Home Latest Health Updates Kannada Viral Marriage : ವಧುವನ್ನು ನೋಡಲು ಕೋಣೆಗೆ ಬಂದ ವರ | ಅಷ್ಟೇ ಮದುವೆ ಕ್ಯಾನ್ಸಲ್‌...

Viral Marriage : ವಧುವನ್ನು ನೋಡಲು ಕೋಣೆಗೆ ಬಂದ ವರ | ಅಷ್ಟೇ ಮದುವೆ ಕ್ಯಾನ್ಸಲ್‌ ! ಅಷ್ಟಕ್ಕೂ ಆತ ಕಂಡಿದ್ದೇನು?

Hindu neighbor gifts plot of land

Hindu neighbour gifts land to Muslim journalist

ಒಂದು ಮದುವೆ ಸುಸೂತ್ರವಾಗಿ ನಡೆಯುವ ಮುನ್ನ ಸಾವಿರಾರು ವಿಘ್ನಗಳಂತೆ. ಹೌದು ಮದುವೆ ಯಾವ ಕ್ಷಣದಲ್ಲಿ ಯಾವ ಕಾರಣಕ್ಕೆ ನಿಲ್ಲಬಹುದು ಎಂಬುದು ಊಹಿಸಲು ಸಹ ಸಾಧ್ಯ ಇಲ್ಲ. ಇಲ್ಲೊಂದು ಮದುವೆಯಲ್ಲಿ ವಿಚಿತ್ರ ಸಂಗತಿ ನಡೆದಿದೆ. ಮದುವೆ ಮನೆ ಅಂದ್ರೆ ಅಲ್ಲಿ ಎಲ್ಲರೂ ಸಖತ್​ ಬ್ಯುಸಿ ಇರ್ತಾರೆ. ಅವರವರ ಕೆಲಸಗಳಲ್ಲಿ ಮಗ್ನರಾಗಿರುತ್ತಾರೆ. ಶಾಸ್ತ್ರ ಮತ್ತು ಮುಹೂರ್ತಕ್ಕೆ ಸರಿಯಾಗಿ ಕಾರ್ಯಗಳು ಆಗಬೇಕು ಅಂತ ಗಡಿಬಿಡಿಯಲ್ಲಿ ಇರುತ್ತಾರೆ.

ಹಾಗೆಯೇ ಉತ್ತರ ಪ್ರದೇಶದಲ್ಲಿ ಒಂದು ಮದುವೆ ದಿನ ಹಸಮಣೆಗೆ ವಧು ಮತ್ತು ವರನು ಹೋಗುವ ಮುನ್ನ ಮದುಮಗಳು ತನ್ನ ಡ್ರೆಸ್ಸಿಂಗ್​ ಕೋಣೆಯಲ್ಲಿ ರೆಡಿ ಆಗುತ್ತಾ ಇರುತ್ತಾಳೆ. ಆಗ ಮದುಮಗನಿಗೆ ತನ್ನ ಹುಡುಗಿಯನ್ನು ನೋಡಬೇಕು ಎಂಬ ಆಸೆ ಆಗಿದ್ದು ಒಂದು ಬಾರಿ ಡ್ರೆಸ್ಸಿಂಗ್​ ರೂಮ್​ನತ್ತ ವರನು ಹೋಗುತ್ತಾನೆ. ಆಗ ಯಾರು ಏನು ಹೇಳೋದು ಇಲ್ಲ. ಇದಾದ ನಂತರ ಮತ್ತೊಮ್ಮೆ ಆ ಡ್ರೆಸ್ಸಿಂಗ್​ ರೂಮ್​ ಬಳಿ ಬರುತ್ತಾರೆ. ಆದರೆ, ನಿಜಕ್ಕೂ ಆತ ತನ್ನ ಮದುವೆ ಆಗುವ ಹುಡುಗಿಯನ್ನು ನೋಡೋ ಆತುರದಲ್ಲಿ ಬರುತ್ತಾನೆ. ಆದರೆ ಈಕೆಯ ಮನೆಯವರಿಗೆ ಮದುಮಗನ ನಡವಳಿಕೆ ಯಾಕೋ ಇಷ್ಟ ಆಗೋದಿಲ್ಲ. ಒಂದು ಬಾರಿ ಹೇಳುತ್ತಾರೆ. ಮುಹೂರ್ತ ಹತ್ತಿರ ಬಂತು ಮಂಟಪದಲ್ಲಿಯೇ ನೋಡಿ, ರೂಮ್​ ಬಳಿ ಬರಬೇಡಿ ಎಂದು ಆದರೂ ಸಹ ಮತ್ತೇ ಮತ್ತೇ ಮದುಮಗ ವಧುವಿನ ಕೋಣೆಗೆ ಹೋಗುತ್ತಲೇ ಇರುತ್ತಾನೆ.

ಇದಾದ ನಂತರ ಹುಡುಗಿಯೇ ಒಂದು ಬಾರಿ ಜೋರು ಮಾಡುತ್ತಾಳೆ. ಮತ್ತೊಮ್ಮೆ ಹೋಗುವಾಗ ಹುಡುಗನ ತಂದೆ ಕಪಾಲ ಮೋಕ್ಷ ಮಾಡಿ ಬಿಡುತ್ತಾನೆ. ಎಲ್ಲರ ಮುಂದೆ ನನ್ನ ಮರ್ಯಾದೆಯನ್ನು ತೆಗೆಯಬೇಡ, ಮಂಟಪದಲ್ಲಿಯೇ ನೋಡು ಅಂತ ಎಲ್ಲರ ಸಮ್ಮುಖದಲ್ಲಿ ಕಪಾಲಕ್ಕೆ ಹೊಡೆಯುತ್ತಾನೆ. ಇದರಿಂದ ಕೋಪಕ್ಕೆ ಒಳಗಾಗಿ ಅಲ್ಲಿಯೊಂದು ದೊಡ್ಡದಾಗಿಯೇ ಜಗಳವಾಗುತ್ತದೆ. ಇದರಿಂದ ಮದುಮಗಳ ಕುಟುಂಬಕ್ಕೆ ಅಸಹ್ಯವಾಗುತ್ತೆ. ಹಾಗೆಯೇ ಈ ಮದುವೆ ಮನೆಯನ್ನು ರದ್ದು ಮಾಡಿ ತಮ್ಮ ಪಾಡಿಗೆ ಹೊರಟು ಹೋಗುತ್ತಾರೆ.

ಹೌದು ಮದುವೆ ಅನ್ನೋದು ಎರಡು ಕುಟುಂಬಗಳ ಮರ್ಯಾದೆ ಪ್ರಶ್ನೆಯು ಹೌದು. ಹಾಗಾಗಿ ಮದುವೆ ವಿಚಾರದಲ್ಲಿ ತಾಳ್ಮೆಯಿಂದ ಇರುವುದು ಬಹಳ ಮುಖ್ಯವಾಗಿದೆ. ಸದ್ಯ ಇಲ್ಲಿ ಮದುಮಗನ ಸಣ್ಣ ಅವಸರವೇ ತನ್ನ ಮದುವೆ ಮುರಿದು ಹೋಗಲು ಕಾರಣ ಆಗಿದೆ. ಆದ್ದರಿಂದ ನೀವು ಸಹ ಮದುವೆ ಆಗುವ ಯೋಚನೆಯಲ್ಲಿ ಇದ್ದರೆ ಇಂತಹ ಎಡವಟ್ಟು ಮಾಡಿಕೊಳ್ಳದಿರಿ.