Home latest ಪತಿಯ ಕಿರಿ-ಕಿರಿ ತಾಳಲಾರದೆ ಪುಟ್ಟ ಕಂದನ ಜೊತೆ ಬಾವಿಗೆ ಹಾರಿದ ಅಮ್ಮ ಬದುಕುಳಿದಳು|ಮಗುವಿನ ಸಾವಿನ ವಿಚಾರ...

ಪತಿಯ ಕಿರಿ-ಕಿರಿ ತಾಳಲಾರದೆ ಪುಟ್ಟ ಕಂದನ ಜೊತೆ ಬಾವಿಗೆ ಹಾರಿದ ಅಮ್ಮ ಬದುಕುಳಿದಳು|ಮಗುವಿನ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಪುನಃ ಆತ್ಮಹತ್ಯೆಗೆ ಯತ್ನ

Hindu neighbor gifts plot of land

Hindu neighbour gifts land to Muslim journalist

ತುಮಕೂರು: ಎರಡು ವರ್ಷದ ಪುಟ್ಟ ಕಂದನ ಜೊತೆಗೆ ತಾಯಿಯೋರ್ವಳು ಬಾವಿಗೆ ಹಾರಿದ್ದು, ಮಗು ಸಾವಣ್ಣಪ್ಪಿರುವ ಆಘಾತಕಾರಿ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರು ಹೋಬಳಿಯ ಕೆಂಕೆರೆ ಗ್ರಾಮದಲ್ಲಿ ನಡೆದಿದೆ.

ಪ್ರೇಮಾ ಎಂಬ 30 ವರ್ಷದ ಮಹಿಳೆ ಎರಡು ವರ್ಷದ
ಹೆಣ್ಣುಮಗುವಿನ ಜತೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಬಾವಿಗೆ
ಜಿಗಿದಿದ್ದಾರೆ. ಆದರೆ ಪ್ರೇಮಾ ಬದುಕಿ ಉಳಿದಿದ್ದು, ಮಗು
ಮೃತಪಟ್ಟಿದೆ.

ಪತಿ ಜಗದೀಶ್ ಅವರ ಕಿರುಕುಳ ತಾಳಲಾರದೆ ಪತ್ನಿ ಪ್ರೇಮಾ ಮಗುವಿನ ಜತೆ ಬಾವಿಗೆ ಹಾರಿದ್ದಾರೆ ಎಂದು ತಿಳಿದು ಬಂದಿದೆ. ಬಾವಿಗೆ ಹಾರಿದ ಇವರನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು,ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿ ತಾಯಿ ಮತ್ತು ಮಗುವನ್ನು ಮೇಲಕ್ಕೆ ಎತ್ತಿದ್ದಾರೆ.ಆದರೆ ಅದಾಗಲೇ ಕಂದಮ್ಮ ಮೃತಪಟ್ಟಿತ್ತು.

ಆದರೆ ಪ್ರೇಮಾ ಅವರಿಗೆ ಎಚ್ಚರ ಆದಾಗ ಮಗು ಮೃತಪಟ್ಟಿರುವ ಬಗ್ಗೆ ತಿಳಿದಿದೆ. ಇದರಿಂದ ಆಘಾತಗೊಂಡ ಅವರು, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆ ಕೂಡಲೇ ಅವರನ್ನು ರಕ್ಷಿಸಲಾಗಿದ್ದು, ನಿಮಾನ್ಸ್‌ಗೆ
ದಾಖಲಿಸಿದ್ದಾರೆ.ಈ ಸಂಬಂಧ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.