷಣ ಇಲಾಖೆ ಬೋಧಕ ಸಿಬ್ಬಂದಿ ಡ್ರೆಸ್ ಕೋಡ್ ಗೆ ನೀತಿ ಸಂಹಿತೆಯನ್ನು ಬಿಡುಗಡೆ ಮಾಡಬೇಕು ಜೊತೆಗೆ ಟೈ ಧರಿಸದಿದ್ದಕ್ಕೆ ಎರಡು ವರ್ಷಗಳ ಹಿಂದೆ ರೂ. 500 ದಂಡ ಪಾವತಿಸಬೇಕಾಗುತ್ತಿತ್ತು. ಇದಲ್ಲದೆ, ಇಂತಹ ನೀತಿ ರೂಪಿಸುವಾಗ ಮೊದಲಿಗೆ ವಸ್ತ್ರ ಸಂಹಿತೆಯ ನಿಯಮಗಳನ್ನು ಇಲಾಖೆ ರೂಪಿಸಬೇಕು ಎಂಬ. ಅಭಿಪ್ರಾಯಗಳು ವ್ಯಕ್ತವಾಗಿವೆ.


ಸರ್ಕಾರಿ ಕಾಲೇಜುಗಳಲ್ಲಿ ಆಯಾಯ ವಿಭಾಗಗಳ ನಿರ್ದೇಶಕರು ಈ ಡ್ರೆಸ್ ಕೋಡ್ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ನಡುವೆ ಶಿಕ್ಷಣ ಇಲಾಖೆಯ ಈ ನೀತಿ ಸೂಚನೆಗೆ ಭಿನ್ನಾಭಿಪ್ರಾಯ ಕೂಡ ಇದೆ.
ಪ್ರೊಫೆಸರ್‌ಗಳು ತಮ್ಮ ದೇಹವನ್ನು ಮುಚ್ಚಿಕೊಳ್ಳಲು ಓವರ್‌ಕೋಟ್ ಧರಿಸಲು ಹೇಳುವುದು ಅವಮಾನಕರವಾಗಿದೆ ಎನ್ನಲಾಗುತ್ತಿದೆ. ಅಲ್ಲದೆ, ಮಕ್ಕಳಿಗೂ ಶಿಕ್ಷರಿಗೂ ಒಂದೇ ನೀತಿ ಜಾರಿಯದಂತಾಗಿ ಮಕ್ಕಳ ಅಪಹಾಸ್ಯಕ್ಕೆ ಈಡಾಗುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ. ತಮಿಳುನಾಡು‌ ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ಡ್ರೆಸ್ ಕೋಡ್ ನಿಯಮಕ್ಕೆ ಪರ-ವಿರೋಧ ವ್ಯಕ್ತವಾಗುತ್ತಿದೆ.

ಕೆಲವು ಖಾಸಗಿ ಮತ್ತು ಸ್ವಾಯತ್ತ ವಿದ್ಯಾ ಸಂಸ್ಥೆಗಳು ಈಗಾಗಲೇ ಈ ಡ್ರೆಸ್ ಕೋಡ್ ಪಾಲಿಸುತ್ತಿವೆ. ಸರ್ಕಾರಿ ಶಾಲಾ ಕಾಲೇಜುಗಳಿಗೆ ಅದೇ ನಿಯಮವನ್ನು ಜಾರಿ ಮಾಡಲು ಹೊರಟಿರುವುದರಿಂದ ಇದು ಎಷ್ಟರ ಮಟ್ಟಿಗೆ ಯಶಸ್ವಿ ಯಾಗಲಿದೆ ಎನ್ನುವ ಪ್ರಶ್ನೆ ಸಹಜವಾಗಿ ಮೂಡಿಸಿದೆ. ಇದಲ್ಲದೆ, ಈ ನಿಯಮದ ಕುರಿತು ದ್ವಂದ್ವ ನಿಲುವುಗಳು ಏರ್ಪಟ್ಟಿರುವುದರಿಂದ ಶಿಕ್ಷಣ ಇಲಾಖೆ ಏನು ಕ್ರಮ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.