Home Interesting ಹೊಸ ಕಾರು ಖರೀದಿಸಿ ಲಾಂಗ್ ಡ್ರೈವ್ ಹೋಗುತ್ತಿದ್ದ ಲೇಡಿ ಗ್ಯಾಂಗ್ ಮಾಡುತ್ತಿದ್ದದ್ದು ಮಾತ್ರ ಕಳ್ಳತನ !!...

ಹೊಸ ಕಾರು ಖರೀದಿಸಿ ಲಾಂಗ್ ಡ್ರೈವ್ ಹೋಗುತ್ತಿದ್ದ ಲೇಡಿ ಗ್ಯಾಂಗ್ ಮಾಡುತ್ತಿದ್ದದ್ದು ಮಾತ್ರ ಕಳ್ಳತನ !! | ಕಾರಲ್ಲೇ ಕಬ್ಬಿಣದ ರಾಡ್ ಇಟ್ಟುಕೊಂಡು ಹೆದ್ದಾರಿ ಬದಿಯ ಅಂಗಡಿಗಳಿಗೆ ಹಾಕುತ್ತಿದ್ದರು ಕನ್ನ | ಈ ಖತರ್ನಾಕ್ ಕಳ್ಳಿಯರ ತಂಡ ಕೊನೆಗೂ ಪೊಲೀಸ್ ಬಲೆಗೆ

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ಹೊಸ ಕಾರು ಖರೀದಿಸಿದ ಮೇಲೆ ಲಾಂಗ್
ಡ್ರೈವ್ ಹೋಗೋದು ಸಾಮಾನ್ಯ. ಆದ್ರೆ ಈ ಖತರ್ನಾಕ್ ಲೇಡಿ ಗ್ಯಾಂಗ್ ತಮ್ಮ ಶೋಕಿಗಾಗಿ ಕಾರು ಖರೀದಿಸಿ ಕಳ್ಳತನ ಮಾಡುತ್ತಿದ್ದು,ಬೆಂಗಳೂರಿನ ದೇವನಹಳ್ಳಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತೆಲಂಗಾಣ ರಾಜ್ಯದ ಪ್ರಕಾಶಂ ಜಿಲ್ಲೆಯ
ಸುಮಲತಾ (24), ಅಂಕಮ್ಮ (30), ರಮ್ಯಾ(19)
ಇಸ್ಮಾಯಿಲ್ (19) ಬಂಧಿತ ಆರೋಪಿಗಳು.

ಬಂಧಿತ ಆರೋಪಿಗಳಲ್ಲಿ ಸುಮಲತಾ ಹಾಗೂ
ರಮ್ಯಾ ಇಬ್ಬರು ಸ್ನೇಹಿತೆಯರಾಗಿದ್ದು ಶೋಕಿಗಾಗಿ
ಹೊಸ ಕಾರು ಖರೀದಿಸಿದ್ದರು.ಹೈದರಾಬಾದ್ ನಿಂದ ಬೆಂಗಳೂರು ಕಡೆಗೆ ಬಂದಿದ್ದ ಈ ಗ್ಯಾಂಗ್ ಶೋಕಿಗಾಗಿ ಲಾಂಗ್ ಡ್ರೈವ್ ಮಧ್ಯೆ ಹೆದ್ದಾರಿ ಬದಿಗಳಲ್ಲಿ ಸಿಕ್ಕ
ಅಂಗಡಿಗಳಲ್ಲಿ ಕಳ್ಳತನ ಮಾಡಿದ್ದರು.

ದೇವನಹಳ್ಳಿ ಬಳಿ ಬೆಳಗಿನ ಜಾವ ಹೆದ್ದಾರಿ ಬದಿ
ಅಂಗಡಿಗೆ ಕನ್ನ ಹಾಕುವ ವೇಳೆ ಬೀಟ್ ಪೊಲೀಸರ
ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.ಬಂಧಿತರಿಂದ ವ್ಯಾಗನಾರ್ ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ರಾಡ್‌ಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ದೇವನಹಳ್ಳಿ ನಗರ
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.