Home News Mixer Blast in Hassan: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್‌ ಪ್ರಕರಣ ಮಾಸುವ ಮುನ್ನವೇ, ಹಾಸನದಲ್ಲಿ...

Mixer Blast in Hassan: ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್‌ ಪ್ರಕರಣ ಮಾಸುವ ಮುನ್ನವೇ, ಹಾಸನದಲ್ಲಿ ಮಿಕ್ಸರ್‌ ಸ್ಫೋಟ!

Hindu neighbor gifts plot of land

Hindu neighbour gifts land to Muslim journalist

ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್‌ ಪ್ರಕರಣ ಮಾಸುವ ಮುನ್ನವೇ ಇಲ್ಲೊಂದು ಅಂತಹದೇ ಆಶ್ಚರ್ಯಕರ ಘಟನೆ ಸಂಭವಿಸಿದೆ. ಕೊರಿಯರ್ ಶಾಪ್​​ ಗೆ ಪಾರ್ಸಲ್​ ಬಂದಿದ್ದ ಮಿಕ್ಸಿ ಸ್ಫೋಟಗೊಂಡಿರುವ ಆಘಾತಕಾರಿ ಘಟನೆ ಹಾಸನದಲ್ಲಿ ನಡೆದಿದೆ. ಈ ಘಟನೆಯಿಂದ ಶಾಪ್ ಮಾಲೀಕ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ನಗರದ ವ್ಯಕ್ತಿಯೊಬ್ಬ ಮಿಕ್ಸಿ ಡೆಲಿವರಿ ಮಾಡಿದ್ದು, ಡಿಟಿಡಿಸಿ ಕೊರಿಯರ್ ಗೆ ಮಿಕ್ಸಿ ಪಾರ್ಸಲ್ ಬಂದಿತ್ತು. ಆದರೆ ವ್ಯಕ್ತಿ ಪಾರ್ಸಲ್ ಪಡೆದು ಎರಡು ದಿನಗಳ‌ ಬಳಿಕ ಅದನ್ನು ವಾಪಾಸ್ಸು ಕೊರಿಯರ್ ಶಾಪ್ ಗೆ ಹಿಂತಿರುಗಿಸಿದ್ದರು. ಕಾರಣ ತನಗೆ ಆ ಪಾರ್ಸಲ್ ಬೇಡ ಎಂದು ವ್ಯಕ್ತಿ ತಿಳಿಸಿದ್ದಾರೆ. ಮಿಕ್ಸಿ ವಾಪಾಸ್ಸು ಪಡೆದು ಅದನ್ನು ಪರಿಶೀಲನೆ ನಡೆಸಲು ಶಾಪ್ ಮಾಲೀಕ ಆನ್ ಮಾಡಿದ್ದಾರೆ. ಈ ವೇಳೆ ಮಿಕ್ಸಿ ಸ್ಫೋಟಗೊಂಡಿದ್ದು, ಸ್ಫೋಟದ ತೀವೃತೆಗೆ ಕೊರಿಯರ್ ಶಾಪ್ ನ ಗ್ಲಾಸ್ ಒಡೆದು ಹೋಗಿದೆ ಹಾಗೂ ಗೋಡೆಗೆ ಹಾನಿಯಾಗಿದ್ದು, ಶಾಪ್ ಮಾಲೀಕ ಶಶಿ ಅವರ ಬಲಗೈ, ಹೊಟ್ಟೆ ಮತ್ತು ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ನಡೆಯುತ್ತಿದೆ.

ಅಲ್ಲದೆ, ಕೊರಿಯರ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಬ್ಲಾಸ್ಟ್ ಆದ ಮಿಕ್ಸಿಯ ಬ್ಲೇಡ್​​ ಹಾಗೂ ಅದರ ಇತರ ಭಾಗಗಳು ದೇಹಕ್ಕೆ ತಾಗಿ ಗಾಯಗಳಾಗಿದೆ. ಈ ಘಟನೆ ಸಂಜೆ ಸುಮಾರು 7:30ರ ವೇಳೆಗೆ ನಡೆದಿದ್ದು, ಇದೀಗ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಸ್​ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಈ ಪ್ರಕರಣವನ್ನು ಎಲ್ಲಾ ಕೋನಗಳಲ್ಲೂ ತನಿಖೆ ನಡೆಸಲಾಗುತ್ತಿದೆ. ಶಾರ್ಟ್ ಸರ್ಕ್ಯೂಟ್ ಆಗಿರಬಹುದೇ ಅಥವಾ ಬೇರೆ ಏನಾದರೂ ಕಾರಣ ಇರಬಹುದೇ. ಇದರ ಹಿಂದೆ ಬೇರೇನಾದರೂ ಸಂಚು ಇರಬಹುದೇ ಎಂಬುದನ್ನು ಪರಿಶೀಲನೆ ನಡೆಸುತ್ತೇವೆ. ಮೈಸೂರಿನಿಂದ ಎಫ್.ಎಸ್.ಎಲ್ ತಂಡದವರು ಆಗಮಿಸಲಿದ್ದು, ತನಿಖೆಯ ಬಳಿಕ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.