Home Karnataka State Politics Updates ಮೋದಿ ಭಾಷಣ ಮಾಡೋ ಕೆಂಪುಕೋಟೆಯನ್ನು ಕಟ್ಟಿದ್ದು ಮುಸ್ಲಿಮರು : ಸಿಎಂ ಇಬ್ರಾಹಿಂ

ಮೋದಿ ಭಾಷಣ ಮಾಡೋ ಕೆಂಪುಕೋಟೆಯನ್ನು ಕಟ್ಟಿದ್ದು ಮುಸ್ಲಿಮರು : ಸಿಎಂ ಇಬ್ರಾಹಿಂ

Hindu neighbor gifts plot of land

Hindu neighbour gifts land to Muslim journalist

ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ರವರು ಮಾನ್ಯ ನರೆಂದ್ರ ಮೋದಿ ಹಾಗೂ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ದ ಹರಿಹಾಯ್ದಿದ್ದಾರೆ. ಮೋದಿ (Narendra Modi) ನಿಂತು ಭಾಷಣ ಮಾಡುವ ಕೆಂಪು ಕೋಟೆ (Red Fort) ಯನ್ನು ಮುಸ್ಲಿಮರು ಕಟ್ಟಿಸಿದ್ದು ಇದನ್ನು ಪ್ರತಾಪ್ ಸಿಂಹ (Pratap Simha) ಒಡೆಸಿಬಿಡುತ್ತಾನಾ ಎಂದು ಪ್ರಶ್ನಿಸಿ ಸಂಸದರ ವಿರುದ್ಧ ಏಕ ವಚನದಲ್ಲಿಯೇ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ (CM Ibrahim) ವಾಗ್ದಾಳಿ ನಡೆಸಿದ್ದಾರೆ.

ಮೈಸೂರು ಸಾಂಸ್ಕೃತಿಕ ನಗರಿ, ವಿದ್ಯಾನಗರಿಯಾಗಿದ್ದು, ಇದನ್ನು ಸಂಸದ ಪ್ರತಾಪ್ ಸಿಂಹ ಅಜ್ಞಾನದ ಕಡೆ ಕರೆದುಕೊಂಡು ಹೋಗುತ್ತಿದ್ದಾನೆ. ಟಿಪ್ಪು (Tippu Sultan) ನಿಜ ಕನಸುಗಳು ಪುಸ್ತಕದಲ್ಲಿ ಟಿಪ್ಪುವಿನ ಕುರಿತಾಗಿ ಕೆಟ್ಟದಾಗಿ ತೋರ್ಪಡಿಸುವ ಷಡ್ಯಂತ್ರ ನಡೆಯುತ್ತಿದೆ. ಇದನ್ನು ತಡೆಯಲು ಕೋರ್ಟ್ ಮೊರೆ ಹೋಗುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರತಾಪ್ ಸಿಂಹ, ಟಿಪ್ಪು ನಂಜುಡೇಶ್ವರನಿಗೆ ಕೊಟ್ಟ ಪಂಚ ವಜ್ರ ವಾಪಸ್ ಪಡೆದುಕೊಳ್ಳುತ್ತಾನಾ.? ಮೋದಿ ನಿಂತು ಭಾಷಣ ನಾಡುವ ಕೆಂಪು ಕೋಟೆಯನ್ನು ಮುಸ್ಲಿಮರು ಕಟ್ಟಿಸಿದ್ದು, ಇದನ್ನು ಪ್ರತಾಪ ಸಿಂಹ ಒಡೆಸಿಬಿಡುತ್ತಾನಾ ಎಂದು ಪ್ರಶ್ನಿಸಿದ್ದು, ಬಿಜೆಪಿಯವರು ಮುಸ್ಲಿಮರು ಗೌಡ್ರಿಗೆ ಜಗಳ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದರ ವಿರುದ್ಧ ಕಿಡಿ ಕಾರಿದ್ದಾರೆ.

ಇದೇ ಸಂದರ್ಭದಲ್ಲಿ ಟಿಪ್ಪು ಪ್ರತಿಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರತಿಮೆಗೆ ನಮ್ಮಲ್ಲಿ ಅವಕಾಶವಿಲ್ಲ ಜೊತೆಗೆ ಪೂಜೆ ಮಾಡುವ ಕುಂಕುಮ ಹಚ್ಚುವ ಸಂಪ್ರದಾಯ ನಮ್ಮಲ್ಲಿ ಇಲ್ಲವೆಂದು ಹೇಳಿದ್ದು, ಟಿಪ್ಪು ಪ್ರತಿಮೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ತನ್ವೀರ್ ಸೇಠ್‌ (Tanveer Sait) ಗೆ ಏನೂ ಗೊತ್ತಿಲ್ಲ ಜೊತೆಗೆ ಬದಲಾಗಬೇಕು ಎಂಬ ಮಾತ್ರಕ್ಕೆ ಧರ್ಮ ಬದಲಾಯಿಸಲು ಸಾಧ್ಯವಿಲ್ಲ. ಚುನಾವಣೆಗಾಗಿ ಧರ್ಮ ಬದಲಾವಣೆ ಮಾಡೋಕೆ ಆಗುತ್ತದೆಯೆ ಎಂದು ಪ್ರಶ್ನಿಸಿದ್ದಾರೆ.

ಟಿಪ್ಪು ಜಯಂತಿ ಮಾಡಿದ್ದೆ ದೊಡ್ಡ ತಪ್ಪು!! ಮುಸ್ಲಿಮರಲ್ಲಿ ಜಯಂತಿ, ಮೆರವಣಿಗೆಗೆ ಅವಕಾಶವಿಲ್ಲ ಅಲ್ಲದೆ, ನಾನು ಟಿಪ್ಪು ಜಯಂತಿ ಬೇಡ ಎಂದು ಹೇಳಿದ್ದೇನೆ. ಮತದ ಕಾರಣ ಟಿಪ್ಪು ಜಯಂತಿ ಮಾಡಿದ್ದಾರೆ ಅಲ್ಲದೆ, ಟಿಪ್ಪು ಪ್ರತಿಮೆ ಪ್ರಸ್ತಾಪವನ್ನು ನಮ್ಮ ಧರ್ಮ ಒಪ್ಪುವುದಿಲ್ಲ ಹಾಗೂ ಮುಸ್ಲಿಮರಲ್ಲಿ ಎಲ್ಲೂ ಈ ರೀತಿ ಬದಲಾವಣೆಗೆ ಅವಕಾಶವೇ ಇಲ್ಲ ಎಂದಿದ್ದಾರೆ.